ರಾಮ್ ಗೋಪಾಲ್ ವರ್ಮಾ ನನಗೆ ಮೋಸ ಮಾಡಿದ್ರು: ಷನ್ಮುಖಪ್ರಿಯ

Recommended Video

ಆರ್.ಜಿ.ವಿ ಮೋಸ ಮಾಡಿಬಿಟ್ರಂತೆ..! | Filmibeat Kannada

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಯಾವಾಗಲೂ ಬೇರೊಬ್ಬರ ಮೇಲೆ ಆರೋಪ, ದೂರು, ವಾಗ್ದಾಳಿ ಮಾಡುವ ವರ್ಮಾ ಈಗ ಯುವತಿಯೊಬ್ಬಳಿಂದ ಟಾರ್ಗೆಟ್ ಆಗಿದ್ದಾರೆ.

ಹೌದು, ದಕ್ಷಿಣ ಭಾರತವನ್ನ ನಡುಗಿಸಿದ್ದ ದಂತಚೋರ ವೀರಪ್ಪನ್ ಹತ್ಯೆ ವೇಳೆ ಪೊಲೀಸರಿಗೆ ನೆರವು ನೀಡಿದ್ದ ಷನ್ಮುಖಪ್ರಿಯ ಈಗ ಆರ್.ಜಿ.ವಿ ವಿರುದ್ಧ ಆರೋಪ ಮಾಡ್ತಿದ್ದಾರೆ.

ನಿರ್ದೇಶಕ ಆರ್.ಜಿ.ವಿಯಿಂದ ನನಗೆ ವಂಚನೆ ಆಗಿದೆ, ದಯವಿಟ್ಟು ನ್ಯಾಯ ಕೊಡಿಸಿ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಈ ಕಡೆ ರಾಮ್ ಗೋಪಾಲ್ ವರ್ಮಾ ಷನ್ಮುಖಪ್ರಿಯ ಕಡೆ ತಿರುಗಿ ಕೂಡ ನೋಡುತ್ತಿಲ್ಲ. ಅಷ್ಟಕ್ಕೂ, ವರ್ಮಾ ಮಾಡಿದ ವಂಚನೆ ಏನು.? ಷನ್ಮುಖ ಪ್ರಿಯ ಮಾಡುತ್ತಿರುವ ಆರೋಪವೇನು.? ಮುಂದೆ ಓದಿ....

ಯಾರು ಈ ಷನ್ಮುಖಪ್ರಿಯ.?

ಯಾರು ಈ ಷನ್ಮುಖಪ್ರಿಯ.?

ಕಾಡುಗಳ್ಳ ವೀರಪ್ಪನ್ ಹತ್ಯೆಯ ವೇಳೆ ಟಾಸ್ಕ್ ಫೋರ್ಸ್ ಗೆ ಮಾಹಿತಿ ನೀಡಿದ್ದೇ ಈ ಷನ್ಮುಖಪ್ರಿಯ. ವೀರಪ್ಪನ್ ಸೆರೆಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರದಿಂದ ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಲಾಗಿತ್ತು. ವೀರಪ್ಪನ್ ಕಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರ್ತಿದ್ದಾನೆ ಎಂದು ಮಾಹಿತಿ ನೀಡಿದ್ದು ಇದೇ ಷನ್ಮುಖಪ್ರಿಯ. ಈಕೆಯ ಮಾಹಿತಿಯ ಹಿನ್ನೆಲೆ ವೀರಪ್ಪನ್ ಎನ್ ಕೌಂಟರ್ ಮಾಡಲಾಗಿತ್ತು. ಈಕೆ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಸ್ನೇಹಿತೆ.

ಸರ್ಕಾರ ಬಹುಮಾನ ಕೊಡಲಿಲ್ಲ

ಸರ್ಕಾರ ಬಹುಮಾನ ಕೊಡಲಿಲ್ಲ

''ವೀರಪ್ಪನ್ ಎನ್ ಕೌಂಟರ್ ನಡೆದಾಗ ನನಗೆ 21 ವರ್ಷ ವಯಸ್ಸು. ಆ ಸಮಯದಲ್ಲಿ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರ ನನಗೆ ಬಹುಮಾನ ಘೋಷಿಸಿತ್ತು. ಈವರೆಗೂ ಅವರು ನೀಡಬೇಕಿದ್ದ ಪಾರಿತೋಷಕ ನನಗೆ ದೊರೆತಿಲ್ಲ. ಇದರ ಜೊತೆ ರಾಮ್ ಗೋಪಾಲ್ ವರ್ಮಾ ಕೂಡ ನನಗೆ ವಂಚಿಸಿದ್ದಾನೆ'' ಎಂದು ಷನ್ಮುಖಪ್ರಿಯ ಆರೋಪಿಸಿದ್ದಾರೆ.

'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ವೇಳೆ

'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ವೇಳೆ

''ವೀರಪ್ಪನ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡುವ ವೇಳೆ ನನ್ನನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡರು. ಇದಕ್ಕಾಗಿ ನನಗೆ ದೊಡ್ಡ ಮೊತ್ತದ ಸಂಭಾವನೆ ನೀಡುವುದಾಗಿ ಹೇಳಿದರು. ಒಂದು ಲಕ್ಷ ಮುಂಗಡ ಹಣ ಕೂಡ ನೀಡಿದ್ದರು. ಆದ್ರೆ, ಬಾಕಿ ಹಣವನ್ನ ನೀಡಲಿಲ್ಲ. ಬ್ಯಾಲೆನ್ಸ್ ಹಣ ಕೇಳಿದ್ರು, ನಾಳೆ, ನಾಡಿದ್ದು ಅಂತ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ'' ಎಂದು ಯುವತಿ ಹೇಳುತ್ತಿದ್ದಾರೆ.

ಕೋರ್ಟ್ ಮೊರೆ ಹೋದ ಷನ್ಮುಖಪ್ರಿಯ

ಕೋರ್ಟ್ ಮೊರೆ ಹೋದ ಷನ್ಮುಖಪ್ರಿಯ

''ರಾಮ್ ಗೋಪಾಲ್ ವರ್ಮಾ ಅವರಿಂದ ನನಗೆ ಬರಬೇಕಾದ ಬಾಕಿ ಮೊತ್ತ ಕೊಡಿಸಿ ಎಂದು ಕೋರ್ಟ್ ಗೆ ಹೋದೆ. ಅವರು ನೀಡಿದ್ದ ಅಗ್ರಿಮೆಂಟ್ ಆಧಾರವಾಗಿಟ್ಟುಕೊಂಡು ಪ್ರಕರಣ ದಾಖಲಿಸಿದೆ. ಸದ್ಯ, ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ'' ಎಂದು ಷನ್ಮುಖಪ್ರಿಯ ತಿಳಿಸಿದ್ದಾರೆ. ಅಂದು ಪ್ರಾಣದ ಭಯ ತೊರೆದು ಮಾಹಿತಿ ನೀಡಿದೆ. ಇಂದು ನಾನು ಕಷ್ಟದಲ್ಲಿದ್ದೇನೆ. ನನ್ನನ್ನು ಯಾರೂ ಕೂಡ ಗಮನಿಸುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

More from Filmibeat

English summary
Director and producer Ram Gopal Varma cheated me says shanmukhapriya. he was not paying full amount for giving more information about Veerappan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X