For Quick Alerts
  ALLOW NOTIFICATIONS  
  For Daily Alerts

  'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ಖಳನಾಯಕ ಯಾರು ಗೊತ್ತಾ.? ಆಶ್ಚರ್ಯ ಪಡ್ತೀರಾ.!

  By Harshitha
  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಸಿನಿಮಾ 'ಇನ್ಸ್ ಪೆಕ್ಟರ್ ವಿಕ್ರಂ'. ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದಂದು 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಟೀಸರ್ ಬಿಡುಗಡೆ ಆಗಿತ್ತು.

  1989 ರಲ್ಲಿ ಬಿಡುಗಡೆ ಆಗಿದ್ದ ಶಿವರಾಜ್ ಕುಮಾರ್ ಅಭಿನಯದ 'ಇನ್ಸ್ ಪೆಕ್ಟರ್ ವಿಕ್ರಂ' ಶೀರ್ಷಿಕೆಯನ್ನೇ ಮರುಬಳಕೆ ಮಾಡಿರುವ ಕಾರಣ ಈ ಸಿನಿಮಾದ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ.

  ಚಿತ್ರದ ಟೈಟಲ್ ಸೂಚಿಸುವ ಹಾಗೆ, ಇದರಲ್ಲಿ ನಾಯಕ ಪ್ರಜ್ವಲ್ ದೇವರಾಜ್ ಇನ್ಸ್ ಪೆಕ್ಟರ್. ಖಾಕಿ ತೊಟ್ಟು ವಿಲನ್ ಗಳ ರುಂಡ ಚೆಂಡಾಡುವ ಪಾತ್ರಕ್ಕಾಗಿ ಪ್ರಜ್ವಲ್ ದೇವರಾಜ್ ಬಣ್ಣ ಹಚ್ಚಿದ್ದಾರೆ.

  ಸದ್ಯ ಇದೇ ಚಿತ್ರಕ್ಕೆ ವಿಲನ್ ಫೈನಲೈಸ್ ಆಗಿದ್ದಾರೆ. ಹಾಗಾದ್ರೆ, 'ಇನ್ಸ್ ಪೆಕ್ಟರ್ ವಿಕ್ರಂ' ಮುಂದೆ ತೊಡೆ ತಟ್ಟಿ ನಿಲ್ಲುವ ಕೇಡಿ ಯಾರು ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ...

  ವಿಲನ್ ಆದ ರಮೇಶ್ ಅರವಿಂದ್

  ವಿಲನ್ ಆದ ರಮೇಶ್ ಅರವಿಂದ್

  ನಿಮಗೆ ಆಶ್ಚರ್ಯ ಆದರೂ ಇದೇ ಸತ್ಯ. 'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದಲ್ಲಿ ನಟ ರಮೇಶ್ ಅರವಿಂದ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೂ ಹೀರೋ ಆಗಿ, ತ್ಯಾಗರಾಜನಾಗಿ ಮಿಂಚಿದ್ದ ರಮೇಶ್ ಇದೀಗ ಕೇಡಿ ಆಗಿದ್ದಾರೆ.

  ಪ್ರಜ್ವಲ್ ಹುಟ್ಟುಹಬ್ಬಕ್ಕೆ ಬಂತು 'ಇನ್ಸ್ ಪೆಕ್ಟರ್ ವಿಕ್ರಂ' ಟೀಸರ್ಪ್ರಜ್ವಲ್ ಹುಟ್ಟುಹಬ್ಬಕ್ಕೆ ಬಂತು 'ಇನ್ಸ್ ಪೆಕ್ಟರ್ ವಿಕ್ರಂ' ಟೀಸರ್

  ಮೊದಲ ಬಾರಿ ಏನಲ್ಲ.!

  ಮೊದಲ ಬಾರಿ ಏನಲ್ಲ.!

  ನಟ ರಮೇಶ್ ಅರವಿಂದ್ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. 'ಅಮೃತವರ್ಷಿಣಿ' ಸಿನಿಮಾದಲ್ಲೂ ನಟ ರಮೇಶ್ ನೆಗೆಟಿವ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

  ಪ್ರಜ್ವಲ್ ಹುಟ್ಟುಹಬ್ಬಕ್ಕೆ ಬಂತು 'ಇನ್ಸ್ ಪೆಕ್ಟರ್ ವಿಕ್ರಂ' ಟೀಸರ್ಪ್ರಜ್ವಲ್ ಹುಟ್ಟುಹಬ್ಬಕ್ಕೆ ಬಂತು 'ಇನ್ಸ್ ಪೆಕ್ಟರ್ ವಿಕ್ರಂ' ಟೀಸರ್

  ಸಿನಿಮಾದಲ್ಲಿ ದರ್ಶನ್ ಕೂಡ ಇರ್ತಾರೆ.!

  ಸಿನಿಮಾದಲ್ಲಿ ದರ್ಶನ್ ಕೂಡ ಇರ್ತಾರೆ.!

  ವಿಶೇಷ ಅಂದ್ರೆ, ಇದೇ 'ಇನ್ಸ್ ಪೆಕ್ಟರ್ ವಿಕ್ರಂ' ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಈಗ ರಮೇಶ್ ಅರವಿಂದ್ ಕೂಡ ಸೇರ್ಪಡೆ ಆಗಿರುವ ಕಾರಣ, ಚಿತ್ರಕ್ಕೆ ಬಹು ತಾರಾ ಮೆರುಗು ಲಭಿಸಿದೆ.

  'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಕುರಿತು

  'ಇನ್ಸ್ ಪೆಕ್ಟರ್ ವಿಕ್ರಂ' ಚಿತ್ರದ ಕುರಿತು

  ವಿಖ್ಯಾತ್ ಪ್ರೊಡಕ್ಷನ್ ಸಂಸ್ಥೆಯಲ್ಲಿ 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರ ನಿರ್ಮಾಣ ಆಗಲಿದ್ದು, ನರಸಿಂಹ ನಿರ್ದೇಶನ ಮಾಡಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣವಿದ್ದು, ಗುರುಪ್ರಸಾದ್ ಕಶ್ಯಪ್ ಸಂಭಾಷಣೆ ಬರೆಯಲಿದ್ದಾರೆ. ಅನೂಪ್ ಸಿಳೀನ್ ಅವರ ಸಂಗೀತ ಮತ್ತು ಹಿನ್ನಲೆ ಸಂಗೀತ ಈ ಚಿತ್ರಕ್ಕಿದೆ. ಈಗಾಗಲೇ 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರದ ಚಿತ್ರೀಕರಣ ಶುರುವಾಗಿದೆ.

  English summary
  Kannada Actor Ramesh Aravind to play negative role in 'Inspector Vikram'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X