For Quick Alerts
  ALLOW NOTIFICATIONS  
  For Daily Alerts

  'ಉಪೇಂದ್ರ ಡೆಡ್ಲಿ ಲುಕ್': ಕಬ್ಜ ಪೋಸ್ಟರ್ ಬಿಡುಗಡೆ ಮಾಡಿದ ವರ್ಮಾ ಖುಷ್

  |

  ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಬಹುನಿರೀಕ್ಷೆಯ ಕಬ್ಜ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿದ್ದು, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಡುಗಡೆಗೊಳಿಸಿದ್ದಾರೆ.

  DIRECTORS DIARY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada

  ಕಬ್ಜ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಮಾಡಿದ ವರ್ಮಾ, ಉಪೇಂದ್ರ ಅವರ ಲುಕ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಡೆಡ್ಲಿ ಲುಕ್'' ಎಂದು ಆರ್ ಚಂದ್ರುಗೆ ಭೇಷ್ ಎಂದಿದ್ದಾರೆ.

  ಕಬ್ಜ ಚಿತ್ರಕ್ಕೆ ಸಾಥ್ ನೀಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

  ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಥೀಮ್ ಪೋಸ್ಟರ್ ಬಿಡುಗಡೆ ಮಾಡಿದ ವರ್ಮಾ ''ಕಬ್ಜ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ. ನಿಜಕ್ಕೂ ಅದ್ಭುತವಾಗಿದೆ, ಉಪೇಂದ್ರ ಲುಕ್ ಡೆಡ್ಲಿಯಾಗಿದೆ, ಸಿನಿಮಾದ ಕೆಲವು ರಫ್ ಕಟ್ ಸಹ ನೋಡಿದೆ. ಬಹಳ ಚೆನ್ನಾಗಿ ಬರ್ತಿದೆ'' ಎಂದಿದ್ದಾರೆ.

  ''ದೃಶ್ಯಗಳನ್ನು ನೋಡಿದ್ಮೇಲೆ ಈ ಸಿನಿಮಾ ಎಲ್ಲ ಭಾಷೆಗಳಲ್ಲಿ ಬಿಡುಗಡೆಯಾಗುವುದಕ್ಕೆ ಅರ್ಹವಾಗಿದೆ. ಛಾಯಾಗ್ರಹಣ ತುಂಬಾ ಚೆನ್ನಾಗಿ ಬರ್ತಿದೆ. ಇದೊಂದು ಒಳ್ಳೆಯ ಪ್ರಯತ್ನ ಎನಿಸುತ್ತಿದೆ, ಈ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದೇನೆ'' ಎಂದು ವರ್ಮಾ ಹೇಳಿದ್ದಾರೆ.

  ಇನ್ನುಳಿದಂತೆ 'ಕಬ್ಜ' ಚಿತ್ರದಲ್ಲಿ ನಾನಾ ಪಾಟೇಕರ್, ಅತುಲ್ ಕುಲಕರ್ಣಿ, ಜಗಪತಿ ಬಾಬು, ಪ್ರಕಾಶ್ ರಾಜ್ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮರಾಠಿ, ಬೆಂಗಾಲಿ ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಸುಮಾರು ನೂರು ಕೋಟಿ ಬಜೆಟ್‌ ಹೊಂದಿರಲಿದೆ.

  English summary
  Director Ram Gopal Varma released Upendra's Multi Language Kabza Movie Theme Poster on september 17.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X