For Quick Alerts
  ALLOW NOTIFICATIONS  
  For Daily Alerts

  'Rambo 2' ಬಳಿಕ ಮುಂದುವರೆಯಲಿದೆ 'Rambo' ಸೀರಿಸ್ ಸಿನಿಮಾಗಳು

  By Naveen
  |

  ನಟ ಶರಣ್ ಅಭಿನಯದ 'Rambo 2' ಸಿನಿಮಾಗೆ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾಗೆ ಸಿಕ್ಕಿರುವ ಈ ರೆಸ್ಪಾನ್ಸ್ ನಿಂದ ಚಿತ್ರತಂಡ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

   Rambo 2 ವಿಮರ್ಶೆ : ಕಾಮಿಡಿ 'ವೆರೈಟಿ', ಮನರಂಜನೆ ಗ್ಯಾರೆಂಟಿ Rambo 2 ವಿಮರ್ಶೆ : ಕಾಮಿಡಿ 'ವೆರೈಟಿ', ಮನರಂಜನೆ ಗ್ಯಾರೆಂಟಿ

  ಒಂದು ಸಿನಿಮಾ ಗೆದ್ದರೆ ಅದೇ ಸಿನಿಮಾದ ಟೈಟಲ್ ನಲ್ಲಿ ಸೀರಿಸ್ ಸಿನಿಮಾಗಳು ಬರುತ್ತದೆ. ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಈ ರೀತಿ ಪ್ರಯೋಗಗಳು ಹೆಚ್ಚು. ಆದರೆ ಈಗ ಕನ್ನಡದಲ್ಲೂ ಕೂಡ ಅದೇ ರೀತಿಯ ಪ್ರಯತ್ನ ಈಗೀಗ ಹೆಚ್ಚಾಗುತ್ತಿದೆ. 'ದಂಡುಪಾಳ್ಯ' ಸಿನಿಮಾದ ಸೀರಿಸ್ ಗಳ ನಂತರ 'Rambo' ಸಿನಿಮಾದ ಸೀರಿಸ್ ಪ್ರಾರಂಭ ಆಗಿದೆ. Rambo 2' ನಂತರ ಅದೇ ತಂಡ 'Rambo 3' ಸಿನಿಮಾ ಮಾಡುವ ಪ್ಲಾನ್ ಮಾಡಿದೆ.

  ಅಂದಹಾಗೆ, ಈ ಚಿತ್ರದಲ್ಲಿಯೂ ಶರಣ್ ಅವರೇ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಎರಡು ಭಾಗಗಳಂತೆ ಈ ಚಿತ್ರವೂ ಕಾಮಿಡಿ ಕಥೆ ಹೊಂದಿರಲಿದೆಯಂತೆ. ಇನ್ನು ಮೇ 18 ರಂದು ಬಿಡುಗಡೆಯಾಗಿದ್ದ 'Rambo 2' ಸಿನಿಮಾ ಸದ್ಯ ಎರಡು ವಾರ ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ.

  'Rambo 2' ವಿಮರ್ಶೆ

  ಕೃಷ್ಣ (ಶರಣ್) ಮತ್ತು ಮಯೂರಿ (ಆಶಿಕಾ ರಂಗನಾಥ್) ಇಬ್ಬರು ಮಾಡ್ರನ್ ಪ್ರೇಮಿಗಳು. ಈ ಇಬ್ಬರು ಒಂದು ದಿನದ ಮಟ್ಟಿಗೆ ಡೇಟಿಂಗ್ ಎಂದು ಲಾಂಗ್ ಡ್ರೈವ್ ಹೋಗುತ್ತಾರೆ. ಆ ಜರ್ನಿಯೇ ಇಡೀ ಸಿನಿಮಾದ ಕಥೆ. ಇಬ್ಬರು ಲವರ್ಸ್ ಗಳ ಕಾರು ಪ್ರಯಾಣದಲ್ಲಿ ನಡೆಯುವ ಘಟನೆಗಳ ಸುತ್ತ ಸಿನಿಮಾ ನಿಂತಿದೆ. ಆ ಪ್ರಯಾಣದಲ್ಲಿ ನಗು, ಅಳು, ರೋಚಕತೆ, ಕುತೂಹಲ ಹೀಗೆ ಎಲ್ಲ ಅಂಶಗಳು ಇವೆ.

  English summary
  After 'Rambo 2' Tharun sudeer and team planning to do 'Rambo' movie series.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X