For Quick Alerts
  ALLOW NOTIFICATIONS  
  For Daily Alerts

  ಬೆಳದಿಂಗಳಾಗಿ ಮತ್ತೆ ಬಂದ ರಮಣಿತು ಚೌಧರಿ

  By Rajendra
  |
  ಸುದೀರ್ಘ ಎರಡು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ ತಾರೆ ರಮಣೀತು ಚೌಧರಿ. 'ಹೋರಿ' ಚಿತ್ರದಲ್ಲಿ ಕುಣಿದು ಹೋದ ಈ ಪೋರಿ ಈಗ ಸ್ಲಿಮ್ ಅಂಡ್ ಟಿಮ್ ಆಗಿದ್ದು ಮತ್ತೊಮ್ಮೆ ಗಾಂಧಿನಗರಕ್ಕೆ ಅಡಿಯಿಟ್ಟಿದ್ದಾರೆ. ಪಂಜಾಬ್ ಮೂಲದ ಈ ಬೆಡಗಿಯನ್ನು ಕನ್ನಡ ಚಿತ್ರರಸಿಕರು ಇನ್ನೇನು ಮರೆತೇ ಬಿಟ್ಟಿದ್ದರು.

  ತಮಗೆ ಹಿಂದಿ ಚಿತ್ರಗಳಲ್ಲಿ ಸಾಕಷ್ಟು ಅವಕಾಶಗಳು ಬಂದ ಕಾರಣ ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಬಂದ ಆಫರ್ ಗಳಿಗೆ ಸಂಭಾವನೆ ಕೂಡ ನಿರೀಕ್ಷಿಸಿದಷ್ಟು ಇರುತ್ತಿರಲಿಲ್ಲ. ಯಾರೇ ಆಗಲಿ ಒಂದು ಹಂತಕ್ಕೆ ಏರಿದ ಮೇಲೆ ಅವರ ಸಂಭಾವನೆಯೂ ಮುಖ್ಯ ಅಲ್ಲವೆ ಎನ್ನುತ್ತಾರೆ ರಮಣೀತು.

  ಬಾಲಿವುಡ್ ಚಿತ್ರಗಳ ಜೊತೆಗೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲೂ ರಮಣಿತು ಚೌದರಿ ಬಿಜಿಯಾಗಿದ್ದಾರಂತೆ. ಈಗ ಹೊಸಬರೇ ತುಂಬಿರುವ ಕನ್ನಡದ 'ಅಗಮ್ಯ' ಚಿತ್ರದಲ್ಲಿ ಅತಿಥಿ ಪಾತ್ರ ಪೋಷಿಸಲು ಬಂದಿದ್ದಾರೆ.

  ಅತಿಥಿ ಪಾತ್ರವಾದರೂ ಅಭಿನಯಕ್ಕೆ ಸವಾಲೊಡ್ಡುವ ಪಾತ್ರ ಎನ್ನುತ್ತಾರೆ. ಈ ಹಿಂದೆ ಕನ್ನಡದ ಬೆಳದಿಂಗಳಾಗಿ ಬಾ, ಪಯಣ, ಪ್ರೀತಿಯಿಂದ ರಮೇಶ್, ಮಿ.ಪೇಂಟರ್, ಧನುಷ್, ಪಲ್ಲಕ್ಕಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಎಲ್ಲೂ ಅವರಿಗೆ ಬ್ರೇಕ್ ಸಿಕ್ಕಿರಲಿಲ್ಲ. ಈಗ ಹೊಸ ಅಗಮ್ಯ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

  ಮದುವೆ ಬಗ್ಗೆಯೂ ಮನೆಯಲ್ಲಿ ಒತ್ತಾಯ ಮಾಡುತ್ತಿದ್ದಾರಂತೆ. ಆದರೆ ರಮಣಿತು ಮಾತ್ರ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲವಂತೆ. ಸದ್ಯಕ್ಕೆ ತಾವು ಓಶೋ ಅವರ ತತ್ವಗಳನ್ನು ಅನುಸರಿಸುತ್ತಿದ್ದೇವೆ. 'ಜೀವನದ ಪ್ರತಿ ಕ್ಷಣವನ್ನು ಸಂತೋಷವಾಗಿ ಕಳೆ' ಎಂಬುದು ಸದ್ಯದ ಅವರ ಮಂತ್ರವಂತೆ. ಇದರ ಜೊತೆಗೆ ಗಾಯನ, ಛಾಯಾಗ್ರಹಣ, ಜಾಹೀರಾತು ಕೆಲಸಗಳು ಖುಷಿ ಕೊಡುತ್ತಿವೆಯಂತೆ. (ಏಜೆನ್ಸೀಸ್)

  English summary
  Actress Ramanithu Chaudhary back to Kannanda films after two years break. She plays a guest role in Agamya. She acted in 'Hori' film two years ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X