»   » ಅಂದು ಕನ್ನಡಿಗರನ್ನ ಹೀಯಾಳಿಸಿದ್ದ ವರ್ಮಾ ಇಂದು ಮಾಡಿದ್ದೇನು.?

ಅಂದು ಕನ್ನಡಿಗರನ್ನ ಹೀಯಾಳಿಸಿದ್ದ ವರ್ಮಾ ಇಂದು ಮಾಡಿದ್ದೇನು.?

Posted By:
Subscribe to Filmibeat Kannada

ರಾಮ್ ಗೋಪಾಲ್ ವರ್ಮಾ ಹೇಳಿಕೆಗಳೇ ಹೀಗೆ ಚಿತ್ರರಂಗದಲ್ಲಿ ಸೆನ್ಸೆಷ್ನಲ್ ಹುಟ್ಟು ಹಾಕುತ್ತವೆ. ಅದು ಪಾಸಿಟೀವ್ ಆಗಿರಬಹುದು, ನೆಗಿಟೀವ್ ಆಗಿರಬಹುದು. ಒಟ್ನಲ್ಲಿ ವರ್ಮಾ ಏನಾದರೂ ಹೇಳಿದ್ರಂದ್ರೆ ಅದು ಮರುದಿನವೇ ಎಲ್ಲ ಪೇಪರ್ ಗಳಲ್ಲೂ ಹೆಡ್ ಲೈನ್.

ಈಗ ವರ್ಮಾ ಅವರ ಇಂತಹದ್ದೇ ಹೇಳಿಕೆಯೊಂದು ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದೆ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗವನ್ನ ಮತ್ತು ಕನ್ನಡ ಪ್ರೇಕ್ಷಕರನ್ನ ಹೀಯಾಳಿಸಿದ್ದ ಆರ್.ಜಿ.ವಿ ಈಗ ಕನ್ನಡ ನಟಿಯೊಬ್ಬಳ ಅಭಿನಯಕ್ಕೆ ಮನಸೋತ ಹೋಗಿದ್ದಾರೆ. ತೆರೆಮೇಲೆ ಈಕೆಯ ಫರ್ಫಾಮೆನ್ಸ್ ನೋಡಿ ಬಹುದೊಡ್ಡ ಆಫರ್ ಕೂಡ ನೀಡಿದ್ದಾರೆ.

ಇದೆಲ್ಲ ಆಗಿದ್ದು ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾವನ್ನ ವರ್ಮಾ ನೋಡಿದ ನಂತರ. ಹೌದು, ಬೆಂಗಳೂರಿನಲ್ಲಿ 'ಟಗರು' ಸಿನಿಮಾ ವೀಕ್ಷಿಸಿದ ಆರ್.ಜಿ.ವಿ ಮಾನ್ವಿತಾ ಹರೀಶ್ ಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ. ಹಾಗಿದ್ರೆ, ಅಂದು ಕನ್ನಡಿಗರಿಗೆ ಕೋಪ ಬರುವಂತೆ ವರ್ಮಾ ಏನು ಹೇಳಿದ್ದರು.? ಮುಂದೆ ಓದಿ....

'ಟಗರು' ನೋಡಿದ ವರ್ಮಾ ಹೇಳಿದ್ದೇನು.?

''ನಟಿ ಮಾನ್ವಿತಾ ತುಂಬ ಚೆನ್ನಾಗಿ ನಟಿಸಿದ್ದಾರೆ. ಮಾನ್ವಿತಾ ಕೇವಲ ಸಿನಿಮಾದಲ್ಲಿ ನಾಯಕಿ ಆಗಿಲ್ಲ. ತನ್ನ ನಟನ ಸಾಮರ್ಥ್ಯದಿಂದ ಆಕೆ ಶಾಕ್ ಕೊಟ್ಟಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ನನ್ನ ಚಿತ್ರಕ್ಕೆ ಆಕೆಗೆ ಅಡ್ವಾನ್ಸ್ ನೀಡುತ್ತೇನೆ. ಆಕೆ ಕೇಳುವ ಸಂಭಾವನೆಗಿಂತ ಹತ್ತು ಲಕ್ಷ ಹೆಚ್ಚು ಹಣ ಕೊಡುತ್ತೇನೆ.''

'ಟಗರು' ಮೇಲೆ ಬಿತ್ತು ಆರ್.ಜಿ.ವಿ ಕಣ್ಣು : ಮಾನ್ವಿತಾ ಬಗ್ಗೆ ವರ್ಮ ಕಮೆಂಟ್

ಅಂದು ರಾಮ್ ಗೋಪಾಲ್ ಟ್ವೀಟ್ ಮಾಡಿದ್ದೇನು.?

ಅಂದು, ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಬಾಹುಬಲಿ' ಸಿನಿಮಾ ಬಿಡುಗಡೆಯಾಗಿತ್ತು. ''ಕರ್ನಾಟಕದಲ್ಲಿ ತೆಲುಗು ಚಿತ್ರ ಬಾಹುಬಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇದು ಕನ್ನಡದ ದೊಡ್ಡ ಚಿತ್ರಗಳಿಗಿಂತ ದೊಡ್ಡ ಗೆಲುವು. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರವೇನು ಅಲ್ಲ''

ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುವಂತೆ ಮಾಡಿದ ವರ್ಮ

ಪರಭಾಷೆ ನೋಡುವ ಕನ್ನಡಿಗರ ವಿರುದ್ಧ ಹೋರಾಡಿ!

''ಕನ್ನಡಿಗರು ಡಬ್ಬಿಂಗ್ ಚಿತ್ರಗಳ ವಿರುದ್ಧ ಹೋರಾಟ ಮಾಡಿದರು. ಆದ್ರೆ, ನೇರವಾಗಿ ಬಿಡುಗಡೆಯಾದ ಪರಭಾಷೆ ಚಿತ್ರಗಳನ್ನ ಕನ್ನಡಿಗರು ದೊಡ್ಡ ಮಟ್ಟದಲ್ಲಿ ನೋಡುತ್ತಿದ್ದಾರೆ. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಲ್ಲ. ಅವರಿಗೆ ಬೇಕಾಗಿರುವುದು ಉತ್ತಮ ಚಿತ್ರವಷ್ಟೇ''- ರಾಮ್ ಗೋಪಾಲ್ ವರ್ಮ, ನಿರ್ದೇಶಕ

ಕನ್ನಡಿಗರ ವಿರುದ್ಧವೇ ಕನ್ನಡಿಗರು ಹೋರಾಡಿ!

''ಹೆಮ್ಮೆಯ ಕನ್ನಡಿಗರು, ಕನ್ನಡಿಗರ ವಿರುದ್ಧವೇ ಹೋರಾಡಿ. ಯಾಕಂದ್ರೆ, ಕನ್ನಡ ಸಿನಿಮಾಗಳಿಗಿಂತ ತೆಲುಗು ಚಿತ್ರವನ್ನ ಹೆಚ್ಚು ನೋಡುತ್ತಿದ್ದಾರೆ ಕನ್ನಡಿಗರು''

ಅಂದು ಹೀಯಾಳಿಸಿದರು, ಇಂದು ಹೊಗಳಿದರು

ಹೀಗೆ ಕಳೆದ ವರ್ಷ ಕನ್ನಡ ಸಿನಿಮಾ ಮತ್ತು ಕನ್ನಡ ಪ್ರೇಕ್ಷಕರನ್ನ ಹೀಯಾಳಿಸಿದ್ದ ರಾಮ್ ಗೋಪಾಲ್ ವರ್ಮಾ, ಈಗ ಕನ್ನಡ ಸಿನಿಮಾವನ್ನ ತ್ತು ಕನ್ನಡ ಕಲಾವಿದರ ಬಾಯ್ತುಂಬ ಹೊಗಳುತ್ತಿದ್ದಾರೆ. ಇದೇ ಕಾಲ ಅನ್ನೋದು. ಅಂದು ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಕಾಲೆಳೆದಿದ್ದ ವರ್ಮಾ ಇಂದು ತಲೆಗೆ ಇಟ್ಟುಕೊಂಡಿದ್ದಾರೆ.

English summary
South india famous director Ram Gopal Varma has taken his twitter account to appreciate Hatrick hero Shiva Rajkumar starrer Tagaru and actress manvitha harish.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X