For Quick Alerts
  ALLOW NOTIFICATIONS  
  For Daily Alerts

  ಸೂರತ್ಕಲ್ ನಲ್ಲಿ 'ಡಿಟೆಕ್ಟಿವ್' ಆದ ನಟ ರಮೇಶ್ ಅರವಿಂದ್

  |

  'ಬಟರ್ ಫ್ಲೈ' ಸಿನಿಮಾ ನಿರ್ದೇಶನದ ನಂತರ ರಮೇಶ್ ಅರವಿಂದ್ ಡಿಟೆಕ್ಟಿವ್ ಕೆಲಸ ಮಾಡುತ್ತಿದ್ದಾರೆ. ಅಂದರೆ ರಿಯಲ್ ಆಗಿ ಅಲ್ಲ ರೀಲ್ ಮೇಲೆ. 'ಪುಷ್ಪಕ ವಿಮಾನ' ಚಿತ್ರದ ನಂತರ ರಮೇಶ್ ಅರವಿಂದ್ ನಿರ್ದೇಶನದ ಕಡೆ ಬ್ಯುಸಿಯಾಗಿದ್ದರು. ಈಗ ಮತ್ತೆ ಡಿಟೆಕ್ವಿವ್ ಅಧಿಕಾರಿಯಾಗಿ ತೆರೆ ಮೇಲೆ ಬರಲು ಸಿದ್ದವಾಗುತ್ತಿದ್ದಾರೆ.

  ನಿರ್ದೇಶಕ ಆಕಾಶ್ ಶ್ರೀವಾಸ್ತವ್ ನಿರ್ದೇಶನದ ಚಿತ್ರದಲ್ಲಿ ರಮೇಶ್ ಅರವಿಂದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಶೇಕಡಾ 30 ರಷ್ಟು ಚಿತ್ರೀಕರಣ ಮಾಡಿಮುಗಿಸಿರುವ ಚಿತ್ರತಂಡ ಇನ್ನೂ ಟೈಟಲ್ ಫೈನಲ್ ಮಾಡಿರಲಿಲ್ಲ. ಆದ್ರೀಗ ಚಿತ್ರಕ್ಕೆ 'ಶಿವಾಜಿ ಸೂರತ್ಕಲ್' ಅಂತ ಟೈಟಲ್ ಇಡುವ ಮೂಲಕ ಚಿತ್ರಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

  ಪವರ್ ಸ್ಟಾರ್ ರನ್ನ ಭೇಟಿ ಮಾಡಿದ ರಾಧಿಕಾ ಕುಮಾರಸ್ವಾಮಿ

  ಚಿತ್ರದಲ್ಲಿ ರಮೇಶ್ ಅರವಿಂದ್ ಇದುವರೆಗೂ ಕಾಣಿಸಿಕೊಳ್ಳದಂತಹ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಗಡ್ ಲುಕ್ ನಲ್ಲಿ ಮಿಂಚಿರುವ ರಮೇಶ್ ಅರವಿಂದ್ ಅವರ ಮೊದಲ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ಇನ್ನು ಚಿತ್ರದಲ್ಲಿ ರಾಧಿಕಾ ಚೇತನ್ ಮತ್ತು ಆರೋಹಿ ನಾರಾಯಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣವನ್ನು ಮುಂದಿನ ವಾರ ಶುರುಮಾಡಲಿದೆ.

  ರಮೇಶ್ ಅರವಿಂದ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ' ಚಿತ್ರದ ನಂತರ ರಾಧಿಕಾ ಕುಮಾರಸ್ವಾಮಿ ಜೊತೆ ಭೈರಾದೇವಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಾದ ಬಳಿಕ ಈ ಸೂರತ್ಕಲ್ ಡಿಟೆಕ್ಟಿವ್ ಸಿನಿಮಾ ಆರಂಭಿಸಿದ್ದಾರೆ.

  English summary
  Ramesh Arvind next movie titled Shivaji Surathkal. In this movie Ramesh playing a major role as detective officer, directed by akash srivastava.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X