»   » ಪವನ್ ಕಲ್ಯಾಣ್ ಗೆ ಬೆಂಬಿಡದೆ ಕಾಡುತ್ತಿರುವ ರಾಮ್ ಗೋಪಾಲ್ ವರ್ಮಾ

ಪವನ್ ಕಲ್ಯಾಣ್ ಗೆ ಬೆಂಬಿಡದೆ ಕಾಡುತ್ತಿರುವ ರಾಮ್ ಗೋಪಾಲ್ ವರ್ಮಾ

Posted By:
Subscribe to Filmibeat Kannada

'ಕಾಸ್ಟಿಂಗ್ ಕೌಚ್' ಬಗ್ಗೆ ಬಹಿರಂಗ ಪ್ರತಿಭಟನೆ ಮೂಲಕ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನಟಿ ಶ್ರೀರೆಡ್ಡಿ, ಪವನ್ ಕಲ್ಯಾಣ್ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೇಳಿ ಸುಮ್ಮನಾದರು. ಆದ್ರೆ, ಶ್ರೀರೆಡ್ಡಿಗೆ ಪ್ರಚೋದನೆ ಮಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಸುಮ್ಮನಾಗುತ್ತಿಲ್ಲ.

'ಕಾಸ್ಟಿಂಗ್ ಕೌಚ್' ಸಮರದಲ್ಲಿ ಪವನ್ ಕಲ್ಯಾಣ್ ಅವರನ್ನ ಎಳೆದು ತಂದ ಶ್ರೀರೆಡ್ಡಿ ಈಗ ಸೈಲೆಂಟ್ ಆಗಿದ್ದಾರೆ. ಆದ್ರೆ, ಆರ್.ಜಿ.ವಿ ಮತ್ತು ಪವನ್ ನಡುವಿನ ಗುದ್ದಾಟ ದೊಡ್ಡದಾಗಿದೆ.

ಸರಣಿ ಟ್ವೀಟ್ ಮಾಡುವ ಮೂಲಕ ರಾಮ್ ಗೋಪಾಲ್ ವರ್ಮಾ ಪವನ್ ಕಲ್ಯಾಣ್ ವಿರುದ್ಧ ಕಿಡಿ ಕಾಡುತ್ತಿದ್ದಾರೆ. ಪರೋಕ್ಷವಾಗಿ ಪವನ್ ಕಾಲೆಳೆಯುತ್ತಿದ್ದಾರೆ. ಕಾಮೆಂಟ್ ಮಾಡಿ ಮತ್ತೆ ಕ್ಷಮೆ ಕೇಳ್ತಿದ್ದಾರೆ. ಕ್ಷಮೆ ಕೇಳಿ ಮತ್ತೆ ಮತ್ತೆ ಕಾಮೆಂಟ್ ಮಾಡ್ತಿದ್ದಾರೆ. ಅಷ್ಟಕ್ಕೂ, ಏನಿದು ಹೊಸ ಕಾಮೆಂಟ್ ಅಂತ ಮುಂದೆ ಓದಿ.....

ಪವನ್ ಕಾಲೆಳೆದ ವರ್ಮಾ

ಪವನ್ ಕಲ್ಯಾಣ್ ತಮ್ಮ ಹಾಗೂ ತಮ್ಮ ತಾಯಿ ಬಗ್ಗೆ ಹೇಳಿಕೆಗಳನ್ನ ನೀಡಿದ್ದ ಶ್ರೀರೆಡ್ಡಿ, ಶ್ರೀನಿ ರಾಜು ಮತ್ತು ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದು, ವಕೀಲರ ತಂಡದ ಜೊತೆ ಚರ್ಚೆ ನಡೆಸಿದ್ದಾರೆ. ಲಾಯರ್ ಗಳ ಜೊತೆ ಚರ್ಚಿಸುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿದ್ದು, ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಮತ್ತೆ ಪವನ್ ಕಲ್ಯಾಣ್ ಕಾಲೆಳೆದಿದ್ದಾರೆ.

ಜೂನಿಯರ್ ಕಲಾವಿದರೊಂದಿಗೆ ಚರ್ಚೆನಾ.?

ಸಾಮಾನ್ಯವಾಗಿ ಇಬ್ಬರು ಅಥವಾ ಮೂವರು ವಕೀಲರ ಜೊತೆ ಪವನ್ ಕಲ್ಯಾಣ್ ಚರ್ಚೆ ಮಾಡಬಹುದಿತ್ತು. ಆದ್ರೆ, ಸುಮಾರು ಹದಿನೈದರಿಂದ ಇಪತ್ತು ಜನ ಲಾಯರ್ ಗಳ ಜೊತೆ ಪವನ್ ಈ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ದಾರೆ. ಈ ಬಗ್ಗೆ ವರ್ಮಾ ಕಾಮೆಂಟ್ ಮಾಡಿದ್ದು, ಇವರು ನಿಜವಾಗಲೂ ವಕೀಲರ ಅಥವಾ ಜೂನಿಯರ್ ಕಲಾವಿದರ ಎಂದು ಪ್ರಶ್ನಿಸಿದ್ದಾರೆ.

ಶ್ರೀರೆಡ್ಡಿ-ಅಭಿರಾಮ್ ವಿವಾದ: 5 ಕೋಟಿ ಡೀಲ್ ಬಿಚ್ಚಿಟ್ಟ ವರ್ಮಾ

ಆರ್.ಜಿ.ವಿ ಕಾಮೆಂಟ್

''ವಾವ್ಹ್...ಮೊದಲ ಸಲ ನೋಡುತ್ತಿದ್ದೇನೆ. ಒಬ್ಬ ಕ್ಲೈಂಟ್ ಇಷ್ಟೊಂದು ಜನ ವಕೀಲರ ಬಳಿ ಚರ್ಚೆ ಮಾಡುತ್ತಿರುವುದು. ಇಷ್ಟೊಂದು ಹಣ ಇದೆ, ಒಳ್ಳೆ ಲಾಯರ್ ನ ಬಳಿ ಹೋಗಬಹುದಿತ್ತು. ಇದನ್ನ ನೋಡುತ್ತಿದ್ದರೇ, ಅವರ ಫ್ಯಾನ್ಸ್ ಲಾಯರ್ ಬಟ್ಟೆ ತೊಟ್ಟು, ಅವರ ಪ್ರಡೊಕ್ಷನ್ ಗೋಡೌನ್ ನಲ್ಲಿ ಕೂತಿರುವಂತೆ ಕಾಣುತ್ತಿದೆ. ಜಸ್ಟ್ ಆಸ್ಕಿಂಗ್....'' ಎಂದು ವರ್ಮಾ ಕಾಲೆಳೆದಿದ್ದಾರೆ.

ಶ್ರೀರೆಡ್ಡಿ ರೀತಿ ವಕೀಲರ ಬಳಿ ಹೋಗಿದ್ದಾರೆ

''ಜ್ಞಾನಯಿರುವ ವಕೀಲರ ಬಳಿ ಹೋಗುವ ಬದಲು, ಅವಕಾಶ ಇಲ್ಲದೇ ಕೂತಿರುವ ಶ್ರೀರೆಡ್ಡಿ ರೀತಿಯ ಲಾಯರ್ ಗಳನ್ನ ಖರೀದಿ ಮಾಡಿರುವುದು ಯಾಕೆ''? ಎಂದು ಪವನ್ ಕಲ್ಯಾಣ್ ನಡೆಯನ್ನ ವರ್ಮಾ ಟೀಕಿಸಿದ್ದಾರೆ.

ಪವನ್ ಕಲ್ಯಾಣ್ ವಿವಾದಕ್ಕೆ ಹೊಸ ಟ್ವಿಸ್ಟ್ ನೀಡಿದ ಶ್ರೀರೆಡ್ಡಿ

ಕ್ಷಮೆ ಕೇಳಿ ಮತ್ತೆ ಕಾಮೆಂಟ್

ಇದಕ್ಕೂ ಮುಂಚೆ ತಮ್ಮ ತಾಯಿ ಮೇಲೆ ಪ್ರಮಾಣ ಮಾಡಿದ್ದ ವರ್ಮಾ ಪವನ್ ಕಲ್ಯಾಣ್ ಬಗ್ಗೆ ಇನ್ನು ಒಂದೇ ಒಂದು ಕಾಮೆಂಟ್ ಮಾಡಲ್ಲ ಎಂದಿದ್ದರು. ಹೀಗೆ ಎಂದ ಕೇಲವೇ ಗಂಟೆಗಳಲ್ಲಿ ಮತ್ತೆ ಪ್ರಮಾಣ ವಾಪಸ್ ಪಡೆದುಕೊಂಡಿದ್ದೇನೆ ಎಂದು ಹೇಳಿ ಮತ್ತೆ ಮತ್ತೆ ಪವನ್ ಕಲ್ಯಾಣ್ ಅವರ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ ವರ್ಮಾ.

English summary
Telugu actor Pawan Kalyan is going to face legal fight with Industrialist Srini Raju and others. In this occassion, Pawan Kalayn met bunch of lawyers in his party office. On this event, Ram Gopal Varma posted serial tweets.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X