For Quick Alerts
  ALLOW NOTIFICATIONS  
  For Daily Alerts

  ಅಪ್ಪ-ಮಗಳ ಮುದ್ದಾದ 'ಪುಷ್ಪಕ ವಿಮಾನ' ನೋಡಿದ್ರಾ?

  By Suneetha
  |

  ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಮತ್ತು ಬೇಬಿ ಯುವಿನಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಪುಷ್ಪಕ ವಿಮಾನ' ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.

  ಅಪ್ಪ ಮತ್ತು ಮಗಳ ಅನ್ಯೋನ್ಯ ಮತ್ತು ಅದ್ಭುತ ಪ್ರೀತಿಯನ್ನು ಸಾರುವ 'ಪುಷ್ಪಕ ವಿಮಾನ' ಸಿನಿಮಾದ ಟೀಸರ್ ಸಿನಿಪೊಲೀಸ್ ETA ಮಾಲ್ ನಲ್ಲಿ ಬಿಡುಗಡೆ ಆಗಿದ್ದು, ಅದನ್ನು ಯುಟ್ಯೂಬ್ ಗೆ ಅಪ್ ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಸುಮಾರು 50 ಸಾವಿರ ಮಂದಿಯ ವೀಕ್ಷಣೆಗೆ ಒಳಪಟ್ಟು ಅದ್ಭುತ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

  ಅಪ್ಪನ ಪಾತ್ರದಲ್ಲಿ ಮಿಂಚಿರುವ ನಿರ್ದೇಶಕ ಕಮ್ ನಿರ್ಮಾಪಕ ರಮೇಶ್ ಅರವಿಂದ್ ಅವರ ಮುಗ್ದ ನಟನೆ ಹಾಗೂ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೇಬಿ ಯುವಿನಾ ಅವರ ಮುದ್ದಾದ ನಗು ಹಾಗೂ ನಟನೆ ಈ ಟೀಸರ್ ನ ಹೈಲೈಟ್.

  ಕ್ಯಾಮೆರಾ ಮೆನ್ ಭುವನ್ ಗೌಡ ಅವರ ಕೈ ಚಳಕದಲ್ಲಿ ಚಿತ್ರದ ಮೇಕಿಂಗ್ ಅದ್ಭುತವಾಗಿ ಮೂಡಿಬಂದಿದೆ. ತುಂಬಾ ಸುಂದರವಾಗಿ ಮನಕಲಕುವಂತಿರುವ ಸಂಗೀತ ಕೂಡ ಈ ಟೀಸರ್ ನ ಪ್ಲಸ್ ಪಾಯಿಂಟ್. ಚಿತ್ರಕ್ಕೆ ಸಂಗೀತ ನಿರ್ದೇಶಕ ಚರಣ್ ರಾಜ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  ಇತ್ತೀಚೆಗೆ ಈ ಚಿತ್ರ ಸೆಟ್ಟೇರಿದ್ದು ಸುಮಾರು 10 ದಿನಗಳ ಕಾಲದ ಶೂಟಿಂಗ್ ಈಗಾಗಲೇ ಮುಗಿದಿದೆ. ನವ ನಿರ್ದೇಶಕ ರವಿಂದ್ರನಾಥ್ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ.

  ರಮೇಶ್ ಅರವಿಂದ್ ಮತ್ತು ಬೇಬಿ ಯುವಿನಾಳ ಅದ್ಭುತ ಪ್ರೀತಿಯನ್ನು ಸವಿಯಲು ಈ ವಿಡಿಯೋ ನೋಡಿ......

  English summary
  Watch Ramesh Aravinds Pushpaka Vimana Official Teaser. Music Composed by Charan Raj. Directed by S Ravindranath.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X