ಚಿದಂಬರಂ ಅರೆಸ್ಟ್: ಮೋದಿ ಸರ್ಕಾರವನ್ನು ಹೊಗಳಿದ ವರ್ಮ
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ರನ್ನು ಬಂಧನ ಮಾಡಲಾಗಿದೆ. ಐ ಎನ್ ಎಕ್ಸ್ ಮೀಡಿಯಾ ಹಗರಣದ ಆರೋಪದಲ್ಲಿ ಸಿಬಿಐ ಅಧಿಕಾರಗಳು ಚಿದಂಬರಂ ರನ್ನು ಅರೆಸ್ಟ್ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಮೋದಿ ಸರ್ಕಾರವನ್ನು ಹೊಗಳಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕೋರ್ಟ್‌ಗೆ ಚಿದಂಬರಂ ಹಾಜರು
''ಇದು ಪ್ರಜಾಪ್ರಭುತ್ವದ ನಿಜವಾದ ಪ್ರದರ್ಶನ. ಗೃಹ ಸಚಿವ ಆಗಿರುವ ಸಮಯದಲ್ಲಿ ತಾವೇ ಸಿಬಿಐ ಹೆಡ್ ಕ್ವಾಟ್ರಸ್ ಅನ್ನು ಉದ್ಘಾಟನೆ ಮಾಡಿದ್ದರು. ಈಗ ಅವರೇ ಸಿಬಿಐ ಕಸ್ಟಡಿಯಲ್ಲಿ ಇದ್ದಾರೆ. ಇದು ಎಂತಹ ವಿಚಿತ್ರ. ಮೋದಿ ಇಂಡಿಯಾ ಪದೇ ಪದೇ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಸಾಬೀತು ಮಾಡಿತ್ತಿದ್ದರೆ.'' ಎಂದು ರಾಮ್ ಗೋಪಾಲ್ ವರ್ಮ ಬರೆದುಕೊಂಡಿದ್ದಾರೆ.

ತಮ್ಮ ಟ್ವೀಟ್ ಮೂಲಕ ಪಿ ಚಿದಂಬರಂ ರನ್ನು ವ್ಯಂಗ್ಯ ಮಾಡಿರುವ ರಾಮ್ ಗೋಪಾಲ್ ವರ್ಮ, ಮೋದಿ ಸರ್ಕಾರವನ್ನು ಮೆಚ್ಚಿಕೊಂಡಿದ್ದಾರೆ.
ಅಂದಹಾಗೆ, ಇಂದು (ಗುರುವಾರ) ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಿದಂಬರಂ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲು ಅನುವು ಮಾಡಿಕೊಡಿವಂತೆ ಅವರನ್ನು ತಮ್ಮ ವಶಕ್ಕೆ ನೀಡಲು ಸಿಬಿಐ ಅಧಿಕಾರಿಗಳು ಕೋರಲಿದ್ದಾರೆ.


Click it and Unblock the Notifications











