»   » ರಮೇಶ್ ಅರವಿಂದ್ 'ಉತ್ತಮ ವಿಲನ್' ತಾಜಾ ಚಿತ್ರ

ರಮೇಶ್ ಅರವಿಂದ್ 'ಉತ್ತಮ ವಿಲನ್' ತಾಜಾ ಚಿತ್ರ

Posted By:
Subscribe to Filmibeat Kannada

ರಮೇಶ್ ಅರವಿಂದ್ ಅವರ ಆಕ್ಷನ್ ಕಟ್ ನಲ್ಲಿ ಮೂಡಿಬರುತ್ತಿರುವ ತಮಿಳು ಚಿತ್ರ 'ಉತ್ತಮ ವಿಲನ್' ಇನ್ನೇನು ತೆರೆಕಾಣಲು ಸಿದ್ಧವಾಗಿದೆ. ಸಕಲ ಕಲಾವಲ್ಲಭ ಕಮಲ್ ಹಾಸನ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಚಿತ್ರಾಸಕ್ತರು ಕುತೂಹಲದಿಂದ ಎದುರು ನೋಡುವಂತಾಗಿದೆ.

ಕಮಲ್ ಹಾಸನ್ ಅವರ ಚಿತ್ರ ಎಂದರೆ ಕೇಳಬೇಕೆ. ಏನೋ ವಿಶೇಷ, ಹೊಸತನ ಇದ್ದೇ ಇರುತ್ತದೆ. ಇನ್ನು ರಮೇಶ್ ಅರವಿಂದ್ ಅವರ ನಿರ್ದೇಶನ ಎಂದರೂ ಕುತೂಹಲ ಇದ್ದೇ ಇದೆ. ಈ ಚಿತ್ರದ ತಾಜಾ ಸ್ಟಿಲ್ ಬಿಡುಗಡೆಯಾಗಿದ್ದು ನೋಡುಗರ ಕಣ್ಮನ ಸೆಳೆಯುವಂತಿದೆ. [ರಮೇಶ್-ಕಮಲ್ ಕಾಂಬಿನೇಷನ್ 'ಉತ್ತಮ ವಿಲನ್']


ಈ ಚಿತ್ರದಲಿ ಕಮಲ್ ಅವರು ನಾನಾ ತರಹದ ಗೆಟಪ್ ಗಳಲ್ಲಿ ಕಾಣಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಆ ಚಿತ್ರದ ಸ್ಟಿಲ್ಸ್. ಇದೀಗ ಬಿಡುಗಡೆಯಾಗಿರುವ ತಾಜಾ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಪಾಪನಾಶನಂ (ದೃಶ್ಯಂ ರೀಮೇಕ್) ಹಾಗೂ ವಿಶ್ವರೂಪಂ 2 ಚಿತ್ರಗಳಲ್ಲೂ ಕಮಲ್ ಬಿಜಿಯಾಗಿದ್ದಾರೆ.

ಉತ್ತಮ ವಿಲನ್ ಚಿತ್ರೀಕರಣ ಚೆನ್ನೈ, ಮಧ್ಯಪ್ರದೇಶ, ಟರ್ಕಿ ಹಾಗೂ ಇನ್ನಿತರ ಕಡೆಗಳಲ್ಲಿ ನಡೆಡಿದೆ. 21ನೇ ಶತಮಾನದ ಸಿನಿಸ್ಟಾರ್ ಹಾಗೂ 8ನೇ ಶತಮಾನದ ಡ್ರಾಮಾ ನಟ ಹೀಗೆ ದ್ವಿಪಾತ್ರದಲ್ಲಿ ಕಮಲಹಾಸನ್ ಕಾಣಿಸಿಕೊಳ್ಳುತ್ತಿದ್ದಾರೆ.

ತಿರುಪತಿ ಬ್ರದರ್ಸ್ ನಿರ್ಮಾಣದ ಈ ಚಿತ್ರದಲ್ಲಿ ಕೆ ವಿಶ್ವನಾಥ್, ಕೆ ಬಾಲಚಂದರ್, ಜಯರಾಮನ್, ಪಾರ್ವತಿ ಮೆನನ್, ಊರ್ವಶಿ, ಎಂಎಸ್ ಭಾಸ್ಕರ್ ಅವರು ತಾರಾಗಣದಲ್ಲಿದ್ದಾರೆ. ಹಲವು ದಿಗ್ಗಜರನ್ನು ಒಟ್ಟುಗೂಡಿಸಿ ತೆರೆಯ ಮೇಲೆ ಕಾಣುವಂತೆ ಮಾಡುವಲ್ಲಿ ರಮೇಶ್ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಿದೆ. (ಏಜೆನ್ಸೀಸ್)

English summary
Versatile actor Kamal Hassan’s new and different look in the film Uttama Villain, directed by Ramesh Aravind, has been out. Kamal will be seen in different avatars in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada