»   » ಹೊಸ ವರ್ಷದ ಆರಂಭದಲ್ಲಿ ಹಾರಲಿದೆ 'ಪುಷ್ಪಕ ವಿಮಾನ'

ಹೊಸ ವರ್ಷದ ಆರಂಭದಲ್ಲಿ ಹಾರಲಿದೆ 'ಪುಷ್ಪಕ ವಿಮಾನ'

Posted By:
Subscribe to Filmibeat Kannada

ನಟ ಕಮ್ ನಿರ್ದೇಶಕ ರಮೇಶ್ ಅರವಿಂದ್ ಅವರ 100ನೇ ಸಿನಿಮಾ 'ಪುಷ್ಪಕ ವಿಮಾನ', ರಿಲೀಸ್ ಗೆ ರೆಡಿಯಾಗಿದೆ. ತಂದೆ-ಮಗಳ ಬಾಂಧವ್ಯವನ್ನು ವಿವರಿಸುವ 'ಪುಷ್ಪಕ ವಿಮಾನ' ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಅವರು ತಂದೆಯ ಪಾತ್ರ ನಿರ್ವಹಿಸಿದ್ದು, ನಟಿ ರಚಿತಾ ರಾಮ್ ಅವರು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Ramesh starrer 'Pushpaka Vimana' releasing on January 6th

ಹೌದು, ಟ್ರೈಲರ್ ಹಾಗೂ ಹಾಡುಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಖತ್ ಕುತೂಹಲ ಹೆಚ್ಚಿಸಿರುವ 'ಪುಷ್ಪಕ ವಿಮಾನ' ಹೊಸ ವರ್ಷದ ಆರಂಭಕ್ಕೆ ತೆರೆಮೇಲೆ ಬರಲಿದ್ದು, ಜನವರಿ 6ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.[ಅಪ್ಪ-ಮಗಳ ಮುದ್ದಾದ 'ಪುಷ್ಪಕ ವಿಮಾನ' ನೋಡಿದ್ರಾ? ]

Ramesh starrer 'Pushpaka Vimana' releasing on January 6th

ಈಗಾಗಲೇ 'ಪುಷ್ಪಕ ವಿಮಾನ' ಚಿತ್ರದ ಎರಡು ಟ್ರೈಲರ್ ಬಿಡುಗಡೆಯಾಗಿದ್ದು, ರಮೇಶ್ ಅರವಿಂದ್ ಹಾಗೂ ಬೇಬಿ ಯುವಿನಾ ಜೋಡಿ ಮೋಡಿ ಮಾಡಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಅವರ ಮಗಳ ಪಾತ್ರದಲ್ಲಿ ರಚಿತಾ ರಾಮ್ ಸಾಥ್ ಕೊಟ್ಟಿದ್ದು, ರಚಿತಾ ರಾಮ್ ಅವರ ಚಿಕ್ಕವಯಸ್ಸಿನ ಪಾತ್ರದಲ್ಲಿ ಬೇಬಿ ಯುವಿನಾ ಕಾಣಿಸಿಕೊಂಡಿದ್ದಾರೆ.[ 'ಪುಷ್ಪಕ ವಿಮಾನ' ಸೆಟ್ ನಲ್ಲಿ ಕಣ್ಣೀರು ಹಾಕಿದ ರಚಿತಾ]

Ramesh starrer 'Pushpaka Vimana' releasing on January 6th

ಇನ್ನೂ 'ಪುಷ್ಪಕ ವಿಮಾನ'ದ ವಿಶೇಷ ಪಾತ್ರದಲ್ಲಿ ನಟಿ ಜೂಹಿ ಚಾವ್ಲಾ ಅಭಿನಯಿಸಿದ್ದು, ಚಿತ್ರದ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಒಂದು ಹಾಡಿನ ಜತೆ ಕೆಲವು ದೃಶ್ಯಗಳು ಪ್ರೇಮಲೋಕದ ಸುಂದರಿ ಕಾಣಿಸಿಕೊಂಡಿದ್ದಾರಂತೆ.[ಚಿತ್ರಗಳು: 'ಪುಷ್ಪಕ ವಿಮಾನ'ದಲ್ಲಿ ಜೂಹಿ ಅವರ ಗೆಟಪ್ ನೋಡಿದ್ರಾ? ]

Ramesh starrer 'Pushpaka Vimana' releasing on January 6th

ನವ ನಿರ್ದೇಶಕ ಎಸ್ ರವೀಂದ್ರನಾಥ್ ಚೊಚ್ಚಲ ಬಾರಿಗೆ ಆಕ್ಷನ್-ಕಟ್ ಹೇಳಿರುವ 'ಪುಷ್ಪಕ ವಿಮಾನ', ವಿಖ್ಯಾತ್ ಪಿಕ್ಚರ್ಸ್ ಮತ್ತು ಒಡೆಯರ್ ಫ್ಯಾಕ್ಟರಿ ಸಹಯೋಗದಲ್ಲಿ ನಿರ್ಮಾಣವಾಗಿದೆ. ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

Ramesh starrer 'Pushpaka Vimana' releasing on January 6th

ಈಗಾಗಲೇ ಚಿತ್ರದ ಆಡಿಯೋ ಕೂಡ ಬಿಡುಗಡೆಯಾಗಿದ್ದು ವಿಭಿನ್ನವೆನಿಸಿವೆ. ಇನ್ನೂ, ಚಿತ್ರದ ವಿತರಣ ಹಕ್ಕನ್ನ ತೂಗುದೀಪ ಪ್ರೊಡಕ್ಷನ್ ಅವರು ದಾಖಲೆ ಮೊತ್ತಕ್ಕೆ ಖರೀದಿಸಿದ್ದು, ಮುಂದಿನ ವರ್ಷದ ಆರಂಭದಲ್ಲಿ 'ಪುಷ್ಪಕ ವಿಮಾನ' ಹಾರಿಸಲಿದ್ದಾರೆ.['ಪುಷ್ಪಕ ವಿಮಾನ'ದ ಬಗ್ಗೆ ರಮೇಶ್ ಅರವಿಂದ್ ಉವಾಚ ]

English summary
Ramesh starrer 'Pushpaka Vimana' is all set to be released on 06th of January 2017. 'Pushpaka Vimana' is Ramesh Aravind's 100th film and the film is directed by debutante Ravindranath. Pushpaka Vimana' stars Ramesh Aravind, Rachita Ram, Yuvina, Juhi Chawla, Ravi Kale and others play prominent roles in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada