For Quick Alerts
  ALLOW NOTIFICATIONS  
  For Daily Alerts

  ಮದುವೆ ದಿನಾಂಕ ಘೋಷಿಸಿದ್ರಾ ಧನಂಜಯ್? ಮೋಹಕ ತಾರೆ ರಮ್ಯಾಗೂ ಇದೇ ಅನುಮಾನ!

  |

  ನಟ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯ ಜೊತೆಗೆ ತಮ್ಮದೇ ಡಾಲಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಒಂದು ಸ್ಪೆಷಲ್ ವಿಡಿಯೋ ರಿಲೀಸ್ ಮಾಡಿ ಧನು ಕುತೂಹಲ ಕೆರಳಿಸಿದ್ದಾರೆ. 12 - 1 = 23 ಎನ್‌ ಇರ್ಬೋದು ? ಎಂದು ಕೇಳಿದ್ದಾರೆ.

  ಈ ಪ್ರಶ್ನೆಗೆ ಉತ್ತರ ಏನು? ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಒಬ್ಬಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಯಾರೊಬ್ಬರು ಆ ರಹಸ್ಯ ಏನು ಎನ್ನುವುದನ್ನು ಭೇದಿಸೋಕೆ ಸಾಧ್ಯವಾಗಿಲ್ಲ. ಧನಂಜಯ ಇದ್ದಕ್ಕಿಂದಂತೆ ಪ್ಯಾಡ್ ತಗೊಂಡು ಏನೇನೋ ಗೀಚಿದ್ದಾರೆ. ಏನಪ್ಪಾ ಇದು ಎಂದು ಅವರ ಸ್ನೇಹಿತರು ಕೂಡ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಡಾಲಿ ಅತ್ತ ಹೋಗುತ್ತಿದ್ದಂತೆ ಅದೇನು ಬರೆದಿದ್ದಾರೆ ಎಂದು ನೋಡಿದ್ದಾರೆ. ಏನೇನೋ ಫಾರ್ಮುಲಾಗಳನ್ನೆಲ್ಲಾ ಬರೆದು ಕೊನೆಗೆ ಮಧ್ಯದಲ್ಲಿ ಫೈನಲ್ 12 - 1 = 23 ಎಂದು ಬರೆದಿದ್ದಾರೆ.

  ಚಿತ್ರರಂಗದವರೇ ಕಾಲೆಳೆದರು, ಚಿತ್ರೀಕರಣಕ್ಕೆ ಹೋಗಲು ಹೆದರುತ್ತಿದ್ದೆ: ಮೇಘನಾ ರಾಜ್ಚಿತ್ರರಂಗದವರೇ ಕಾಲೆಳೆದರು, ಚಿತ್ರೀಕರಣಕ್ಕೆ ಹೋಗಲು ಹೆದರುತ್ತಿದ್ದೆ: ಮೇಘನಾ ರಾಜ್

  ಈ ವಿಡಿಯೋದಲ್ಲಿ ಧನು ತಮ್ಮ ಮುಂದಿನ ಸಿನಿಮಾ ಘೋಷಣೆ ಬಗ್ಗೆ ಸುಳಿವು ಕೊಟ್ಟಿರುವಂತೆ ಕಾಣುತ್ತಿದೆ. ಆದರೆ ಅದು ಏನು ಎನ್ನುವುದು ಮಾತ್ರ ಯಾರಿಗೂ ಗೊತ್ತಾಗುತ್ತಿಲ್ಲ. ಅದಕ್ಕೆಲ್ಲಾ ಶೀಘ್ರದಲ್ಲೇ ಅವರೇ ಉತ್ತರ ಕೊಡಲಿದ್ದಾರೆ.

  ಧನು ಪ್ರಶ್ನೆಗೆ ಉತ್ತರ ಏನು?

  ಧನು ಪ್ರಶ್ನೆಗೆ ಉತ್ತರ ಏನು?

  ಸದ್ಯ ಧನು ಸ್ನೇಹಿತರು ಹಾಗೂ ಅಭಿಮಾನಿಗಳು 12 - 1 = 23 ಲೆಕ್ಕ ಬಿಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಊ ಹ್ಞೂಂ ಯಾರಿಗೂ ಸರಿಯಾದ ಉತ್ತರ ಸಿಗುತ್ತಿಲ್ಲ. ಕೆಲವರು ಇದು ಡಾಲಿ ಮುಂದಿನ ಸಿನಿಮಾ ಟೈಟಲ್ ಎನ್ನುತ್ತಿದ್ದಾರೆ. ಮುಂದಿನ ವರ್ಷ ಡಿಸೆಂಬರ್ 1ಕ್ಕೆ 'ಟಗರು ಪಲ್ಯ' ರಿಲೀಸ್? ಜನವರಿ 12ಕ್ಕೆ 'ಬಡವ ರಾಸ್ಕಲ್' ಸೀಕ್ವೆಲ್ ಮುಹೂರ್ತ? ಡಿಸೆಂಬರ್ 1ಕ್ಕೆ ಉತ್ತರಕಾಂಡ ರಿಲೀಸ್? 12 - 1 = 23 ಲೆಕ್ಕಕ್ಕೆ ಉತ್ತರ ಸೊನ್ನೆ, ಹಾಗಾಗಿ ಅವರ ಮುಂದಿನ ಸಿನಿಮಾ ಹೆಸರು ಸೊನ್ನೆ, ಅಥವಾ ಶೂನ್ಯ. ಇಲ್ಲ ಧನು ಮುಂದಿನ ಚಿತ್ರಕ್ಕೆ ನಿರ್ದೇಶಕ ಶೂನ್ಯ ಆಕ್ಷನ್ ಕಟ್ ಹೇಳ್ತಾರೆ? ಹೀಗೆ ಒಬ್ಬೊಬ್ಬರು ಒಂದೊಂದು ಕಾಮೆಂಟ್ ಮಾಡುತ್ತಿದ್ದಾರೆ.

  ಧನು ಮದುವೆ ಡೇಟ್ ಎಂದ ರಮ್ಯಾ

  ಧನು ಮದುವೆ ಡೇಟ್ ಎಂದ ರಮ್ಯಾ

  ಮೋಹಕ ತಾರೆ ನಟಿ ರಮ್ಯಾ ಕೂಡ ಧನಂಜಯ ಅವರ ಈ ನಿಗೂಢವಾದ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. 12 - 1 = 23 ನಿಮ್ಮ ಮದುವೆ ದಿನಾಂಕ ಎಂದು ಕಾಮೆಂಟ್ ಮಾಡಿದ್ದಾರೆ. ರಮ್ಯಾ ಅವರ ಕಾಮೆಂಟ್‌ಗೂ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಸಿಗುತ್ತಿದೆ. ಧನಂಜಯ ಮಾತ್ರ ಯಾವುದಕ್ಕೂ ಉತ್ತರಿಸದೇ ಮೌನಕ್ಕೆ ಜಾರಿದ್ದಾರೆ. ಒಟ್ನಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಈ ವಿಡಿಯೋ ಮೂಲಕ ಗಮನ ಸೆಳೆಯುವಲ್ಲಿ ಡಾಲಿ ಸಕ್ಸಸ್ ಕಂಡಿದ್ದಾರೆ.

  ಧನಂಜಯ್ ಮದುವೆ ಯಾವಾಗ?

  ಧನಂಜಯ್ ಮದುವೆ ಯಾವಾಗ?

  ಇತ್ತೀಚೆಗಷ್ಟೆ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ಆ ಸಮಯದಲ್ಲಿ ಧನು ಆತ್ಮೀಯ ಗೆಳೆಯನಿಗೆ ಟ್ವೀಟ್ ಮಾಡಿ ಶುಬ ಹಾರೈಸಿದ್ದರು. ಆದರೆ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಸರ್ ಎಂದು ಕೇಳಿದ್ದರು. ಹಲವು ದಿನಗಳಿಂದ ಧನುಗೆ ಈ ಪ್ರಶ್ನೆ ಎದುರಾಗುತ್ತಲೇ ಇದೆ. ಆದರೆ ಎಲ್ಲದಕ್ಕೂ ಜಾಣ್ಮೆಯ ಉತ್ತರ ಕೊಟ್ಟು ಜಾರಿಕೊಳ್ಳುತ್ತಿದ್ದಾರೆ.

  ಶೀಘ್ರದಲ್ಲೇ 'ಪುಷ್ಪ' ಶೂಟಿಂಗ್‌ನಲ್ಲಿ ಭಾಗಿ

  ಶೀಘ್ರದಲ್ಲೇ 'ಪುಷ್ಪ' ಶೂಟಿಂಗ್‌ನಲ್ಲಿ ಭಾಗಿ

  ಇತ್ತೀಚೆಗೆ ಧನಂಜಯ ನಟನೆಯ 'ತೋತಾಪುರಿ', 'ಮಾನ್ಸೂನ್ ರಾಗ' ಹಾಗೂ 'ಹೆಡ್‌ಬುಷ್' ಸಿನಿಮಾಗಳು ಬಿಡುಗಡೆಯಾಗಿತ್ತು. 'ಜಮಾಲಿಗುಡ್ಡ' ರಿಲೀಸ್‌ಗೆ ರೆಡಿಯಾಗಿದೆ. ತಮಿಳಿನ ಒಂದು ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. 'ಹೊಯ್ಸಳ' ಹಾಗೂ 'ಉತ್ತರಕಾಂಡ' ಸಿನಿಮಾಗಳ ಚಿತ್ರೀಕರಣ ನಡೀತಿದೆ. ಈಗಾಗಲೇ 'ಪುಷ್ಪ'- 2 ಚಿತ್ರೀಕರಣ ಶುರುವಾಗಿದ್ದು, ಶೀಘ್ರದಲ್ಲೇ ಜಾಲಿ ರೆಡ್ಡಿಯಾಗಿ ಸೆಟ್‌ಗೆ ಎಂಟ್ರಿ ಕೊಡಲಿದ್ದಾರೆ.

  English summary
  Dhananjay Shares A Cryptic Post That Hints To His Next Project. Ramya Comment Goes Viral For This Post. Know more.
  Wednesday, December 14, 2022, 16:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X