»   » 'ಟಗರು' ಮೇಲೆ ಬಿತ್ತು ಆರ್.ಜಿ.ವಿ ಕಣ್ಣು : ಮಾನ್ವಿತಾ ಬಗ್ಗೆ ವರ್ಮ ಕಮೆಂಟ್

'ಟಗರು' ಮೇಲೆ ಬಿತ್ತು ಆರ್.ಜಿ.ವಿ ಕಣ್ಣು : ಮಾನ್ವಿತಾ ಬಗ್ಗೆ ವರ್ಮ ಕಮೆಂಟ್

Posted By:
Subscribe to Filmibeat Kannada
ಟಗರು ಮೇಲೆ ಬಿತ್ತು ಆರ್.ಜಿ.ವಿ ಕಣ್ಣು | Filmibeat Kannada

ಕನ್ನಡಿಗರು 'ಟಗರು' ಸಿನಿಮಾವನ್ನು ನೋಡಿ ಗೆಲ್ಲಿಸಿದ್ದು ಆಗಿದೆ. ಸಿನಿಮಾಗೆ ಸಾಮಾನ್ಯ ಜನರು, ಶಿವಣ್ಣ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಸೇರಿದಂತೆ ಎಲ್ಲರೂ ಬೇಷ್ ಎಂದಿದ್ದಾರೆ. ಆದರೆ ಇದೀಗ 'ಟಗರು' ಬಗ್ಗೆ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಮಾತನಾಡಿದ್ದಾರೆ.

ವರ್ಮ ಅವರಿಗಾಗಿ ನಿನ್ನೆ 'ಟಗರು' ಸಿನಿಮಾದ ವಿಶೇಷ ಪ್ರದರ್ಶನವನ್ನು ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಏರ್ಪಡಿಸಲಾಗಿತ್ತು. ಸಿನಿಮಾ ನೋಡಿ ಬಂದ ರಾಮ್ ಗೋಪಾಲ್ ವರ್ಮ ''ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. Tagaru is outstanding film'' ಎಂದು ಹೇಳಿದರು. ಮೇಕಿಂಗ್ ಕಿಂಗ್ ಎಂದು ಕರೆಸಿಕೊಳ್ಳುವ ವರ್ಮ ನಿರ್ದೇಶಕ ಸೂರಿ ಮಾಡಿರುವ ಸ್ಕ್ರೀನ್ ಪ್ಲೇಯನ್ನು ಸಿಕ್ಕಾಪಟ್ಟೆ ಹೋಗಳಿದ್ದಾರೆ. ನಟಿ ಮಾನ್ವಿತಾ ಹಾಗೂ ಧನಂಜಯ್ ಪಾತ್ರ ನೋಡಿ ವರ್ಮ ಕ್ವೀನ್ ಬೋಲ್ಡ್ ಆಗಿದ್ದಾರೆ.

ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

ಸಿನಿಮಾ ನೋಡಿ ಮೊದಲು ಸುದ್ದಿ ಮಾದ್ಯಮಗಳ ಜೊತೆಗೆ ಮಾತನಾಡಿದ ವರ್ಮ ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. 'ಟಗರು' ಸಿನಿಮಾದ ಬಗ್ಗೆ ವರ್ಮ ಏನು ಹೇಳಿದರು ಎಂಬುದು ಮುಂದಿದೆ ಓದಿ.

ನನ್ನ ಕೆರಿಯರ್ ನಲ್ಲಿಯೇ ಈ ರೀತಿಯ ಸ್ಕ್ರೀನ್ ಪ್ಲೇ ನೋಡಿಲ್ಲ

''ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. Tagaru is outstanding film. ನನ್ನ ಕೆರಿಯರ್ ನಲ್ಲಿಯೇ ಈ ರೀತಿಯ ಸ್ಕ್ರೀನ್ ಪ್ಲೇ ನೋಡಿಲ್ಲ. ಸೂರಿ ಅವರ ಬ್ರಿಲಿಯಂಟ್ ಸ್ಕ್ರೀನ್ ಪ್ಲೇ, ಡೈರೆಕ್ಷನ್ ಜೊತೆಗೆ ಪ್ರತಿ ಪಾತ್ರಗಳು ಪ್ರತಿ ಸೆಕೆಂಡ್ ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಮೊದಲು ಸೂರಿ ಸ್ಕ್ರೀನ್ ಪ್ಲೇ ನೋಡಿ ಸಿನಿಮಾ ಅರ್ಥ ಆಗುವುದಿಲ್ವಾ ಎನ್ನುವ ಭಯ ಆಗುತ್ತದೆ. ಆದರೆ ಈ ರೀತಿಯ ಸ್ಕ್ರೀನ್ ಪ್ಲೇ ತುಂಬ ಹೊಸದಾದ ಪ್ರಯತ್ನ.''

ಮಾನ್ವಿತಾ ನಟನೆಗೆ ವರ್ಮ ಬೋಲ್ಡ್

''ವಿಶೇಷವಾಗಿ ನಟಿ ಮಾನ್ವಿತಾ ತುಂಬ ಚೆನ್ನಾಗಿ ನಟಿಸಿದ್ದಾರೆ. ಮಾನ್ವಿತಾ ಕೇವಲ ಸಿನಿಮಾದಲ್ಲಿ ನಾಯಕಿ ಆಗಿಲ್ಲ. ತನ್ನ ನಟನ ಸಾಮರ್ಥ್ಯದಿಂದ ಆಕೆ ಶಾಕ್ ಕೊಟ್ಟಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ನನ್ನ ಚಿತ್ರಕ್ಕೆ ಆಕೆಗೆ ಅಡ್ವಾನ್ಸ್ ನೀಡುತ್ತೇನೆ. ಆಕೆ ಕೇಳುವ ಸಂಭಾವನೆಗಿಂತ ಹತ್ತು ಲಕ್ಷ ಹೆಚ್ಚು ಹಣ ಕೊಡುತ್ತೇನೆ.''

ಸೂರಿಗೆ ಆಫರ್ ನೀಡಿದ ಆರ್.ಜಿ.ವಿ

'ಟಗರು' ಸಿನಿಮಾ ನೋಡಿ ನಿರ್ದೇಶಕ ಸೂರಿ, ನಟಿ ಮಾನ್ವಿತಾ ಹರೀಶ್ ಹಾಗೂ ನಟ ಧನಂಜಯ್ ಜೊತೆಗೆ ರಾಮ್ ಗೋಪಾಲ್ ವರ್ಮ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿ. ''ಟಗರು ಚಿತ್ರತಂಡದ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ತುಂಬ ಹೆಮ್ಮೆ ಆಗುತ್ತಿದೆ'' ಎಂದು ವರ್ಮ ಬರೆದುಕೊಂಡಿದ್ದಾರೆ. ಜೊತೆಗೆ ಅವರ ನಿರ್ಮಾಣದಲ್ಲಿ ಸೂರಿ ಸಿನಿಮಾ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಡಾಲಿ ನೋಡಿ ವರ್ಮ ಹ್ಯಾಪಿ

ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ನಟಿಸಿದ್ದ ಧನಂಜಯ್ ರೋಲ್ ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಇಷ್ಟ ಆಗಿತ್ತು. ಈಗ ವರ್ಮ ಸಹ ಆ ಪಾತ್ರದ ಬಗ್ಗೆ ಮಾತನಾಡಿದ್ದಾರೆ. '' ಧನಂಜಯ್ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಅವರ ನಟನೆ ಕೂಡ ಟೆರಿಫಿಕ್ ಆಗಿದೆ. ಅವರ ತನ್ನ ಕಣ್ಣುಗಳ ಮೂಲಕ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ತೋರಿಸಿದ್ದಾರೆ.''

ಪ್ರತಿ ನಿರ್ದೇಶಕರಿಗೆ ಸ್ಪೂರ್ತಿ

''ಟಗರು ಒಂದು ಕಮರ್ಷಿಯಲ್ ಸಿನಿಮಾವಾದರೂ ಸಾಮಾನ್ಯವಾಗಿ ಇಲ್ಲ. ಈ ಸಿನಿಮಾ ಪ್ರತಿ ನಿರ್ದೇಶಕನಿಗೆ ಸ್ಪೂರ್ತಿ. ಇವುಗಳ ಜೊತೆಗೆ ಚರಣ್ ರಾಜ್ ಮ್ಯೂಸಿಕ್, ಬ್ಯಾಗ್ರಾಂಡ್ ಸ್ಕೋರ್ ಕೂಡ ಚೆನ್ನಾಗಿದೆ. ಸಾಧ್ಯ ಆದರೆ ಮುಂದೆ ನಾನು ಇದೇ ಟೀಂ ಜೊತೆಗೆ ಸಿನಿಮಾ ಮಾಡಲು ಬಯಸುತ್ತೇನೆ.''

ಶಿವಣ್ಣನಿಗೆ ಆಕ್ಷನ್ ಕಟ್ ಹೇಳಿದ್ದ ವರ್ಮ

ಈ ಹಿಂದೆ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದ ಮೂಲಕ ರಾಮ್ ಗೋಪಾಲ್ ವರ್ಮ ಕನ್ನಡಕ್ಕೆ ಬಂದಿದ್ದರು. ಶಿವರಾಜ್ ಕುಮಾರ್ ನಟನೆಯ ಈ ಸಿನಿಮಾವನ್ನು ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ನಂತರ ಇದೀಗ 'ಟಗರು' ನೋಡಿ ಮತ್ತೆ ಕನ್ನಡ ಚಿತ್ರ ಮಾಡುತ್ತೇನೆ ಎಂದು ವರ್ಮ ಹೇಳಿದ್ದಾರೆ.

ಪೊಗರು ತುಂಬಿದ ಟಗರಿಗೆ ವಿಮರ್ಶಕರು ಕ್ಲೀನ್ ಬೌಲ್ಡ್

English summary
Director Ram Gopal Varma spoke about Shiva Rajkumar's Tagaru kannada movie. Varma watched Tagaru movie yesterday (march 28) in orion mall

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X