ರಮೇಶ್ ಅರವಿಂದ್ ಈಗ ಕೊರೊನಾ ವೈರಸ್ ಜಾಗೃತಿ ರಾಯಭಾರಿ
ಕೊರೊನಾ ವೈರಸ್ ಕುರಿತಾದ ನಿಖರ ಮಾಹಿತಿಗಳನ್ನು ಒದಗಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಟ, ನಿರ್ದೇಶಕ ರಮೇಶ್ ಅರವಿಂದ್ ಅವರನ್ನು ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
Recommended Video
ಕೊರೊನಾ ವೈರಸ್ ಸಂಕಷ್ಟವನ್ನು ನಿಯಂತ್ರಿಸಲು ನೆರವಾಗುವಂತೆ ಅದರ ಕುರಿತು ಜನರಿಗೆ ಅಧಿಕೃತ ಮಾಹಿತಿ ಒದಗಿಸಲು ರಮೇಶ್ ಅರವಿಂದ್ ನೆರವಾಗಲಿದ್ದಾರೆ. ಬಿಬಿಎಂಪಿಗೆ ನೂತನವಾಗಿ ನೇಮಕಗೊಂಡಿರುವ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸೋಮವಾರ ಬೆಳಿಗ್ಗೆ ರಮೇಶ್ ಅರವಿಂದ್ ಅವರಿಗೆ ಕರೆ ಮಾಡಿ ಈ ಹೊಸ ಜವಾಬ್ದಾರಿಯ ವಿವರ ನೀಡಿದ್ದಾರೆ.
ಕೊರೊನಾ ವೈರಸ್ ಸಂಕಷ್ಟವನ್ನು ನಿಭಾಯಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಪರಿಣಾಮಕಾರಿ ಫಲಿತಾಂಶಕ್ಕಾಗಿ ಈ ಸಮಿತಿಗೆ ವಿವಿಧ ವಲಯಗಳ ಜನರನ್ನು ಸೇರಿಸಿಕೊಳ್ಳಲಾಗಿದೆ. ತಮ್ಮ ವೈಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿರುವುದಾಗಿ ರಮೇಶ್ ಅರವಿಂದ್ ತಿಳಿಸಿದ್ದರು. ಈಗ ಸವಾಲು ಇನ್ನಷ್ಟು ದೊಡ್ಡದಾಗಿರುವುದರಿಂದ ರಾಜ್ಯ ಸರ್ಕಾರ ಅವರಿಗೆ ಈ ಜವಾಬ್ದಾರಿ ನೀಡಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಜನರಲ್ಲಿ ವಿವಿಧ ಜಾಗೃತಿ ಮೂಡಿಸಲು ಹಾಗೂ ಅವರಿಗೆ ಮಾಹಿತಿ ಒದಗಿಸುವ ಕಾರ್ಯವನ್ನು ಬಿಬಿಎಂಪಿಯ ರಾಯಭಾರಿಯಾಗಿ ರಮೇಶ್ ಅರವಿಂದ್ ನಿಭಾಯಿಸಲಿದ್ದಾರೆ. ಕೋವಿಡ್ 19 ನಿಭಾಯಿಸುವ ಸಲುವಾಗಿ ರಚಿಸಲಾಗಿರುವ ಬಿಬಿಎಂಪಿ ಕೋವಿಡ್ 19 ಟಾಸ್ಕ್ ಫೋರ್ಸ್‌ನಲ್ಲಿಯೂ ರಮೇಶ್ ಅರವಿಂದ್ ಭಾಗಿಯಾಗಿದ್ದಾರೆ.


Click it and Unblock the Notifications











