For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾಕ್ಕೆ ಹಾರಲಿರುವ ರಮೇಶ್ 'ನಮ್ಮಣ್ಣ ಡಾನ್'

  |

  ನಟ, ನಿರ್ದೇಶಕನಾಗಿ ಕನ್ನಡ ಹಾಗೂ ದಕ್ಷಿಣಭಾರತದಲ್ಲಿ ತನ್ನದೇ ಆದ 'ಚಾರ್ಮ್' ಹೊಂದಿರುವ ನಟ ರಮೇಶ್, ಇದೀಗ 'ನಮ್ಮಣ್ಣ ಡಾನ್' ಆಗಿದ್ದಾರೆಂಬುದು ಎಲ್ಲರಿಗೂ ಗೊತ್ತು. ಇನ್ನೇನು ಸದ್ಯದಲ್ಲೇ (ಬಹುಶಃ ಫೆಬ್ರವರಿ 17, 2012) ಬಿಡುಗಡೆ ಆಗಲಿರುವ ಈ ಚಿತ್ರ, ಕರ್ನಾಟಕ ರಾಜ್ಯದಾದ್ಯಂತ ಮಾತ್ರವಲ್ಲದೇ ಮುಂಬೈ, ಗೋವಾ ಹಾಗೂ ಪುಣೆಯಲ್ಲೂ ಪ್ರದರ್ಶನವಾಗಲಿದೆ.

  ರಮೇಶ್ "ಕನ್ನಡ ಚಿತ್ರಗಳಿಗೆ ಹೊರ ರಾಜ್ಯಗಳಲ್ಲೂ ಬೇಡಿಕೆಯಿದೆ. ಆದರೆ ಅಲ್ಲಿ ವಿತರಣೆ ಮಾಡಲು ಯಾರೂ ಒಪ್ಪುತ್ತಿಲ್ಲ. ಆದರೆ ನಾವು ಹಾಕಿಕೊಂಡ ಪ್ಲಾನ್ ಪ್ರಕಾರ ನಡೆದರೆ ಹೊರ ರಾಜ್ಯಗಳಲ್ಲೂ ನಮ್ಮಣ್ಣ ಡಾನ್ ಪ್ರದರ್ಶನವಾಗಲಿದೆ" ಎಂದಿದ್ದಾರೆ. ಇಷ್ಟೇ ಅಲ್ಲದೇ ಈ ಚಿತ್ರವನ್ನು ರಮೇಶ್ ಅಮೆರಿಕಾದಲ್ಲೂ ಬಿಡುಗಡೆ ಮಾಡುತ್ತಾರಂತೆ.

  ಏಪ್ರಿಲ್ ಅಥವಾ ಮೇನಲ್ಲಿ ರಮೇಶ್ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಕೂಡ ನಮ್ಮಣ್ಣ ಡಾನ್ ಚಿತ್ರದ ಪ್ರದರ್ಶನ ಮಾಡಿಸಲಿದ್ದಾರಂತೆ. ಈ ಮೊದಲು ಕೋಮಲ್ ಚಿತ್ರ 'ಕಳ್ ಮಂಜ' ಅಮೆರಿಕಾಗೆ ಹೋಗಿ ಬಂದಿತ್ತು. ಮುಂದೆ ನಮ್ಮಣ್ಣ ಡಾನ್ ಅಮೆರಿಕಾಗೆ ಹಾರಲಿದ್ದಾನೆ. ಅಲ್ಲಿರುವ ಕನ್ನಡಿಗರು ಹಾಗೂ ಉಳಿದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗೆ ಎಂಬುದನ್ನು ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Actor Ramesh Aravind releases his upcoming movie kannada movie 'Nammanna Don' in USA, on coming April or May.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X