»   » ಮತ್ತೆ ಬಂದ ವರ್ಮಾ: ಎಂಟ್ರಿಯಲ್ಲೇ ಸೂಪರ್ ಸ್ಟಾರ್ ಬಗ್ಗೆ ಟ್ವೀಟ್

ಮತ್ತೆ ಬಂದ ವರ್ಮಾ: ಎಂಟ್ರಿಯಲ್ಲೇ ಸೂಪರ್ ಸ್ಟಾರ್ ಬಗ್ಗೆ ಟ್ವೀಟ್

Posted By:
Subscribe to Filmibeat Kannada
ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ಗೆ ವಾಪಸ್ ,ಬಂದ ಕೂಡಲೇ ರಜಿನಿ ರಾಜಕೀಯ ಪ್ರವೇಶದ ಬಗ್ಗೆ ಟ್ವೀಟ್ |Filmibeat Kannada

ಸಿನಿಮಾಗಳಿಗಿಂತ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮ, ಕೆಲವು ತಿಂಗಳ ಹಿಂದೆ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದರು. ಸಿನಿಮಾ, ರಾಜಕೀಯ, ಸಾವು, ನೋವು ಯಾವುದೇ ಬೆಳವಣಿಗೆ ನಡೆದರು ವ್ಯಂಗ್ಯವಾಗಿ ಟ್ವೀಟ್ ಮಾಡುತ್ತಿದ್ದ ವರ್ಮ, ಟ್ವಿಟ್ಟರ್ ನಿಂದ ಹೊರಹೋಗಿದ್ದು ಎಷ್ಟೋ ಒಳ್ಳೆಯದಾಯಿತು ಎಂದು ಖುಷಿಪಟ್ಟಿದ್ದರು.

ಆದ್ರೀಗ, ಆರ್.ಜಿ.ವಿ ಮತ್ತೆ ಟ್ವಿಟ್ಟರ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ರೀ-ಎಂಟ್ರಿಯಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ. ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್

Ram Gopal Varma Tweets about Rajinikanth

ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವುದನ್ನು ಸ್ವಾಗತಿಸಿರುವ ರಾಮ್ ಗೋಪಾಲ್ ವರ್ಮ, '' ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಹಳ ಕುತೂಹಲವನ್ನು ಉಂಟು ಮಾಡಿದಂತೆ ಈ ಹಿಂದೆ ಯಾವ ಸಂದರ್ಭವನ್ನ ಕಂಡಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ ಜನರು ರಜನಿಗೆ ಮಾತ್ರ ವೋಟ್ ಮಾಡಲಿದ್ದಾರೆ'' ಎಂದಿದ್ದಾರೆ.

English summary
Indian Star Film maker Ram Gopal varma makes a comeback on Twitter and tweeted about Rajinikanth's entry into politics. ಭಾರತದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ಟ್ವಿಟ್ಟರ್ ಗೆ ಕಮ್ ಬ್ಯಾಕ್ ಆಗಿದ್ದು, ರಜನಿಕಾಂತ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X