»   » 'ಅರ್ಜುನ್ ರೆಡ್ಡಿ' ಗೆಟಪ್ ನಲ್ಲಿರುವ ಈ ನಿರ್ದೇಶಕ ಯಾರು?

'ಅರ್ಜುನ್ ರೆಡ್ಡಿ' ಗೆಟಪ್ ನಲ್ಲಿರುವ ಈ ನಿರ್ದೇಶಕ ಯಾರು?

Posted By:
Subscribe to Filmibeat Kannada

ಇತ್ತೀಚೆಗೆ ತೆಲುಗಿನಲ್ಲಿ 'ಅರ್ಜುನ್ ರೆಡ್ಡಿ' ಅಂತಹ ಒಂದು ಸಿನಿಮಾ ರಿಲೀಸ್ ಆಗಿ ಸಖತ್ ಸೌಂಡ್ ಮಾಡಿತ್ತು. ವಿಜಯ ದೇವರಕೊಂಡ ಈ ಚಿತ್ರದ ನಾಯಕನಾಗಿದ್ದರು. ಅಂದ್ಹಾಗೆ, ಈ ಚಿತ್ರವನ್ನ ಕನ್ನಡದಲ್ಲಿ ರೀಮೇಕ್ ಮಾಡುವ ಯೋಚನೆ ಮಾಡಿದ್ದು, ರಾಕಿಂಗ್ ಸ್ಟಾರ್ ಯಶ್ ಅವರನ್ನ ನಾಯಕರನ್ನಾಗಿಸುವ ಚಿಂತನೆ ಕೂಡ ನಡೆಯುತ್ತಿದೆ.

'ಅರ್ಜುನ್ ರೆಡ್ಡಿ' ರೀಮೇಕ್ ಬಗ್ಗೆ ಯಶ್ ಹೇಳೋದೇ ಬೇರೆ.!

ಈ ಚಿತ್ರದಲ್ಲಿ ನಾಯಕನ ರಗಡ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಹೇರ್ ಸ್ಟೈಲ್, ಗಡ್ಡಕ್ಕೆ ಫ್ಯಾನ್ಸ್ ಫಿದಾ ಆಗಿದ್ದರು. ಇದೀಗ ಈ ಅರ್ಜುನ್ ರೆಡ್ಡಿಯ ಗೆಟಪ್ ನಲ್ಲಿ ಭಾರತದ ಖ್ಯಾತ ನಿರ್ದೇಶಕರೊಬ್ಬರು ಫೋಸ್ ಕೊಟ್ಟಿದ್ದಾರೆ. ಇದು ಯಾರು ಎಂದು ಗುರುತಿಸಿ.

Ram Gopal Varma as a Arjun Reddy

ನೋಡೋದಕ್ಕೆ ಸ್ವಲ್ಪ ರಾಮ್ ಗೋಪಾಲ್ ವರ್ಮ ಅವರ ರೀತಿಯಲ್ಲೇ ಇದ್ದಾರೆ ಅಲ್ವಾ ಅಂತ ಕನ್ ಫ್ಯೂಸ್ ಆಗ್ಬೇಡಿ. ಇದು ಪಕ್ಕಾ ಆರ್.ಜಿ.ವಿ ಅವರೇ.

'NTR' ಕುರಿತು ಸಿನಿಮಾ: ಫಸ್ಟ್ ಲುಕ್ ನಲ್ಲೇ ವಿವಾದದ ಸುಳಿವು ಕೊಟ್ಟ ವರ್ಮ

ಸ್ಟಾರ್ ನಟರ ಸಿನಿಮಾ, ಅವರ ಗೆಟಪ್, ಅವರ ಡೈಲಾಗ್ ಗಳ ಬಗ್ಗೆ ಕಾಮೆಂಟ್ ಮಾಡುವ ವರ್ಮ, ಅರ್ಜುನ್ ರೆಡ್ಡಿ ಚಿತ್ರದ ನಾಯಕನಿಗೆ ಫಿದಾ ಆಗಿ, ಈ ರೀತಿ ತಮ್ಮ ಫೋಟೋವನ್ನ ಎಡಿಟಿಂಗ್ ಮಾಡಿ, ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

English summary
The new photo of Ram Gopal Varma is becoming viral on the social networking site.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X