For Quick Alerts
  ALLOW NOTIFICATIONS  
  For Daily Alerts

  ನಿಷ್ಠಾವಂತ ಮೇಕಪ್ ಮ್ಯಾನ್ ನಿಧನಕ್ಕೆ ಕಂಬನಿ ಮಿಡಿದ ನಟ ರಮೇಶ್ ಅರವಿಂದ್

  |

  ಬಹುಭಾಷಾ ನಟ ರಮೇಶ್ ಅರವಿಂದ್ ಅವರ ಬಹುಕಾಲದ ಗೆಳೆಯ ಮತ್ತು ಮೇಕಪ್ ಮ್ಯಾನ್ ಸೂರಿಬಾಬು ನಿಧನ ಹೊಂದಿದ್ದಾರೆ. ನಿನ್ನೆ ಭಾನುವಾರ (ಆಗಸ್ಟ್ 23) ಹೈದರಾಬಾದ್ ನಲ್ಲಿ ಸೂರಿಬಾಬು ಕೊನೆಯುಸಿರೆಳೆದಿದ್ದಾರೆ. ಸದಾ ಜೊತೆಯಲ್ಲಿಯೇ ಇರುತ್ತಿದ್ದ ಗೆಳೆಯನ ನಿಧನಕ್ಕೆ ರಮೇಶ್ ಅರವಿಂದ್ ಕಂಬನಿ ಮಿಡಿದಿದ್ದಾರೆ.

  Brahma ಚಿತ್ರದಲ್ಲಿನ ರೋಮಾಂಚಕ ಫೈಟ್ ಸೀನ್ ತಯಾರಾಗಿದ್ದು ಹೀಗೆ | Action Scene Making | Filmibeat Kannada

  ಸುಮಾರು 20 ವರ್ಷಗಳಿಂದ ಸೂರಿಬಾಬು, ರಮೇಶ್ ಅರವಿಂದ್ ಅವರಿಗೆ ಸ್ನೇಹಿತರಾಗಿದ್ದರು. ಸಿನಿಮಾ, ರಿಯಾಲಿಟಿ ಶೋ, ಎಲ್ಲಾ ಕಾರ್ಯಕ್ರಮಗಳಲ್ಲಿಯೂ ರಮೇಶ್ ಅರವಿಂದ್ ಅವರ ಜೊತೆಯೇ ಇದ್ದು, ಅವರಿಗೆ ಮೇಕಪ್, ಟಚ್ ಅಪ್ ಮಾಡುತ್ತಿದ್ದಿದ್ದು ಇದೇ ಸೂರಿಬಾಬು. ರಮೇಶ್ ಅರವಿಂದ್ ಅವರ ಸುಂದರ ಮುಖದ ಹಿಂದೆ ಸೂರಿಬಾಬು ಅವರ ಕೈಚಳಕವಿತ್ತು ಎಂದರೆ ತಪ್ಪಾಗಲ್ಲ.

  ಗಡಿದಾಟಿ ಹೋಗಲಿದೆ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್'ಗಡಿದಾಟಿ ಹೋಗಲಿದೆ ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್'

  ಬಹುಕಾಲದ ಗೆಳೆಯನ ಅಗಲಿಕೆ ಬಗ್ಗೆ ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. "ಸೂರಿಬಾಬು 20 ವರ್ಷಗಳಿಂದ ನನ್ನ ಮೇಕಪ್ ಮ್ಯಾನ್. ಅತ್ಯುತ್ತಮ ಕೆಲಸಗಾರ, ಶ್ರಮ ಜೀವಿ, ನಿಷ್ಠಾವಂತ, ನಾನು ನಟಿಸಿದ ಪ್ರತಿ ಶಾಟ್ ಹಿಂದೆ ಅವರ 'ಟಚ್ ಅಪ್' ಇರುತ್ತಿತ್ತು. ನಿನ್ನೆ, ಹೈದರಾಬಾದ್ ನಲ್ಲಿ, ನಮ್ಮನ್ನು ಬಿಟ್ಟು ಅಗಲಿದ್ದಾರೆ. ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಬರೆದು ಗೆಳೆಯನಿಗೆ ಭಾವುಕ ವಿದಾಯ ಹೇಳಿದ್ದಾರೆ.

  ನಿಷ್ಠಾವಂತ, ಶ್ರಮ ಜೀವಿ ಗೆಳೆಯ ಸೂರಿ ಬಾಬು ಜೊತೆಗಿನ ಫೋಟೋಗಳನ್ನು ರಮೇಶ್ ಅರವಿಂದ್ ಹಂಚಿಕೊಂಡಿದ್ದಾರೆ. ಸದ್ಯ ಕೊರೊನಾ ಲಾಕ್ ಡೌನ್ ನಿಂದ ಯಾವುದೇ, ಸಿನಿಮಾ, ರಿಯಾಲಿಟಿ ಮತ್ತು ಕಾರ್ಯಕ್ರಮಗಳು ಇರಲಿಲ್ಲ. ಹಾಗಾಗಿ ಕೆಲಸವಿಲ್ಲದ ಸೂರಿಬಾಬು ಕೆಲವು ತಿಂಗಳಿಂದ ಹೈದರಾಬಾದ್ ನಲ್ಲಿ ನೆಲೆಸಿದ್ದರು. ಇನ್ನೇನು ಶೂಟಿಂಗ್ ಪ್ರಾರಂಭವಾಗುತ್ತೆ. ಕೆಲಸಕ್ಕೆ ಮರಳಬೇಕು ಎನ್ನುವಷ್ಟೊತ್ತಿಗೆ ಸೂರಿಬಾಬು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

  English summary
  Actor Ramesh Aravind lost his Makeup Artist. He mourns his makeup Man and friend Suri Babu death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X