For Quick Alerts
  ALLOW NOTIFICATIONS  
  For Daily Alerts

  ಮೋಹಕ ತಾರೆ ರಮ್ಯಾ ಬಣ್ಣದ ಬದುಕಿಗೆ 14 ವರ್ಷಗಳ ಸಂಭ್ರಮ

  By Bharath Kumar
  |

  ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ರಮ್ಯಾಗೆ ಇಂದು ವಿಶೇಷ ದಿನ. ಚಂದನವನದ ಬೆಳ್ಳಿ ಪರದೆ ಮೇಲೆ ನಾಯಕಿಯಾಗಿ ಹೆಜ್ಜೆ ಹಾಕಿದ ದಿನದಿಂದಲೂ ರಮ್ಯಾ ಅಂದು-ಇಂದು-ಎಂದೆಂದೂ ಅಭಿಮಾನಿಗಳ ಪಾಲಿಗೆ 'ಕನಸಿನ ರಾಣಿ'.

  ಆದ್ರೆ, ರಾಜಕೀಯದ ಕಡೆ ಒಲವು ಮೂಡಿಸಿಕೊಂಡ ರಮ್ಯಾ ಸದ್ಯ, ಬಣ್ಣದ ಲೋಕಕ್ಕೆ ತಾತ್ಕಾಲಿಕ ಗುಡ್ ಬೈ ಹೇಳಿದ್ದಾರೆ. ಅಂದ್ಹಾಗೆ ರಮ್ಯಾಗೆ ಈ ದಿನ ವಿಶೇಷ ಯಾಕಪ್ಪಾ ಅಂದ್ರೆ, ಇಂದಿಗೆ ಸ್ಯಾಂಡಲ್ ವುಡ್ ಕ್ವೀನ್ ಇಂಡಸ್ಟ್ರಿಗೆ ಬಂದು 14 ವರ್ಷ ಕಳೆದಿದೆ.

  ಈ ವಿಶೇಷ ದಿನದಂದು ರಮ್ಯಾ ಅವರ ಜರ್ನಿ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.....

  ಚಿತ್ರಕೃಪೆ: ಅಪ್ಪು ಫ್ಯಾನ್ಸ್ ಕ್ಲಬ್

  ರಮ್ಯಾ ಇಂಡಸ್ಟ್ರಿಗೆ ಬಂದು 14 ವರ್ಷ

  ರಮ್ಯಾ ಇಂಡಸ್ಟ್ರಿಗೆ ಬಂದು 14 ವರ್ಷ

  ನಟಿ ರಮ್ಯಾ ಕನ್ನಡ ಇಂಡಸ್ಟ್ರಿಗೆ ಬಂದು ಇಂದಿಗೆ 14 ವರ್ಷ ಪೂರೈಸಿದೆ. ಆಂದ್ರೆ, ರಮ್ಯಾ ಅಭಿನಯದ ಮೊದಲ ಚಿತ್ರಕ್ಕೂ 14 ವರ್ಷಗಳ ಸಂಭ್ರಮ.

  'ಅಭಿ' ಚಿತ್ರದಿಂದ ರಮ್ಯಾ ಪರಿಚಯ

  'ಅಭಿ' ಚಿತ್ರದಿಂದ ರಮ್ಯಾ ಪರಿಚಯ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಎರಡನೇ ಸಿನಿಮಾ 'ಅಭಿ'. ಈ ಚಿತ್ರದ ಮೂಲಕ ರಮ್ಯಾ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದರು.

  ಚೊಚ್ಚಲ ಚಿತ್ರದಲ್ಲೇ ಸೂಪರ್ ಅಭಿನಯ!

  ಚೊಚ್ಚಲ ಚಿತ್ರದಲ್ಲೇ ಸೂಪರ್ ಅಭಿನಯ!

  'ಅಭಿ' ಚಿತ್ರದಲ್ಲಿ ಕಾಲೇಜ್ ಹುಡುಗಿ ಪಾತ್ರವನ್ನ ನಿರ್ವಹಿಸಿದ್ದ ರಮ್ಯಾ, ತಮ್ಮ ಮೊದಲ ಅಭಿನಯದಿಂದಲೇ ಕನ್ನಡ ಪ್ರೇಕ್ಷಕರನ್ನ ರಂಜಿಸಿದ್ದರು. ಡಾ.ರಾಜ್ ಕುಮಾರ್ ಅವರ ಬ್ಯಾನರ್ ನಿಂದ ಮೂಡಿಬಂದ ಸಿನಿಮಾದಲ್ಲಿ ತಮ್ಮ ಅದೃಷ್ಟ ಬದಲಿಸಿಕೊಂಡರು. ಡಾ.ರಾಜ್ ಪುತ್ರ ಪುನೀತ್ ಜೊತೆಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.

  ಕನ್ನಡದ ಟಾಪ್ ಸ್ಟಾರ್ ಗಳ ನೆಚ್ಚಿನ ನಟಿ

  ಕನ್ನಡದ ಟಾಪ್ ಸ್ಟಾರ್ ಗಳ ನೆಚ್ಚಿನ ನಟಿ

  ನೋಡು ನೋಡುತ್ತಲೇ ಕನ್ನಡದ ಬಿಗ್ ಸ್ಟಾರ್ ಗಳ ನೆಚ್ಚಿನ ನಟಿಯಾಗಿಬಿಟ್ಟರು. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಉಪೇಂದ್ರ, ಶ್ರೀಮುರುಳಿ, ಗಣೇಶ್, ಯಶ್ ಎಲ್ಲರೂ ಜೊತೆಯಲ್ಲೂ ಅಭಿನಯಿಸಿ ಯಶಸ್ಸು ಕಂಡರು.

  ತಮಿಳಿನಲ್ಲೂ ರಮ್ಯಾ ಮೋಡಿ

  ತಮಿಳಿನಲ್ಲೂ ರಮ್ಯಾ ಮೋಡಿ

  ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತಮಿಳಿನಲ್ಲೂ ರಮ್ಯಾ ಮೋಡಿ ಮಾಡಿದ್ದಾರೆ. ಧನುಷ್ ಅಭಿನಯದ 'ಪೊಲ್ಲದವನ್', ಹಾಗೂ ವಿಶಾಲ್ ಅಭಿನಯದ 'ಸಿಂಗಂ ಪುಲಿ' ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

  ಸೂಪರ್ ಹಿಟ್ ಸಿನಿಮಾಗಳು

  ಸೂಪರ್ ಹಿಟ್ ಸಿನಿಮಾಗಳು

  ರಮ್ಯಾ ಇಲ್ಲಿಯವರೆಗೂ ಸುಮಾರು 39ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಎಕ್ಸ್ ಕ್ಯೂಸಮಿ', 'ರಂಗ ಎಸ್.ಎಸ್.ಎಲ್.ಸಿ', 'ಆಕಾಶ್', 'ಅಮೃತಧಾರೆ', 'ಗೌರಮ್ಮ', 'ಜ್ಯೂಲಿ', 'ಸೇವಂತಿ ಸೇವಂತಿ', 'ಜೊತೆ ಜೊತೆಯಲಿ', 'ಅರಸು', 'ಸಂಜು ವೆಡ್ಸ್ ಗೀತಾ', 'ಲಕ್ಕಿ', 'ಸಿದ್ಲಿಂಗು' ಚಿತ್ರಗಳು ಸೇರಿದಂತೆ ಹಲವು ಸೂಪರ್ ಹಿಟ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  'ನಾಗರಹಾವು' ಕೊನೆಯ ಸಿನಿಮಾ

  'ನಾಗರಹಾವು' ಕೊನೆಯ ಸಿನಿಮಾ

  2016 ರಲ್ಲಿ ಬಿಡುಗಡೆಯಾದ 'ನಾಗರಹಾವು' ರಮ್ಯಾ ಅಭಿನಯದ ಕೊನೆಯ ಚಿತ್ರವಾಗಿದೆ. ಸದ್ಯ, ಮೋಹಕ ತಾರೆ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿರುವ ಕಾರಣ ಸ್ಯಾಂಡಲ್ ವುಡ್ ನಿಂದ ದೂರುವಾಗಿದ್ದಾರೆ.

  ರಮ್ಯಾಗೆ ಶುಭಾಶಯಗಳ ಮಹಾಪೂರ

  ರಮ್ಯಾಗೆ ಶುಭಾಶಯಗಳ ಮಹಾಪೂರ

  ರಮ್ಯಾ ಚಿತ್ರಜಗತ್ತಿನಲ್ಲಿ 14 ವರ್ಷ ಪೂರೈಸಿದ ಹಿನ್ನಲೆ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ತಾರೆಯರು ಶುಭಾಶಯ ಕೋರಿದ್ದಾರೆ. ಸೋ ನಮ್ಮ ಕಡೆಯಿಂದಲೂ ರಮ್ಯಾ ಅವರಿಗೆ ಶುಭಾಶಯಗಳು ತಿಳಿಸೋಣ.

  English summary
  Kannada Actress Ramya completed 14 Years Journey In Kannada Film Industry. Ramya Debut to Film industry on April 25, 2003 From Puneeth Rajkumar Starrer Abhi Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X