For Quick Alerts
  ALLOW NOTIFICATIONS  
  For Daily Alerts

  ಮೂರನೇ ಮಗುವಿಗೆ ಜನ್ಮ ನೀಡಿದ ಬಹುಭಾಷಾ ನಟಿ ರಂಭಾ

  |

  ಬಹುಭಾಷಾ ನಟಿ ರಂಭಾ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ರಂಭಾ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ 'BABY BOY' ಎಂದು ಫೋಟೋ ಹಾಕಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

  2010ರಲ್ಲಿ ಇಂದ್ರಕುಮಾರ್ ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಂಭಾಗೆ ಈಗಾಗಲೇ ಇಬ್ಬರು ಮಕ್ಕಳು ಇದ್ದಾರೆ. ಸೆಪ್ಟೆಂಬರ್ 23ರಂದು ಟೊರೊಂಟೊದಲ್ಲಿರುವ ಮೌಂಟ್ ಸಿನೈ ಆಸ್ಪತ್ರೆಯಲ್ಲಿ ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ. ನಾನು ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದೇವೆ ಎಂದು ತಿಳಿಸಿದ್ದಾರೆ.

  3ನೇ ಮಗುವಿಗೆ ತಾಯಿಯಾದ ರಂಭಾ: ಅದ್ಧೂರಿಯಾಗಿತ್ತು ಸೀಮಂತ ಶಾಸ್ತ್ರ 3ನೇ ಮಗುವಿಗೆ ತಾಯಿಯಾದ ರಂಭಾ: ಅದ್ಧೂರಿಯಾಗಿತ್ತು ಸೀಮಂತ ಶಾಸ್ತ್ರ

  ರಂಭಾ ಉದ್ಯಮಿ ಇಂದ್ರಕುಮಾರ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಈಗಾಗಲೇ ರಂಭಾ ಅವರಿಗೆ 7 ವರ್ಷದ ಲಾನ್ಯ ಮತ್ತು 3 ವರ್ಷದ ಸಾಶಾ ಮಕ್ಕಳಿದ್ದು, ಈಗ ಮೂರನೇ ಮಗುವಾಗಿ ಜನ್ಮ ನೀಡಿದ್ದಾರೆ. ಸದ್ಯ ರಂಭಾ ತನ್ನ ಪತಿ ಹಾಗೂ ಮಕ್ಕಳ ಜೊತೆ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.

  2015ರ ಸಮಯದಲ್ಲಿ ರಂಭಾ ಸಂಸಾರದಲ್ಲಿ ಎಲ್ಲವೂ ಸರಿಯಿರಲಿಲ್ಲ. ಪತಿ ಮನೆಯವರು ಮತ್ತು ರಂಭಾ ಮಧ್ಯೆ ಮನಸ್ತಾಪ ಉಂಟಾಗಿತ್ತು. ಟೊರೊಂಟಾದಿಂದ ರಂಭಾ ಭಾರತಕ್ಕೆ ವಾಪಸ್ ಬಂದಿದ್ದರು. ಇಬ್ಬರು ಡಿವೋರ್ಸ್ ಪಡೆಯುತ್ತಾರೆ ಎಂಬ ಸುದ್ದಿಯಾಗಿತ್ತು. ಆದ್ರೆ, ನಾನು ಪತಿಯೊಂದಿಗೆ ಜೀವಿಸಬೇಕು ಎಂದು ರಂಭಾ ಕೋರ್ಟ್ ಮೆಟ್ಟಿಲೇರಿದ್ದರು. ನಂತರ ಇಂದ್ರಕುಮಾರ್ ಮತ್ತು ರಂಭಾ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದರು. ಇದರ ಪರಿಣಾಮ ಈಗ ಸಂತೋಷದ ದಾಂಪತ್ಯ ಸಾಗಿಸುತ್ತಿದ್ದಾರೆ.

  ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಕನ್ನಡ ಸಿನಿಮಾದಲ್ಲಿ ರಂಭಾ ನಟಿಸಿದ್ದರು. 1993ರಲ್ಲಿ 'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ರಂಭಾ 'ಕೆಂಪಯ್ಯ ಐಪಿಎಸ್', 'ಓ ಪ್ರೇಮವೇ', ಬಾವ ಬಾಮೈದ, ಸಾಹುಕಾರ, ಪಾಂಡುರಂಗವಿಠಲ, ಗಂಡುಗಲಿ ಕುಮಾರ ರಾಮ, ಹಾಗೂ ಕೊನೆಯದಾಗಿ ಅನಾಥರು ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  English summary
  Actress Rambha has given birth to her third child a baby boy.
  Wednesday, September 26, 2018, 20:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X