»   » ರಮೇಶ್-ಗಣೇಶ್ ಕಾಂಬಿನೇಷನ್ ನ ಚಿತ್ರದ ಹೆಸರೇನು ಗೊತ್ತಾ?

ರಮೇಶ್-ಗಣೇಶ್ ಕಾಂಬಿನೇಷನ್ ನ ಚಿತ್ರದ ಹೆಸರೇನು ಗೊತ್ತಾ?

Posted By:
Subscribe to Filmibeat Kannada

ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ನಟ ನಾನಿ ಮತ್ತು ಲಾವಣ್ಯ ತ್ರಿಪಾಟಿ ಜುಗಲ್ ಬಂದಿಯ 'ಭಲೇ ಭಲೇ ಮಗಾಡಿವೋಯ್' ಸಿನಿಮಾ ಕನ್ನಡಕ್ಕೆ ರೀಮೇಕ್ ಆಗುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ ಅಲ್ವಾ?.

ಕನ್ನಡ ಅವತರಣಿಕೆಯಲ್ಲಿ ನಾಯಕ ನಟನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಾಯಕಿ ನಟಿಯಾಗಿ ಶಾನ್ವಿ ಶ್ರೀವಾತ್ಸವ್ ಅವರು ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಇದೀಗ ಟೈಟಲ್ ಕೂಡ ಫಿಕ್ಸ್ ಮಾಡಲಾಗಿದೆ.[ಫೆಬ್ರವರಿಯಲ್ಲಿ 'ಭಲೇ ಭಲೇ' ಅಂತಾರೆ ರಮೇಶ್-ಗಣೇಶ್]

ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಜೊತೆಗೆ ಕಾಮಿಡಿ ಸಿನಿಮಾವಾಗಿರುವ ಈ ಸಿನಿಮಾ ಕನ್ನಡ ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡೋದ್ರಲ್ಲಿ ಅನುಮಾನವೇ ಇಲ್ಲ.[ಚಿನ್ನದ ಹುಡುಗನಿಗೆ ಆಕ್ಷನ್-ಕಟ್ ಹೇಳ್ತಾರಂತೆ, ರಮೇಶ್ ಅರವಿಂದ್.!]

ಅಂದಹಾಗೆ ತೆಲುಗು 'ಭಲೇ ಭಲೇ ಮಗಾಡಿವೋಯ್' ಸಿನಿಮಾದ ರೀಮೇಕ್ ಕನ್ನಡ ಅವತರಣಿಕೆಯಲ್ಲಿ ಚಿತ್ರಕ್ಕೆ ಈಗಾಗಲೇ ಫಿಕ್ಸ್ ಮಾಡಿರುವ ಟೈಟಲ್ ಏನು?, ಅಷ್ಟಕ್ಕೂ ಚಿತ್ರೀಕರಣ ಯಾವಾಗ ಆರಂಭ, ಮುಂತಾದ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

ಕನ್ನಡ ವರ್ಷನ್ ನಲ್ಲಿ ಚಿತ್ರದ ಹೆಸರು

ತೆಲುಗಿನ 'ಭಲೇ ಭಲೇ ಮಗಾಡಿವೋಯ್' ಸಿನಿಮಾ ಕನ್ನಡ ಅವತರಣಿಕೆಯಲ್ಲಿ 'ಗಂಡು ಎಂದರೆ ಗಂಡು' ಎಂಬ ಹೆಸರಿನಲ್ಲಿ ಮೂಡಿ ಬರಲಿದೆ. ಅಂದಹಾಗೆ ಈ ಟೈಟಲ್ ಕೇಳಿದ ಕೂಡಲೇ ವರನಟ ಡಾ.ರಾಜ್ ಅವರ ಸೂಪರ್ ಹಿಟ್ ಸಿನಿಮಾ 'ಬಹದ್ದೂರ್ ಗಂಡು' ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ನೆನಪಿಸುತ್ತದೆ.[ಗೋಲ್ಡನ್ ಸ್ಟಾರ್ ಗಣಿಗೆ 'ಭಲೇ ಭಲೇ' ಎಂದ ರಾಕ್ ಲೈನ್!]

24 ರಿಂದ ಶೂಟಿಂಗ್ ಆರಂಭ

ಈಗಾಗಲೇ ಚಿತ್ರಕ್ಕೆ ಟೈಟಲ್ 'ಗಂಡು ಎಂದರೆ ಗಂಡು' ಎಂಬುದಾಗಿ ಫಿಕ್ಸ್ ಮಾಡಿರುವ ಚಿತ್ರತಂಡ ಚಿತ್ರದ ಶೂಟಿಂಗ್ ಅನ್ನು ಫೆಬ್ರವರಿ 24ರಿಂದ ಆರಂಭಗೊಳಿಸಿದೆ.

ಚಿತ್ರಕ್ಕೆ ರಮೇಶ್ ಆಕ್ಷನ್-ಕಟ್

'ವೀಕೆಂಡ್ ವಿತ್ ರಮೇಶ್' ಖ್ಯಾತಿಯ ನಟ ರಮೇಶ್ ಅರವಿಂದ್ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದಾರೆ. ಈ ಮೊದಲು ಕಮಲ್ ಹಾಸನ್ ಅವರ 'ಉತ್ತಮ ವಿಲನ್' ಚಿತ್ರಕ್ಕೆ ರಮೇಶ್ ಅವರು ನಿರ್ದೇಶನ ಮಾಡಿದ್ದರು.

ಸಂತಸ ವ್ಯಕ್ತಪಡಿಸಿರುವ ರಮೇಶ್

ಚಿತ್ರದ ಶೂಟಿಂಗ್ 24 ರಿಂದ ಆರಂಭವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ರಮೇಶ್ ಅರವಿಂದ್ ಅವರು ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಕ್ಕೆ ಖುಷಿ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಚಿತ್ರಕ್ಕೆ ನಾಯಕ ಗೋಲ್ಡನ್ ಸ್ಟಾರ್ ಗಣೇಶ್

ತೆಲುಗಿನಲ್ಲಿ ನಾನಿ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್ ಅವರು ಮಾಡಲಿದ್ದಾರೆ. ಗಣೇಶ್ ಅವರ ಸ್ಟೈಲ್ ಕಿಂಗ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಅದರ ಜೊತೆ ಜೊತೆಗೆ 'ಮುಂಗಾರು ಮಳೆ 2' ಸಿನಿಮಾದ ಶೂಟಿಂಗ್ ಹಾಗೂ ಇದೀಗ 'ಗಂಡು ಎಂದರೆ ಗಂಡು' ಸಿನಿಮಾದ ಶೂಟಿಂಗ್ ನಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ನಾಯಕಿ ಶಾನ್ವಿ ಶ್ರೀವಾತ್ಸವ್

ಚಿತ್ರಕ್ಕೆ ನಾಯಕಿಯಾಗಿ 'ಮಾಸ್ಟರ್ ಪೀಸ್' ಖ್ಯಾತಿಯ ನಟಿ ಶಾನ್ವಿ ಶ್ರೀವಾತ್ಸವ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಶಾನ್ವಿ ಅವರು ನಟ ಸುಮಂತ್ ಶೈಲೇಂದ್ರ ಅವರ ಜೊತೆ 'ಭಲೇ ಜೋಡಿ' ಸಿನಿಮಾದಲ್ಲೂ ಮಿಂಚಿದ್ದರು. ಸಾಧು ಕೋಕಿಲ ನಿರ್ದೇಶನದ ಈ ಸಿನಿಮಾ ಕಳೆದ ವಾರವಷ್ಟೆ ತೆರೆ ಕಂಡಿತ್ತು.['ಭಲೇ ಭಲೇ' ಎಂದ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ]

ನಿರ್ಮಾಪಕರು

ಈ ಚಿತ್ರದ ರೀಮೇಕ್ ಹಕ್ಕನ್ನು ಖರೀದಿ ಮಾಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ತೆಲುಗಿನಲ್ಲಿ 'ಭಲೇ ಭಲೇ ಮಗಾಡಿವೋಯ್' ಚಿತ್ರಕ್ಕೆ ಬಂಡವಾಳ ಹೂಡಿದ್ದ ಅಲ್ಲು ಅರ್ಜುನ್ ಅವರ ತಂದೆ ನಿರ್ಮಾಪಕ ಅಲ್ಲು ಅರವಿಂದ್ ಅವರು ಕೂಡ ಕನ್ನಡ ವರ್ಷನ್ ಗೆ ಬಂಡವಾಳ ಹೂಡಲಿದ್ದಾರೆ.

English summary
The Kannada remake of 'Bhale Bhale Magadivoy' has been titled as 'Gandu Endare Gandu' and the makers have confirmed Ganesh & Shanvi Srivastava to play the lead roles. 'Gandu Endare Gandu' to go on floors from Feb 24. The movie is directed by Ramesh Aravind,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada