»   » ರಾಜಮೌಳಿ, ಎನ್.ಟಿ.ಆರ್ ಪೋಸ್ಟ್ ಗೆ ಅತಿ ಕೆಟ್ಟ ಕಾಮೆಂಟ್ ಮಾಡಿದ ವರ್ಮ.!

ರಾಜಮೌಳಿ, ಎನ್.ಟಿ.ಆರ್ ಪೋಸ್ಟ್ ಗೆ ಅತಿ ಕೆಟ್ಟ ಕಾಮೆಂಟ್ ಮಾಡಿದ ವರ್ಮ.!

Posted By:
Subscribe to Filmibeat Kannada
ರಾಜಮೌಳಿ ಫೋಟೋಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ ರಾಮ್ ಗೋಪಾಲ್ ವರ್ಮಾ | Filmibeat Kannada

ಭಾರತದ ಚಿತ್ರರಂಗದ ವಿವಾದ್ಮತಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಟ್ವಿಟ್ಟರ್ ನಿಂದ ಹೊರ ಹೋಗಿದ್ದಾಗ ಎಲ್ಲರೂ ಖುಷಿಯಾಗಿದ್ದರು. ಆದ್ರೆ, ವರ್ಮ ಟ್ವಿಟ್ಟರ್ ಬಿಟ್ಟ ಮೇಲೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಳೇ ಚಾಳಿಯನ್ನ ಮುಂದುವರಿಸಿದ್ದಾರೆ.

ಇತ್ತೀಚೆಗೆ 'ಬಾಹುಬಲಿ' ನಿರ್ದೇಶಕ ರಾಜಮೌಳಿ ತಮ್ಮ ಟ್ವಿಟ್ಟರ್ ನಲ್ಲಿ ಒಂದು ಫೋಟೋ ಹಾಕಿದ್ದರು. ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ಮೂವರು ಈ ಫೋಟೋದಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋ ನೋಡಿ ತೆಲುಗು ಚಿತ್ರರಂಗದಲ್ಲಿ ಕುತೂಹಲ ಗರಿಗೆದರಿದೆ. ಆದ್ರೆ, ರಾಮ್ ಗೋಪಾಲ್ ವರ್ಮ ಮಾತ್ರ ತಮ್ಮ ವರಸೆ ತೋರಿಸಿದ್ದಾರೆ. ಈ ಬ್ಯೂಟಿಫುಲ್ ಫೋಟೋಗೆ ಅತಿ ಕೆಟ್ಟದಾಗಿ ಕಾಮೆಂಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಜಮೌಳಿ ಹಾಕಿದ್ದ ಫೋಟೋ ಇದೇ ನೋಡಿ

ನಿರ್ದೇಶಕ ರಾಜಮೌಳಿ ಹಾಕಿದ್ದು ಇದೇ ಫೋಟೋ. ರಾಮ್ ಚರಣ್, ಎನ್.ಟಿ.ಆರ್ ಮತ್ತು ರಾಜಮೌಳಿ ಒಟ್ಟಿಗೆ ಇರುವ ಫೋಟೋ ಹಾಕಿ, ಅದಕ್ಕೆ ಯಾವುದೇ ಕ್ಯಾಪ್ಷನ್ ಕೊಡದೆ ಬರಿ ಚುಕ್ಕಿಗಳನ್ನ ಇಟ್ಟಿದ್ದಾರೆ. ಇದು ಸಹಜವಾಗಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಮುತ್ತಪ್ಪ 'ರೈ' ಚಿತ್ರ ಏನಾಯ್ತು, ಸದ್ದು ಇಲ್ಲ, ಸುದ್ದಿನೂ ಇಲ್ಲ.!

'ಸಲಿಂಗಿಗಳು' ಎಂದ ವರ್ಮ

ಆದ್ರೆ, ರಾಜಮೌಳಿ ಹಾಕಿರುವ ಈ ಫೋಟೋ ನೋಡಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಇವರು 'ಸಲಿಂಗಿ ಕಾಮಿಗಳು' ಎಂದು ಕಾಮೆಂಟ್ ಮಾಡಿದ್ದಾರೆ.

ಆರ್.ಜಿ.ವಿ ಕಾಮೆಂಟ್ ನೋಡಿ

''ಮಹಿಳೆಯರನ್ನ ಗೌರವಿಸುವ ಮತ್ತು ಆರಾಧಿಸುವ ನಾನು, ಸಲಿಂಗಕಾಮಿ ಸಂಸ್ಕೃತಿಯ ಅಸಹ್ಯ ಪ್ರಚಾರವನ್ನು ಬಲವಾಗಿ ಖಂಡಿಸುತ್ತೇನೆ'' ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾರೆ.

ಎರಡನೇ ಕಾಮೆಂಟ್ ನಲ್ಲಿ ಏನಿದೆ?

''ಒಬ್ಬರಲ್ಲ, ಇಬ್ಬರಲ್ಲ, ಮೂವರು ಅದೇ ರೀತಿನಾ? ಅಷ್ಟಕ್ಕೂ, ಮೂವರು ಮದುವೆಯಾಗಿದ್ದಾರೆ. ಹಾಗಿದ್ದರೂ ಇದು ಹೇಗೆ ಸಾಧ್ಯ? ಈ ಜೀಸಸ್ (ಯೇಸು) ದಯಮಾಡಿ ನನಗೆ ತಿಳಿಸಿ'' ಎಂದು ಕಾಲೆಳೆದಿದ್ದಾರೆ.

ರೊಚ್ಚಿಗೆದ್ದ ಅಭಿಮಾನಿಗಳು

ರಾಮ್ ಗೋಪಾಲ್ ವರ್ಮ ಅವರ ಈ ಕಾಮೆಂಟ್ ನೋಡಿ ರಾಜಮೌಳಿ, ಎನ್.ಟಿ.ಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಕಾಂಟ್ರವರ್ಸಿ ನಿರ್ದೇಶಕರಿಗೆ ಫುಲ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

'ಅರ್ಜುನ್ ರೆಡ್ಡಿ' ಗೆಟಪ್ ನಲ್ಲಿರುವ ಈ ನಿರ್ದೇಶಕ ಯಾರು?

ಅಷ್ಟಕ್ಕೂ, ರಾಜಮೌಳಿ ಈ ಫೋಟೋ ಹಾಕಿದ್ದೇಕೆ?

ಇಷ್ಟೆಲ್ಲ ಚರ್ಚೆಗಳ ಮಧ್ಯೆ ರಾಜಮೌಳಿ ಅವರ ಈ ಪೋಸ್ಟ್ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಸದ್ಯ, ರಾಜಮೌಳಿಯ ಮುಂದಿನ ಸಿನಿಮಾದ ಬಗ್ಗೆ ದೊಡ್ಡ ಚರ್ಚೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಫೋಟೋ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಒಂದು ಪಕ್ಷ ರಾಜಮೌಳಿ ಮುಂದಿನ ಸಿನಿಮಾದಲ್ಲಿ ಈ ಇಬ್ಬರು ನಟಿಸುತ್ತಿರಬಹುದಾ? ಎಂಬ ಕಾತುರವೇ ಎಲ್ಲರದ್ದು. ಆದ್ರೆ, ಇದನ್ನ ರಾಜಮೌಳಿಯೇ ತಿಳಿಸಬೇಕು.

'ರಾಜಮೌಳಿ' ಮುಂದಿನ ಸಿನಿಮಾ ಘೋಷಣೆ.! ನಾಯಕ ಯಾರು?

English summary
Ram Gopal Varma trolls Ram Charan, Jr NTR and SS Rajamouli for promoting 'gay culture'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada