For Quick Alerts
  ALLOW NOTIFICATIONS  
  For Daily Alerts

  ಪೋರ್ನ್ ನಟಿ ಜೊತೆ ರಾಮ್ ಗೋಪಾಲ್ ವರ್ಮ ವಿಡಿಯೋ

  By Bharath Kumar
  |

  ಬರಿ ವಿವಾದಗಳಲ್ಲಿಯೇ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಪೋರ್ನ್ ನಟಿ ಮಿಯಾ ಮಲ್ಕೋವಾ ಅವರ ಜೊತೆ ಆರ್.ಜಿ.ವಿ ಹೊಸ ಸಿನಿಮಾ ಮಾಡ್ತಿದ್ದು, ಇತ್ತೀಚೆಗಷ್ಟೆ ಯೂರೋಪ್ ನಲ್ಲಿ ವಿಡಿಯೋ ಶೂಟ್ ಮಾಡಿದ್ದಾರಂತೆ.

  ಈ ವಿಷ್ಯವನ್ನ ಸ್ವತಃ ಮಿಯಾ ಮಲ್ಕೋವಾ ತಮ್ಮ ಟ್ವಿಟ್ಟರ್ ನಲ್ಲಿ ಹೊರಹಾಕಿದ್ದು, ಸಂತಸವನ್ನ ವ್ಯಕ್ತಪಡಿಸಿದ್ದಾರೆ. ''ಭಾರತದ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಜೊತೆ ವಿಡಿಯೋ ಚಿತ್ರೀಕರಿಸಿದ್ದು, ಇದಕ್ಕೆ 'ಗಾಡ್, ಸೆಕ್ಸ್ ಅಂಡ್ ಟ್ರೂತ್' ಎಂದು ಟೈಟಲ್ ಇಡಲಾಗಿದೆ. ಸನ್ನಿ ಲಿಯೋನ್ ನಂತರ ವರ್ಮ ಅವರ ಜೊತೆ ವಿಡಿಯೋ ಶೂಟ್ ಮಾಡಿರುವ ಎರಡನೇ ಪೋರ್ನ್ ಸ್ಟಾರ್ ನಾನು'' ಎಂದು ಬರೆದುಕೊಂಡಿದ್ದಾರೆ.

  ಮತ್ತೆ ಬಂದ ವರ್ಮಾ: ಎಂಟ್ರಿಯಲ್ಲೇ ಸೂಪರ್ ಸ್ಟಾರ್ ಬಗ್ಗೆ ಟ್ವೀಟ್

  ಮಿಯಾ ಹಾಕಿರುವ ಸ್ಟೇಟಸ್ ಬಗ್ಗೆ ಸ್ಪಷ್ಟಿಕರಣ ನೀಡಿರುವ ವರ್ಮ, '' ಸನ್ನಿ ಲಿಯೋನ್ ಜತೆ ನಾನು ಸಿನಿಮಾ ಮಾಡಿಲ್ಲ. ಆದ್ರೆ, ನಿಮ್ಮೊಂದಿಗೆ ಮಾಡಿದ ಅನುಭವವನ್ನು ಮರೆಯಲಾರೆ. ನೀನೊಂದು ಸುಂದರವಾದ ಕಲಾಕೃತಿ, ನಾನೊಬ್ಬ ಫ್ರೇಮ್ ಮೇಕರ್'' ಎಂದು ಟ್ವೀಟಿಸಿದ್ದಾರೆ.

  ರಾಜಮೌಳಿ, ಎನ್.ಟಿ.ಆರ್ ಪೋಸ್ಟ್ ಗೆ ಅತಿ ಕೆಟ್ಟ ಕಾಮೆಂಟ್ ಮಾಡಿದ ವರ್ಮ.!

  ಸನ್ನಿ ಲಿಯೋನ್ ಜೊತೆಯಲ್ಲಿ ವರ್ಮ ಸಿನಿಮಾ ಮಾಡಿಲ್ಲ. ಆದ್ರೆ, ''ಮೇರೇ ಬೇಟಿ ಸನ್ನಿ ಲಿಯೋನ್ ಬನಾ ಚಾಹ್ತಿ ಹೈ'' ಎಂಬ ವೆಬ್ ಸೀರಿಸ್ ಶೂಟ್ ಮಾಡುವ ಮೂಲಕ ವರ್ಮ ಹೆಡ್ ಲೈನ್ ಆಗಿದ್ದರು. ಸದ್ಯ, ರಾಮ್ ಗೋಪಾಲ್ ವರ್ಮ 'ಲಕ್ಷ್ಮಿಸ್ ಎನ್.ಟಿ.ಆರ್' ಹಾಗೂ 'ನ್ಯೂಕ್ಲಿಯರ್' ಚಿತ್ರಗಳನ್ನ ತಯಾರಿಸುತ್ತಿದ್ದಾರೆ. ಈ ಮಧ್ಯೆ ಈಗ ಪೋರ್ನ್ ನಟಿಯ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್ ಜನವರಿ 16 ರಂದು ತೆರೆಕಾಣುತ್ತಿದೆ.

  English summary
  Ram Gopal Varma known for his films about the dark world of guns, goons, and damsels, is said to be making a film with popular adult star Mia Malkova. the poster look of the film was released recently by Mia herself.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X