For Quick Alerts
  ALLOW NOTIFICATIONS  
  For Daily Alerts

  ರಾಮ್‌ಗೋಪಾಲ್ ವರ್ಮಾ ಹುಚ್ಚಾಟ: ಪವನ್‌ ಕಲ್ಯಾಣ್‌ಗೆ ಅವಮಾನ

  |

  ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹುಚ್ಚಾಟ ಮುಂದುವರೆಸಿದ್ದಾರೆ.

  Darshan to Dub For Chirus Rajamarthanda:ಚಿರು ಸರ್ಜಾಗೆ ಧನಿಯಾಗಲು ಮುಂದೆ ಬಂದ ದಾಸ ದರ್ಶನ್|Filmibeat Kannada

  ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಕುಟುಂಬದ ಮೇಲೆ ರಾಮ್‌ಗೋಪಾಲ್ ವರ್ಮಾ ದ್ವೇಷ ಸಾಮಾಜಿಕ ಜಾಲತಾಣದಲ್ಲಿ ಮುಂದುವರೆದಿದ್ದು, ಇಂದು ಸಹ ಪವನ್ ಕಲ್ಯಾಣ್ ವಿರುದ್ಧ ಕೀಳು ಅಭಿರುಚಿಯ ಪೋಸ್ಟ್ ಹಾಕಿದ್ದಾರೆ ರಾಮ್‌ಗೋಪಾಲ್ ವರ್ಮಾ.

  ಕಳಪೆ ಸಿನಿಮಾ ಮಾಡಿಯೂ ಕೋಟಿ-ಕೋಟಿ ಗಳಿಸಿದ ರಾಮ್‌ಗೋಪಾಲ್ ವರ್ಮಾ!

  ಟ್ವೀಟ್ ಮಾಡಿರುವ ರಾಮ್‌ಗೋಪಾಲ್ ವರ್ಮಾ ನಾನೊಂದು ಹೊಸ ಸಿನಿಮಾ ಮಾಡುತ್ತಿದ್ದೀನಿ ಇದರಲ್ಲಿ ಪಿಕೆ (ಪವನ್ ಕಲ್ಯಾಣ್ ಅನ್ನು ಕರೆಯುವುದು ಹೀಗೆ) ಎಂದು ಘೋಷಿಸಿದ್ದಾರೆ. ಆ ಸಿನಿಮಾದಲ್ಲಿ ಇನ್ನು ಯಾರ್ಯಾರಿರುತ್ತಾರೆ ಎಂದು ರಾಮ್‌ಗೋಪಾಲ್ ವರ್ಮಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

  ಪವರ್ ಸ್ಟಾರ್ ಹೆಸರಿನಲ್ಲಿ ಸಿನಿಮಾ

  ಪವರ್ ಸ್ಟಾರ್ ಹೆಸರಿನಲ್ಲಿ ಸಿನಿಮಾ

  ಪವನ್ ಕಲ್ಯಾಣ್‌ ಗೆ ಅಭಿಮಾನಿಗಳು ಕೊಟ್ಟಿರುವ ಹೆಸರು 'ಪವರ್ ಸ್ಟಾರ್'. ಅದೇ ಹಸರಿನಲ್ಲಿ ಸಿನಿಮಾ ಮಾಡುತ್ತೇನೆ ಎಂದು ರಾಮ್‌ಗೋಪಾಲ್ ವರ್ಮಾ ಹೇಳಿದ್ದು, ಚಿತ್ರದಲ್ಲಿ ಪಿಕೆ, ಎಂಎಸ್, ಎನ್‌ಬಿ ಮತ್ತು ಟಿಎಸ್ ನಟಿಸುತ್ತಾರೆ ಎಂದು ಹೇಳಿದ್ದಾರೆ.

  ಸಿನಿಪ್ರೇಕ್ಷಕರಿಗೆ ಗೊತ್ತಿರುವ ಹೆಸರುಗಳೇ

  ಸಿನಿಪ್ರೇಕ್ಷಕರಿಗೆ ಗೊತ್ತಿರುವ ಹೆಸರುಗಳೇ

  ಪಿಕೆ ಎಂದರೆ ಪವನ್ ಕಲ್ಯಾನ್, ಎಮ್‌ಎಸ್ ಎಂದರೆ ಮೆಗಾಸ್ಟಾರ್ ಸ್ಟಾರ್ ಚಿರಂಜೀವಿ, ಎನ್‌ಬಿ ಎಂದರೆ ಅವರ ಸಹೋದರ ನಾಗಬಾಬು, ಟಿಎಸ್ ಎಂದರೆ ನಿರ್ದೇಶಕ ತ್ರಿವಿಕ್ರಮ್ ಇದು ತೆಲುಗು ಸಿನಿಪ್ರೇಕ್ಷಕರಿಗೆ ಗೊತ್ತಿರುವ ಸಂಗತಿಯೇ.

  'ಈ' ಕಾರಣಕ್ಕಾಗಿ ಪವನ್ ಕಲ್ಯಾಣ್ ಗೆ ನಿರ್ದೇಶನ ಮಾಡುವುದಿಲ್ಲವಂತೆ ರಾಜಮೌಳಿ

  ಪವನ್ ಕಲ್ಯಾಣ್ ಹೆಂಡತಿ ರಷ್ಯಾದವರು

  ಪವನ್ ಕಲ್ಯಾಣ್ ಹೆಂಡತಿ ರಷ್ಯಾದವರು

  ಆದರೆ ತಮ್ಮ ಪವರ್ ಸ್ಟಾರ್ ಸಿನಿಮಾದಲ್ಲಿ ರಷ್ಯಾದ ನಟಿ ನಾಯಕಿಯಾಗಿರುತ್ತಾಳೆ, ನಾಲ್ಕು ಮಕ್ಕಳು, ಎಂಟು ಎಮ್ಮೆಗಳು ನಟಿಸುತ್ತವೆ ಎಂದಿದ್ದಾರೆ ವರ್ಮಾ. ಪವನ್ ಕಲ್ಯಾಣ್ ಪತ್ನಿ ರಷ್ಯಾದವರೇ ಆಗಿದ್ದಾರೆ. ಸಿನಿಮಾದಲ್ಲಿ ಎಮ್ಮೆಗಳೂ ಸಹ ಅಭಿನಯಿಸುತ್ತವೆ ಎಂದಿರುವ ವರ್ಮಾ ಪವನ್ ಕಲ್ಯಾಣ್ ಅನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.

  ವಿಡಿಯೋ ಸಹ ಹಾಕಿರುವ ವರ್ಮಾ

  ವಿಡಿಯೋ ಸಹ ಹಾಕಿರುವ ವರ್ಮಾ

  ಪವನ್ ಕಲ್ಯಾಣ್ ರೀತಿಯಲ್ಲಿಯೇ ಕಾಣುವ ವ್ಯಕ್ತಿ ಪವನ್ ರೀತಿಯಲ್ಲಿ ಉಡುಗೆ ತೊಟ್ಟು ನಡೆದುಕೊಂಡು ಬರುತ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ವರ್ಮಾ, ಈತನೇ ನನ್ನ ಸಿನಿಮಾದ ನಾಯಕ ಎಂದು ಹೇಳಿದ್ದಾರೆ.

  English summary
  Director Ramgopal Varma said he will made power star movie from his production company.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X