»   » ಏಪ್ರಿಲ್ ನಲ್ಲಿ ರಮ್ಯಾ ಪ್ರತ್ಯಕ್ಷ, ಟ್ವಿಟ್ಟರ್ ನಲ್ಲಿ ಬ್ರೇಕಿಂಗ್!

ಏಪ್ರಿಲ್ ನಲ್ಲಿ ರಮ್ಯಾ ಪ್ರತ್ಯಕ್ಷ, ಟ್ವಿಟ್ಟರ್ ನಲ್ಲಿ ಬ್ರೇಕಿಂಗ್!

Posted By:
Subscribe to Filmibeat Kannada

ರಮ್ಯಾ ಅಭಿಮಾನಿಗಳೇ....ಇದೋ ಇಲ್ಲಿದೆ ನಿಮಗೆ ಸಂತಸದ ಸುದ್ದಿ. ಫೋನು ಇಲ್ಲ, ಮೆಸೇಜ್ ಇಲ್ಲ. ಟ್ವಿಟ್ಟರ್-ಫೇಸ್ ಬುಕ್ ನಲ್ಲಿ ಕಾಣಂಗಿಲ್ಲ. ರಮ್ಯಾ ಎಲ್ಲಿರುವಳು...ಹೇಗಿರುವಳು...ಅಂತ ಕನವರಿಸುತ್ತಿದ್ದ ಅಭಿಮಾನಿಗಳಿಗೆ ಕಡೆಗೂ ದರ್ಶನ ನೀಡುವುದಕ್ಕೆ ರಮ್ಯಾ ಮನಸ್ಸು ಮಾಡಿದ್ದಾರೆ.

ವಾವ್...ಅಂತ ಅಚ್ಚರಿ ಪಡುತ್ತಿರುವ ನಿಮಗೆಲ್ಲಾ ರಮ್ಯಾ ವಾಪಸ್ಸು ಬರುತ್ತಿರುವುದು ಯಾವಾಗ ಅಂತ ತಿಳಿದುಕೊಳ್ಳುವ ಕುತೂಹಲ ಇದೆ ಅಲ್ವಾ? ಅದಕ್ಕೆ ರಮ್ಯಾ ಮೇಡಂ ಟ್ವೀಟ್ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ ನೋಡಿ. ಏಪ್ರಿಲ್ ನಲ್ಲಿ ಮರಳಿ ಭಾರತಕ್ಕೆ ಕಾಲಿಡಲಿದ್ದಾರಂತೆ ಸಕ್ಕರೆ ನಾಡಿನ ಈ ಚೆಲುವೆ. [ಲಂಡನ್ ನಲ್ಲಿ ಲಕ್ಕಿ ಸ್ಟಾರ್ ರಮ್ಯಾ ಮಾಡ್ತಿರೋದು ಇದನ್ನಾ?]

Ramya aka Divya Spandana returns back to India in April

ಫೇಸ್ ಬುಕ್ ನಲ್ಲಿ ರಮ್ಯಾ ಹಾಕಿದ್ದ ಸ್ಟೇಟಸ್ ಒಂದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ರಮ್ಯಾ ಆಪ್ತರ ಪ್ರಶ್ನೆಗೆ ಉತ್ತರಿಸುವಾಗ 'ಏಪ್ರಿಲ್'ನಲ್ಲಿ ಹಿಂದಿರುಗಿ ಬರುವುದಾಗಿ ರಮ್ಯಾ ಟ್ವೀಟ್ ಮಾಡಿದ್ದಾರೆ.

ಕ್ಷಣಾರ್ಧದಲ್ಲೇ ವೈರಲ್ ಆದ ಈ ಟ್ವೀಟ್, ರಮ್ಯಾ ಅಭಿಮಾನಿಗಳ ಟ್ವಿಟ್ಟರ್ ಖಾತೆಯಲ್ಲಿ ಟ್ರೆಂಡಿಂಗ್ ಆಗುತ್ತಿದೆ. ರಮ್ಯಾ ಬರುವುದಕ್ಕೆ ಇನ್ನೂ ಒಂದು ತಿಂಗಳಿರುವಾಗಲೇ ರಮ್ಯಾ ಫ್ಯಾನ್ಸ್ ಸ್ವಾಗತ ಕೋರೋಕೆ ಶುರುಮಾಡಿದ್ದಾರೆ. [ಅಭಿಮಾನಿಗಳಿಗೆ ಬಕೆಟ್ ತಣ್ಣೀರೆರಚಿದ ನಟಿ ರಮ್ಯಾ]

''ಏಪ್ರಿಲ್ ನಲ್ಲಿ ಬರ್ತೀನಿ'' ಅಂತ ರಮ್ಯಾ ಹೇಳಿದ್ದಾರೆ ಅಷ್ಟು ಬಿಟ್ಟರೆ ಈಗೇಲಿದ್ದಾರೆ ಅಂತ ನಮ್ಮನ್ನ ಕೇಳಬೇಡಿ. ಅದೇನೇಯಿರಲಿ, ವರ್ಷದಿಂದ ಬಕಪಕ್ಷಿಗಳಂತೆ ಕಾಯ್ತಿದ್ದ ರಮ್ಯಾ ಅಭಿಮಾನಿಗಳ ಬಾಯಿಗೆ ಲಕ್ಕಿ ಸ್ಟಾರ್ ನೀಡಿರುವ ಈ ಸುದ್ದಿಯಿಂದ ಸಿಹಿ ಜಿಲೇಬಿ ಬಿದ್ಹಂಗಾಗಿದೆ. ಏಪ್ರಿಲ್ ಅಂತ ಹೇಳಿ ಎಲ್ಲರನ್ನ ರಮ್ಯಾ 'ಫೂಲ್' ಮಾಡ್ಲಿಲ್ಲ ಅಂದ್ರೆ ಸಾಕು.! (ಫಿಲ್ಮಿಬೀಟ್ ಕನ್ನಡ)

English summary
Finally, Sandalwood Queen Ramya aka Divya Spandana responds to her fans on Twitter. The Actress has revealed her plans to return back to India in April.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada