For Quick Alerts
  ALLOW NOTIFICATIONS  
  For Daily Alerts

  ಎನ್.ಟಿ.ಆರ್ ನಿಜವಾದ ಮಗ ವರ್ಮಾ: ಹೀಗೆ ಹೇಳಿದ್ದ ಒಬ್ಬ ನಟ

  |

  ತೆಲುಗು ಇಂಡಸ್ಟ್ರಿ ಹಾಗೂ ಆಂಧ್ರ ಪ್ರದೇಶ ಕಂಡ ಅತ್ಯುನ್ನತ ನಟ, ರಾಜಕಾರಣಿ ಎನ್.ಟಿ.ಆರ್. ಕನ್ನಡಕ್ಕೆ ರಾಜ್ ಕುಮಾರ್ ಹೇಗೋ, ತೆಲುಗಿನಲ್ಲಿ ಎನ್.ಟಿ.ಆರ್ ಹಾಗೆ. ಅಭಿಮಾನಿಗಳ ಪಾಲಿಗೆ ಅವರೇ ನಿಜವಾದ ಹೀರೋ ಮತ್ತು ದೇವರು.

  ಇಂತಹ ನಟನ ಜೀವನದಲ್ಲಾದ ಕೆಲವು ಘಟನೆಗಳನ್ನಿಟ್ಟು ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಇಂದು ರಿಲೀಸ್ ಆಗಿದ್ದು, ಎಲ್ಲರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

  ಅದರಲ್ಲೂ ಓರ್ವ ನಟ ನಿರ್ದೇಶಕ ವರ್ಮಾಗೆ ಒಂದು ಸಂದೇಶ ಕಳುಹಿಸಿದ್ದಾರೆ. ಈ ಸಂದೇಶ ಓದಿದ ಆರ್.ಜಿ.ವಿ 'ಇದು ನನ್ನ ವೃತ್ತಿ ಜೀವನದಲ್ಲೇ ಅತ್ಯುತ್ತಮ ಶ್ಲಾಘನೆ' ಎಂದಿದ್ದಾರೆ. ಅಷ್ಟಕ್ಕೂ, ವರ್ಮಾಗೆ ಸಿಕ್ಕ ಆ ಪ್ರತಿಕ್ರಿಯೆ ಏನು? ಆ ಪ್ರತಿಕ್ರಿಯೆ ನೀಡಿದ ನಟ ಯಾರು? ಮುಂದೆ ಓದಿ.....

  ನೀವು ನಿಜವಾದ ಎನ್.ಟಿ.ಆರ್ ಮಗ

  ನೀವು ನಿಜವಾದ ಎನ್.ಟಿ.ಆರ್ ಮಗ

  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎನ್.ಟಿ.ಆರ್ ಗೆ ನಿಜವಾದ ಮಗ ಅಂತೆ. ಲಕ್ಷ್ಮೀಸ್ ಎನ್.ಟಿ.ಆರ್ ಸಿನಿಮಾ ನೋಡಿದ ನಟನೊಬ್ಬ ಹೀಗಂತ ವರ್ಮಾಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನ ಆರ್.ಜಿ.ವಿ ಬಹಳ ಖುಷಿಯಿಂದ ಸ್ವೀಕರಿಸಿದ್ದು, ಇದು ನನ್ನ ವೃತ್ತಿ ಜೀವನದ ಅತ್ಯುತ್ತಮ ಪ್ರತಿಕ್ರಿಯೆ ಎಂದು ಬರೆದುಕೊಂಡಿದ್ದಾರೆ.

  ಟಿಡಿಪಿಗೆ ಟಾಂಗ್, ತೆಲಂಗಾಣ ಸೇರಿ ಎಲ್ಲೆಡೆ ಚಿತ್ರ ರಿಲೀಸ್ : ವರ್ಮಾ ಸವಾಲು

  ಯಾರು ಆ ನಟ?

  ಯಾರು ಆ ನಟ?

  ವರ್ಮಾಗೆ ಹೀಗೆಂದು ಪ್ರತಿಕ್ರಿಯೆ ನೀಡಿದ ನಟನ ಹೆಸರು ಹರ್ಷವರ್ಧನ್. ಈ ನಟನ ಬಗ್ಗೆ ಹೆಚ್ಚಿ ಮಾಹಿತಿ ಇಲ್ಲ. ಆದ್ರೆ, ವರ್ಮಾ ಬಗ್ಗೆ ಹೀಗೊಂದು ಕಾಮೆಂಟ್ ಮಾಡುವಷ್ಟು ಸಿನಿಮಾ ಆ ನಟನಿಗೆ ಇಷ್ಟವಾಗಿದೆ ಅನ್ನುವುದು ಇಲ್ಲಿ ಗಮನಿಸಬೇಕಾದ ವಿಷ್ಯ.

  Lakshmis ntr review: ಸಾಮಾನ್ಯ ಜನ ಕಾಣದ ಎನ್.ಟಿ.ಆರ್ ಜೀವನ ದರ್ಶನ

  ಆರ್.ಜಿ.ವಿ....ಆರ್.ಜಿ.ವಿ ಎಂದು ಕೂಗು

  ಆರ್.ಜಿ.ವಿ....ಆರ್.ಜಿ.ವಿ ಎಂದು ಕೂಗು

  ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದು ಮೇಲ್ನೋಟಕ್ಕೆ ರಾಜಕೀಯ ಕುರಿತಾದ ಸಿನಿಮಾ ಎನಿಸಿದರೂ, ಇದೊಂದು ಮಧುರ ಪ್ರೇಮಕಾವ್ಯ ಎನ್ನಲಾಗುತ್ತಿದೆ. ನಂದಮೂರಿ ತಾರಕ ರಾಮಾರಾವ್ ಮತ್ತು ಲಕ್ಷ್ಮೀ ಪಾರ್ವತಿ ನಡುವಿನ ಸಂಬಂಧ ಎಂತಹದ್ದು ಎಂಬುದನ್ನ ವರ್ಮಾ ತೋರಿಸಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಆರ್.ಜಿ.ವಿ....ಆರ್.ಜಿ.ವಿ ಎಂದು ಕೂಗುತ್ತಿದ್ದಾರಂತೆ.

  ಎನ್.ಟಿ.ಆರ್ ಗೆ ಮಕ್ಕಳೆಷ್ಟು?

  ಎನ್.ಟಿ.ಆರ್ ಗೆ ಮಕ್ಕಳೆಷ್ಟು?

  ಅಂದ್ಹಾಗೆ, ಎನ್.ಟಿ.ಆರ್ ಗೆ ಎರಡು ಮದುವೆ ಆಗಿದೆ. ಬಸವ ತಾರಕಂ ಮೊದಲ ಪತ್ನಿ (ನಿಧನರಾಗಿದ್ದಾರೆ). ಲಕ್ಷ್ಮೀ ಪಾರ್ವತಿ ಎರಡನೇ ಪತ್ನಿ. ಈಗ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ಎನ್.ಟಿ.ಆರ್ ಗೆ ಒಟ್ಟು 12 ಜನ ಮಕ್ಕಳು. ನಟ ಹರಿಕೃಷ್ಣ ಮತ್ತು ಬಾಲಕೃಷ್ಣ ಪ್ರಮುಖರು.

  English summary
  Telugu director ram gopal varma got the best compliment from audience, after watch lakshmi's Ntr movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X