Don't Miss!
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿರ್ಮಾಪಕರಾಗಿ ರಾಮು: ದೇವರಾಜ್ ಜೊತೆ ಮೊದಲ ಸಿನಿಮಾ, ಪ್ರಜ್ವಲ್ ಜೊತೆ ಕೊನೆ ಸಿನಿಮಾ
ಖ್ಯಾತ ನಿರ್ಮಾಪಕ ರಾಮು ಕೋವಿಡ್‌ನಿಂದಾಗಿ ಇಂದು ನಿಧನವಾಗಿದ್ದಾರೆ. ರಾಮು ಅಗಲಿಕೆಗೆ ಕನ್ನಡದ ಖ್ಯಾತ ಸಿನಿಮಾ ಸೆಲೆಬ್ರಿಟಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Recommended Video
ಬಹಳ ಕಿರಿಯ ವಯಸ್ಸಿಗೆ ಸಿನಿಮಾ ನಿರ್ಮಾಪಕರಾದ ರಾಮು, ಮೊದಲಿಗೆ ನಿರ್ಮಾಣ ಮಾಡಿದ್ದು ದೇವರಾಜ್ ನಟನೆಯ 'ಗೋಲಿಬಾರ್' ಸಿನಿಮಾ. ಗೋಲಿಬಾರ್ ಸಿನಿಮಾ ನಿರ್ಮಾಣ ಮಾಡಿದಾಗ ಅವರಿಗಿನ್ನೂ 21 ವರ್ಷ ವಯಸ್ಸು.
'ಗೋಲಿಬಾರ್' ಯಶಸ್ವಿ ಆಗುತ್ತಿದ್ದಂತೆ ಕನ್ನಡದಲ್ಲಿ ಮೊದಲ ಬಾರಿಗೆ ಕೋಟಿ ರೂಪಾಯಿ ಬಜೆಟ್ ಹಾಕಿ 'ಲಾಕಪ್ ಡೆತ್' ಸಿನಿಮಾ ನಿರ್ಮಾಣ ಮಾಡಿದರು ರಾಮು. ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಕನ್ನಡದಲ್ಲಿ ಸಿನಿಮಾ ನಿರ್ಮಾಣದ ದಿಕ್ಕನ್ನೆ ಬದಲಿಸಿದರು ರಾಮು.
ಇದೀಗ ರಾಮು ಕೊನೆ ಉಸಿರೆಳಿದಿದ್ದಾರೆ. ವಿಚಿತ್ರವೆಂದರೆ ದೇವರಾಜ್ ಸಿನಿಮಾದ ನಿರ್ಮಾಣದೊಂದಿಗೆ ಸಿನಿಮಾ ವೃತ್ತಿ ಆರಂಭಿಸಿದ್ದ ರಾಮು ಇದೀಗ ನಿರ್ಮಾಣ ಮಾಡಿರುವ ಕೊನೆಯ ಸಿನಿಮಾ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ನಟಿಸಿರುವ 'ಅರ್ಜುನ್ ಗೌಡ'.
ರಾಮು ನಿರ್ಮಾಣ ಮಾಡಿದ ಕೊನೆಯ ಸಿನಿಮಾ 'ಅರ್ಜುನ್ ಗೌಡ'. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ತಯಾರಾಗಿದೆ. ಆದರೆ ಸಿನಿಮಾ ಬಿಡುಗಡೆ ಆಗುವ ಮುನ್ನ ರಾಮು ಎಲ್ಲರನ್ನೂ ಅಗಲಿ ಹೊರಟಿದ್ದಾರೆ.

ರಾಮು ಅಗಲಿಕೆ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ದೇವರಾಜ್, 'ನನ್ನದು ರಾಮು ಅವರದ್ದು 30 ವರ್ಷಗಳ ಗೆಳೆತನ. ಮಾಲಾಶ್ರೀ ಸಹ ನನಗೆ ಒಳ್ಳೆಯ ಗೆಳತಿ. ರಾಮು ಒಬ್ಬ ಅದ್ಭುತವಾದ ನಿರ್ಮಾಪಕ. ಪ್ರಜ್ವಲ್ ಸಹ 'ಅರ್ಜುನ್ ಗೌಡ' ಸಿನಿಮಾ ಬಗ್ಗೆ ಮಾತನಾಡುತ್ತಾ, ರಾಮು ಬಹಳ ರಿಚ್ ಆಗಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದ್ದ'' ಎಂದಿದ್ದಾರೆ ದೇವರಾಜ್.
'ಅರ್ಜುನ್ ಗೌಡ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆಗಳನ್ನು ರಾಮು ಇಟ್ಟುಕೊಂಡಿದ್ದ. ಎರಡು ತಿಂಗಳ ಹಿಂದೆ ಸಿನಿಮಾ ಬಗ್ಗೆ ಪ್ರಜ್ವಲ್ ಜೊತೆ ಮಾತನಾಡಲು ಮನೆಗೆ ಬಂದಿದ್ದಾಗ ನಾನು ಭೇಟಿಯಾಗಿದ್ದೆ. ಅದೇ ನನ್ನ-ಅವನ ಕೊನೆಯ ಭೇಟಿ' ಎಂದು ಕೊನೆಯ ಬಾರಿ ರಾಮುರನ್ನು ಭೇಟಿಯಾದ ಸಂದರ್ಭ ನೆನಪು ಮಾಡಿಕೊಂಡರು ದೇವರಾಜ್.