»   » ರಾಮು ಕೈಗೆತ್ತಿಕೊಂಡ ಅದ್ದೂರಿ ಚಿತ್ರ 'ಮುಂಬೈ'

ರಾಮು ಕೈಗೆತ್ತಿಕೊಂಡ ಅದ್ದೂರಿ ಚಿತ್ರ 'ಮುಂಬೈ'

Posted By:
Subscribe to Filmibeat Kannada

ಅದ್ದೂರಿ ಚಿತ್ರಗಳ ನಿರ್ಮಾಪಕರೆಂದೇ ಖ್ಯಾತಿಯಾಗಿರುವ ರಾಮು 'ಎಕೆ 47' ನಂತರ ಅದೇ ರೀತಿಯ ಅದ್ದೂರಿ ಚಿತ್ರ 'ಮುಂಬೈ' ಕೈಗೆತ್ತಿಕೊಂಡಿದ್ದಾರೆ. ಮತ್ತೊಮ್ಮೆ ಅದೇ 'ಎಕೆ 47' ಚಿತ್ರದ ಕಥೆಗಾರ ಎಸ್.ಆರ್.ರಮೇಶ್ ರಿಂದ ಕಥೆ ಬರೆಸಿ ನಿರ್ದೇಶನಕ್ಕೂ ಗ್ರೀನ್ ಸಿಗ್ನಲ್ ನೀಡಿ ಮುಂಬೈಗೆ ಹೊರಡಲು ಸಜ್ಜಾಗಿ ನಿಂತಿದ್ದಾರೆ.

ಈ ಚಿತ್ರಕ್ಕೆ ಮುಸ್ಸಂಜೆ ಮಾತು ಖ್ಯಾತಿಯ ವಿ.ಶ್ರೀಧರ್ ಸಾರಥ್ಯದಲ್ಲಿ ಹಾಡುಗಳ ಧ್ವನಿಮುದ್ರಣ ಭರದಿಂದ ಸಾಗಿದೆ. 'ಕೃಷ್ಣ ರುಕ್ಮಿಣಿ' ಧಾರಾವಾಹಿಯಿಂದ ಮನೆ ಮನೆ ಹುಡುಗನಾಗಿ ಖ್ಯಾತಿಯಾಗಿದ್ದ ಮದರಂಗಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸುತ್ತಿದ್ದಾರೆ. [ಶಿವಾಜಿನಗರ ಚಿತ್ರ ವಿಮರ್ಶೆ]

Producer Ramu

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 'ಚಿಂಗಾರಿ' ಚಿತ್ರದಲ್ಲಿ ನಾಯಕಿಯ ಸ್ನೇಹಿತೆಯಾಗಿ ಚಿನಕುರುಳಿ ಪಟಾಕಿಯಂತೆ ನಟಿಸಿದ್ದ ಕನ್ನಡದ ಹುಡುಗಿ "ತೇಜು"ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುತ್ತಿದ್ದಾರೆ.

ರಂಗಾಯಣ ರಘು ಮತ್ತು ಬುಲೆಟ್ ಪ್ರಕಾಶ್ ರವರ ಹಾಸ್ಯದ ಚುರುಮುರಿ 'ಮುಂಬೈ'ನಲ್ಲಿ ಹೊಟ್ಟೆ ಹುಣ್ಣಾಗಿಸಲಿದೆ. ಆಶಿಷ್ ವಿದ್ಯಾರ್ಥಿ ವಿಲ್ಲನ್ ಆಗಿ ನಟಿಸಲಿದ್ದು, ಉಳಿದ ತಾರಾಗಣದಲ್ಲಿ ಕೋಟೆ ಪ್ರಭಾಕರ್, ಸ್ವಯಂವರ ಚಂದ್ರು, ಶ್ರೀನಿವಾಸಪ್ರಭು, ಗುರುರಾಜ ಹೊಸಕೋಟೆ ರಾಕ್ ಲೈನ್ ಸುಧಾಕರ್ ಇನ್ನೂ ಮುಂತಾದವರಿದ್ದಾರೆ.

ಅದ್ದೂರಿ ನಿರ್ಮಾಣದೊಂದಿಗೆ ಅತ್ಯಂತ ನಿರೀಕ್ಷೆ ಮೂಡಿಸುವ ಚಿತ್ರ ಇದಾಗಲಿದೆ. ಈ ಚಿತ್ರವು ಶೀಘ್ರದಲ್ಲೇ ಸೆಟ್ಟೇರಲಿದೆ. ಚಿತ್ರಕ್ಕೆ ಸಂಗೀತ ವಿ. ಶ್ರೀಧರ್, ಛಾಯಾಗ್ರಹಣ ಚಬ್ಬೇನಾಡುರಮೇಶ್, ಸಂಕಲನ ಎಂ.ಆರ್, ಸಾಹಸ ಡ್ಯಾನಿ, ಸಂಭಾಷಣೆ ಕಲ್ಯಾಡಿ ಮನು ಹಾಗೂ ಸಹಕಾರ ನಿರ್ದೇಶನ ರವೀಂದ್ರ ಬಿ.ಆರಾಧ್ಯ. (ಫಿಲ್ಮಿಬೀಟ್ ಕನ್ನಡ)

English summary
Sandalwood acee producer Ramu all set to begin movie 'Mumbai'. It is being directed by Ramesh of S R Brothers fame, who earlier scripted 'AK 47' and directed films like 'Nanjundi' and 'PUC'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada