»   »  ಅರೇ..'ಪಲ್ಲಕಿ' ಸುಂದರಿ ರಮಣಿತು ಚೌಧರಿ ಮತ್ತೆ ಸಿನಿಮಾ ಮಾಡುತ್ತಿದ್ದಾರೆ!

ಅರೇ..'ಪಲ್ಲಕಿ' ಸುಂದರಿ ರಮಣಿತು ಚೌಧರಿ ಮತ್ತೆ ಸಿನಿಮಾ ಮಾಡುತ್ತಿದ್ದಾರೆ!

Posted By:
Subscribe to Filmibeat Kannada

ನಟಿ ರಮಣಿತು ಚೌಧರಿ ಕನ್ನಡದ ದೊಡ್ಡ ಸ್ಟಾರ್ ಏನೂ ಅಲ್ಲ. ಹಾಗಂತ ಅವರು ಕನ್ನಡ ಸಿನಿ ಪ್ರೇಕ್ಷಕರಿಗೆ ಗೊತ್ತಿರದ ನಟಿಯೂ ಅಲ್ಲ. 'ಪಲ್ಲಕಿ' ಚಿತ್ರದಲ್ಲಿ ನಟಿಸಿ ಎಲ್ಲರ ಮನ ಗೆದ್ದ ಈ ಸುಂದರಿ ಈಗ ಮತ್ತೆ ಸಿನಿಮಾ ಮಾಡುತ್ತಿದ್ದಾರೆ.

ರಮಣಿತು ಚೌಧರಿ 'ಪಲ್ಲಕಿ', 'ಪಯಣ' ಸೇರಿದಂತೆ ಕೆಲ ಸಿನಿಮಾಗಳನ್ನು ಮಾಡಿದ್ದರು. ಬಳಿಕ ಸಣ್ಣ ಪುಟ್ಟ ಸಿನಿಮಾ ಮಾಡಿ ಹಾಗೆ ಮರೆಯಾಗಿದ್ದರು. ಇನ್ನು 2015ರಲ್ಲಿ 'ಮುತ್ತಿನ ಮಳೆ' ಎಂಬ ಸಿನಿಮಾ ಮಾಡಿದ್ದ ರಮಣಿತು ಚೌಧರಿ ನಂತರ ಕಂಪ್ಲೀಟ್ ಆಗಿ ಕನ್ನಡ ಚಿತ್ರರಂಗದಿಂದ ಮರೆಯಾಗಿದ್ದರು. ಇದೀಗ ಮತ್ತೆ ಎರಡು ವರ್ಷದ ಬಳಿಕ ರಮಣಿತು ಚೌಧರಿ ಬಂದಿದ್ದಾರೆ. ಮುಂದೆ ಓದಿ...

ತಿಲಕ್ ಜೊತೆ ರಮಣಿತು ಚೌಧರಿ

ನಟ ತಿಲಕ್ ಅಭಿನಯದ ಹೊಸ ಸಿನಿಮಾದ ಮೂಲಕ ನಟಿ ರಮಣಿತು ಚೌಧರಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

'₹ 2000' ಚಿತ್ರ

'₹ 2000' ಎಂಬ ವಿಭಿನ್ನ ಸಿನಿಮಾದಲ್ಲಿ ಈಗ ರಮಣಿತು ಚೌಧರಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಮೋಷನ್ ಪೋಸ್ಟರ್

ತಿಲಕ್ ಹಾಗೂ ರಮಣಿತು ಚೌಧರಿ ಅವರ '₹ 2000' ಸಿನಿಮಾದ ಮೋಷನ್ ಪೋಸ್ಟರ್ ಕೂಡ ಈಗಾಗಲೇ ರಿಲೀಸ್ ಆಗಿದೆ.

ಇದೇ ವಾರ ತೆರೆಗೆ ಬರಲಿದೆ ತಿಲಕ್ ನಟನೆಯ 'ಸರ್ವಸ್ವ' ಚಿತ್ರ

ಶಂಕರ್ ನಾಗ್ ಫೋಟೋ

ಚಿತ್ರಕ್ಕೆ '₹ 2000' ಎಂಬ ಟೈಟಲ್ ಇಟ್ಟಿದ್ದು, ಪೋಸ್ಟರ್ ಅನ್ನು 2 ಸಾವಿರ ನೋಟಿನ ರೀತಿಯೇ ಡಿಸೈನ್ ಮಾಡಲಾಗಿದೆ. ವಿಶೇಷ ಅಂದರೆ ಗಾಂಧೀಜಿ ಅವರ ಚಿತ್ರದ ರೀತಿ ನೋಟಿನಲ್ಲಿ ನಟ ಶಂಕರ್ ನಾಗ್ ಚಿತ್ರವಿದೆ.

ಮಂಜು ನಂದನ್ ನಿರ್ದೇಶನ

ಮಂಜು ನಂದನ್ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಕನ್ನಡಿಗರಿಗೋಸ್ಕರ ಎಂಬ ಅಡಿ ಬರಹ ಇದೆ.

English summary
'Pallaki' movie fame actress Ramanithu Chaudhary makes comeback to Sandalwood with '₹2000' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X