'ಸಂಜು' ನೋಡಿ ಬೇಸರಗೊಂಡ ವರ್ಮಾ ಕೊಟ್ರು ಬ್ರೇಕಿಂಗ್ ನ್ಯೂಸ್

By Bharath Kumar

ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ 'ಸಂಜು' ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಸದ್ಯ, 300 ಕೋಟಿ ಗಳಿಕೆ ಕಂಡಿರುವ ಈ ಸಿನಿಮಾ ಈ ವರ್ಷದ ದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ. ಹಾಗೂ ರಣ್ಬೀರ್ ಕಪೂರ್ ವೃತ್ತಿ ಜೀವನದಲ್ಲೇ ಇದು ಮೈಲಿಗಲ್ಲಾಗಿದೆ.

'ಸಂಜು' ಸಿನಿಮಾವನ್ನ ನೋಡಿ ಬಹುತೇಕರು ಖುಷಿ ಪಟ್ಟಿದ್ದು, ಸಂಜಯ್ ದತ್ ನಿಜ ಜೀವನ ಹೀಗಿತ್ತಾ ಎಂದು ಕುತೂಹಲದಿಂದ ನೋಡುತ್ತಿದ್ದಾರೆ. ಇನ್ನು ಕೆಲವರು ಇದು ದತ್ ಅವರನ್ನ ಅಮಾಯಕರನ್ನಾಗಿಸುವ ಉದ್ದೇಶದಿಂದ ಮಾಡಿರುವ ಸಿನಿಮಾ ಎಂದು ಟೀಕಿಸಿದ್ದರು.

ಇದೀಗ 'ಸಂಜು' ಸಿನಿಮಾದ ಬೇಸರ ವ್ಯಕ್ತಪಡಿಸಿರುವ ವರ್ಮಾ, ಸಂಜಯ್ ದತ್ ಅವರ ನಿಜ ಜೀವನವನ್ನ ತೆರೆಮೇಲೆ ತರುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. ಹೌದು, ರಾಜ್ಕುಮಾರ್ ಹಿರಾನಿಯ 'ಸಂಜು' ಸಿನಿಮಾದ ಇನ್ನೊಂದು ಭಾಗವೆಂಬಂತೆ ಸಿನಿಮಾ ಮಾಡಲಿದ್ದಾರೆ ಆರ್.ಜಿ.ವಿ. ಹಾಗಿದ್ರೆ, ವರ್ಮಾ ಮಾಡಲಿರುವ ಕಥೆ ಯಾವುದು.? ಮುಂದೆ ಓದಿ...

ಸಂಜು: ದಿ ರಿಯಲ್ ಸ್ಟೋರಿ

ಸಂಜು: ದಿ ರಿಯಲ್ ಸ್ಟೋರಿ

ರಾಜ್ ಕುಮಾರ್ ಹಿರಾನಿ ನಿರ್ದೇಶನದ 'ಸಂಜು' ಸಿನಿಮಾ ನೋಡಿದ ರಾಮ್ ಗೋಪಾಲ್ ವರ್ಮಾ ಸಿನಿಮಾವನ್ನ ಇಷ್ಟಪಟ್ಟಿದ್ದಾರೆ. ಆದ್ರೆ, ಸಂಜಯ್ ದತ್ ಜೀವನದಲ್ಲಿ ನಿಜವಾಗಲು ಎದುರಿಸಿದ ಕೆಲವು ಗಂಭೀರವಾದ ಘಟನೆಗಳನ್ನ ಬಗ್ಗೆ ಸಿನಿಮಾದಲ್ಲಿ ತೋರಿಸಿಲ್ಲ. ಹೀಗಾಗಿ, ಅದೇ ಅಂಶಗಳನ್ನಿಟ್ಟು ನಾನು ಸಿನಿಮಾ ಮಾಡ್ತೀನಿ ಎಂದು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಬಾಂಬ್ ಬ್ಲಾಸ್ಟ್ ಮತ್ತು ಗನ್ ಕಥೆ

ಬಾಂಬ್ ಬ್ಲಾಸ್ಟ್ ಮತ್ತು ಗನ್ ಕಥೆ

'ಸಂಜು: ದಿ ರಿಯಲ್ ಸ್ಟೋರಿ' ಎಂಬ ಹೆಸರಿನಲ್ಲಿ ವರ್ಮಾ ಸಿನಿಮಾ ಮಾಡಲು ಹೊರಟಿದ್ದಾರೆ. ಅಂದ್ಹಾಗೆ, ವರ್ಮಾ ಈ ಕಥೆಯಲ್ಲಿ ಎಲ್ಲವನ್ನು ಹೇಳುತ್ತಿಲ್ಲ. ಬದಲಾಗಿ ಕೇವಲ ಎರಡು ಪ್ರಮುಖ ಘಟನೆಗಳ ಸುತ್ತ ಸಿನಿಮಾ ಮಾಡ್ತಿದ್ದಾರೆ. 1993ರ ಮುಂಬೈ ಬಾಂಬ್ ಬ್ಲಾಸ್ಟ್ ಮತ್ತು ಪರವಾನಗಿ ಇಲ್ಲದೇ AK 56 ಗನ್ ಇಟ್ಟುಕೊಂಡಿದ್ದ ಪ್ರಕರಣವನ್ನ ತೆರೆಮೇಲೆ ತರಲು ಆರ್.ಜಿ.ವಿ ನಿರ್ಧರಿಸಿದ್ದಾರೆ.

ಸಂಶೋಧನೆ ಆರಂಭಿಸಿರುವ ಆರ್.ಜಿ.ವಿ

ಸಂಶೋಧನೆ ಆರಂಭಿಸಿರುವ ಆರ್.ಜಿ.ವಿ

ಈ ಚಿತ್ರಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಂಶೋಧನೆ ಆರಂಭಿಸಿದ್ದಾರೆ ಎನ್ನಲಾಗಿದೆ. ಸಂಜಯ್ ದತ್ ಅವರ ಆಪ್ತರು ಹಾಗೂ ಪೊಲೀಸ್ ಇಲಾಖೆಯ ಕೆಲವರ ಬಳಿ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರಂತೆ.

ದತ್ ಜೊತೆ ಎರಡು ಸಿನಿಮಾ ಮಾಡಿರುವ ವರ್ಮಾ

ದತ್ ಜೊತೆ ಎರಡು ಸಿನಿಮಾ ಮಾಡಿರುವ ವರ್ಮಾ

ಅಂದ್ಹಾಗೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಜೊತೆಯಲ್ಲಿ ಸಂಜಯ್ ದತ್ ಎರಡು ಸಿನಿಮಾ ಮಾಡಿದ್ದಾರೆ. 1997ರ 'Daud' ಮತ್ತು 2012ರಲ್ಲಿ ಬಿಡುಗಡೆಯಾಗಿದ್ದ 'ಡಿಪಾರ್ಟ್ ಮೆಂಟ್' ಸಿನಿಮಾ. ಈಗ ಅವರದ್ದೇ ಸಿನಿಮಾವನ್ನ ಪ್ರಮಾಣಿಕವಾಗಿ ಮಾಡಲು ಮುಂದಾಗಿದ್ದಾರೆ.

More from Filmibeat

English summary
Rajkumar Hirani's Sanju is busy minting money at the box office. The Ranbir Kapoor starrer has already crossed over Rs 300 crore and doesn't seem to be stopping anytime soon. However, Ram Gopal Varma is planning another Sanjay Dutt biopic, and the tentative title is Sanju: The Real Story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X