»   » ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!

ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!

Posted By:
Subscribe to Filmibeat Kannada

ವಿವಾದಗಳನ್ನೇ ಬೆನ್ನೆತ್ತಿ ಹೋಗ್ತಾರೋ, ಇಲ್ಲ ವಿವಾದಗಳೇ ಇವರನ್ನ ಹುಡುಕಿಕೊಂಡು ಬರುತ್ತೋ, ಗೊತ್ತಿಲ್ಲ. ಒಟ್ನಲ್ಲಿ, ಮಿಸ್ಟರ್ ರಾಮ್ ಗೋಪಾಲ್ ವರ್ಮಾ ಗೂ, ವಿವಾದಗಳಿಗೂ ಒಂಥರಾ ಬಿಡಿಸಲಾರದ ನಂಟು. ಬಹುಶಃ ಇದಕ್ಕೆ ಇರಬೇಕು ಇವರಿಗೆ 'ಕಾಂಟ್ರವರ್ಶಿಯಲ್ ಡೈರೆಕ್ಟರ್' ಅಂತ ನಿಕ್ ನೇಮ್ ಇರುವುದು.

ಸದಾ ಒಂದಲ್ಲಾ ಒಂದು ಟ್ವೀಟ್ ಮಾಡುತ್ತಾ, ಎಲ್ಲರನ್ನು ಕಾಲೆಳೆಯುವ ಮಿಸ್ಟರ್ ವರ್ಮಾ, ಈ ಬಾರಿ ಸೂಪರ್ ಸ್ಟಾರ್ ರಜನಿಕಾಂತ್ ಗೆ ಅವಮಾನ ಮಾಡಿದ್ದಾರೆ. [ವರ್ಮಾ ಸಾಹೇಬ್ರೇ ಇದೆಲ್ಲಾ ನಿಮ್ಗೆ ಬೇಕಾ?]

ರಜನಿಕಾಂತ್ ಜೊತೆ ಆಮಿ ಜಾಕ್ಸನ್ ಕ್ಲಿಕ್ ಮಾಡಿರುವ ಒಂದು ಸೆಲ್ಫಿ ಇಟ್ಕೊಂಡು ರಜನಿಕಾಂತ್ ಬಗ್ಗೆ ಮನಸೋ ಇಚ್ಛೆ ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ ಸಾಹೇಬರು. ಮುಂದೆ ಓದಿ.....

ರಜನಿಕಾಂತ್ ಗೆ ಕಿಂಡಲ್ ಮಾಡಿದ ವರ್ಮಾ.!

ರಜನಿಕಾಂತ್ 'ಸೂಪರ್ ಸ್ಟಾರ್' ಅಂತ ಜನಪ್ರಿಯರಾಗಿರುವುದೇ ಅವರ ಪ್ರತಿಭೆಯಿಂದ. ಹೀಗಿರುವಾಗ, ರಜನಿಕಾಂತ್ 'ಲುಕ್' ಬಗ್ಗೆ ರಾಮ್ ಗೋಪಾಲ್ ವರ್ಮಾ ಕಿಂಡಲ್ ಮಾಡಿ ಟ್ವೀಟ್ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ರವರ ಟ್ವೀಟ್ಸ್ ಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ರಜನಿಕಾಂತ್ 'ಬ್ಯಾಡ್ ಲುಕರ್'.!

''ರಜನಿಕಾಂತ್ ಬ್ಯಾಡ್ ಲುಕರ್. ಸಿಕ್ಸ್ ಪ್ಯಾಕ್ ಇಲ್ಲದ ಕುಬ್ಜ ದೇಹ ಇರುವ ಅವರಿಗೆ ಎರಡುವರೆ ಡ್ಯಾನ್ಸ್ ಸ್ಟೆಪ್ ಗಳು ಬರುತ್ತೆ ಅಷ್ಟೆ' ಅಂತ ರಜನಿಕಾಂತ್ ಬಗ್ಗೆ ಲೇವಡಿ ಮಾಡಿ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. [ಭಾರತ ಸೋತಿದಕ್ಕೆ ಟ್ವಿಟ್ಟರ್ ನಲ್ಲಿ ಪಟಾಕಿ ಹಚ್ಚಿದ ವರ್ಮಾ]

'ಸೂಪರ್ ಸ್ಟಾರ್' ಹೇಗಿರಬೇಕು?

''ಇಡೀ ವಿಶ್ವದಲ್ಲಿ ಇವರ ಹಾಗೆ ಕಾಣುವ ಸೂಪರ್ ಸ್ಟಾರ್ ಎಲ್ಲೂ ಇಲ್ಲ. ದೇವರಿಗೆ ರಜನಿ ಏನು ಮಾಡಿದ್ದಾರೋ ಇಲ್ಲಾ, ರಜನಿಗೆ ದೇವರು ಏನು ಮಾಡಿದ್ದಾನೋ ಅನ್ನೋದೇ ನನಗೆ ಆಶ್ಚರ್ಯ'' ಅಂತ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನಲ್ಲಿ ಬಾಂಬ್ ಸಿಡಿಸಿದ್ದಾರೆ. [ಹುಟ್ಟುಹಬ್ಬ ಅಂತ ಆರ್.ಜಿ.ವಿಗೆ ವಿಶ್ ಮಾಡಿದ್ರೀ..ಜೋಕೆ..!]

ಪ್ರೇಕ್ಷಕರ ಮೆಚ್ಚುಗೆ ಯಾಕೆ?

''ಸಿನಿಮಾದಲ್ಲಿ ಪ್ರೇಕ್ಷಕರಿಗೆ ಯಾವುದು ಇಷ್ಟವಾಗುತ್ತೆ ಅನ್ನೋದು ಯಾರಿಗೂ ಗೊತ್ತಾಗೋಲ್ಲ ಅನ್ನೋದಕ್ಕೆ ರಜನಿ ಸರ್ ಉತ್ತಮ ಉದಾಹರಣೆ'' ಅಂತ ಟ್ವೀಟ್ ಮಾಡಿದ್ದಾರೆ ವರ್ಮಾ.

ರಜನಿ ಬಗ್ಗೆ....

''ರಜನಿಕಾಂತ್ ಬಗ್ಗೆ ಹೇಳ್ಬೇಕು ಅಂದ್ರೆ, ವಿಶ್ವದ ಪ್ರಖ್ಯಾತ ಮನೋವೈದ್ಯರೇ ಕುಸಿದು ಬೀಳ್ತಾರೆ'' - ರಾಮ್ ಗೋಪಾಲ್ ವರ್ಮಾ

ರಜನಿಕಾಂತ್ ಏನ್ ಮಾಡಿದ್ರು?

''ಚಲನಚಿತ್ರ ರಂಗದಲ್ಲಿ 'ಸ್ಟಾರ್' ಆಗಲು ಬೇಕಾಗಿರುವ ಬಹಳ ಪ್ರಮುಖ ಅಂಶ 'ಲುಕ್ಸ್' ಬಗ್ಗೆ ಇರುವ ಕಲ್ಪನೆಯನ್ನೇ ನಾಶ ಮಾಡಿದ ದೊಡ್ಡ ಸ್ಟಾರ್ ರಜನಿಕಾಂತ್'' - ರಾಮ್ ಗೋಪಾಲ್ ವರ್ಮಾ

ಇದೆಲ್ಲಾ ಬೇಕಿತ್ತಾ ವರ್ಮಾ ಸಾಹೇಬ್ರೇ?

ಇದುವರೆಗೂ ಟಾಲಿವುಡ್ ನಟರ ಬಗ್ಗೆ ಬೇಕಾಬಿಟ್ಟಿ ಟ್ವೀಟ್ ಮಾಡುತ್ತಿದ್ದ ವರ್ಮಾ, ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಕಾಮೆಂಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಎಲ್ಲಾ ಟ್ವೀಟ್ ಗಳಲ್ಲೂ ರಜನಿ ಸೆಲ್ಫಿ!

ರಜನಿಕಾಂತ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾಡಿರುವ ಎಲ್ಲಾ ಟ್ವೀಟ್ ಗಳಲ್ಲೂ ರಜನಿಕಾಂತ್ ಜೊತೆ ಆಮಿ ಜಾಕ್ಸನ್ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಇದೆ.

ಆಮಿ ಜಾಕ್ಸನ್ ಟ್ವೀಟ್ ಮಾಡಿದ್ರು.!

ಅಷ್ಟಕ್ಕೂ, ಈ ಫೋಟೋನ ಮೊದಲು ಟ್ವೀಟ್ ಮಾಡಿದವರು ನಟಿ ಆಮಿ ಜಾಕ್ಸನ್. ''ಯಾವುದೇ ಫೋಟೋದಲ್ಲಿ ನಾನು ಇಷ್ಟೊಂದು ಖುಷಿ ಆಗಿದ್ದು ಇಲ್ಲ. ಅದಕ್ಕೆ ಕಾರಣ ರಜನಿಕಾಂತ್. ಅವರೊಂದಿಗೆ ನಾನು ನಟಿಸುತ್ತಿರುವುದು ನನ್ನ ಹೆಮ್ಮೆ'' ಅಂತ ಆಮಿ ಜಾಕ್ಸನ್ ಟ್ವೀಟ್ ಮಾಡಿದ್ರು. ಈ ಫೋಟೋ ಬಳಸಿ, ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಸಿನಿಮಾದಲ್ಲಿ 'ಸ್ಟೈಲ್ ಕಿಂಗ್'

ತೆರೆಮೇಲೆ ಸೂಪರ್ ಸ್ಟೈಲಿಶ್ ಆಗಿ ಕಾಣುವ ರಜನಿಕಾಂತ್, 'ಮೇಕಪ್' ಇಲ್ಲದೆ ಕ್ಲಿಕ್ಕಿಸಿಕೊಂಡಿರುವ ಫೋಟೋ, ವರ್ಮಾ ಮಾಡಿರುವ ಇಷ್ಟೆಲ್ಲಾ ಟ್ವೀಟ್ ಗಳಿಗೆ ಕಾರಣ.

ಆದರೂ ಏನು?

ನಿಜಜೀವನದಲ್ಲಿ ರಜನಿಕಾಂತ್ ಎಷ್ಟು ಸಿಂಪಲ್ ಅನ್ನೋದು ಎಲ್ಲರಿಗೂ ಗೊತ್ತು. ರಜನಿಕಾಂತ್ ಅವರ ಇಂತಹ ಎಷ್ಟೋ ಫೋಟೋಗಳನ್ನ ಅಭಿಮಾನಿಗಳು ನೋಡಿದ್ದಾರೆ. ಹೀಗಿರುವಾಗ, ಕಿಂಡಲ್ ಮಾಡುವುದು ಸರಿನಾ?

ನಿರ್ದೇಶಕರಾಗಿ ನಟನ ಬಗ್ಗೆ ಮಾತನಾಡುವುದು ಎಷ್ಟು ಸರಿ?

ಒಬ್ಬ ಜವಾಬ್ದಾರಿಯುತ ನಿರ್ದೇಶಕನಾಗಿ, 'ಸೂಪರ್ ಸ್ಟಾರ್' ಅಂತ ಕರೆಯಿಸಿಕೊಳ್ಳುವ ನಟನ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ಎಷ್ಟು ಸರಿ ಅನ್ನೋದು ಈಗ ಸಿನಿ ಪ್ರಿಯರ ಅಂಗಳದಲ್ಲಿ ಎದ್ದಿರುವ ಪ್ರಶ್ನೆ.

English summary
Controversial Director Ram Gopal Varma has taken his twitter account to pass some Comments over Super Star Rajinikanth's looks. Check out the tweets.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada