For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೆ ರಮ್ಯಾ ಜೋಡಿ.? 'ರಾಜವೀರ ಮದಕರಿ ನಾಯಕ' ನಿರ್ದೇಶಕ ಕೊಟ್ಟ ಸ್ಪಷ್ಟನೆ ಇದು.!

  |
  Ramya is not a part of 'Raja Veera Madakari Nayaka' Movie | Ramya | Darshan | Madakari | Rockline

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐತಿಹಾಸಿಕ ಸಿನಿಮಾ 'ರಾಜವೀರ ಮದಕರಿ ನಾಯಕ' ಮುಹೂರ್ತ ಸಮಾರಂಭ ನೆರವೇರುತ್ತಿದ್ದಂತೆಯೇ, ಗಾಂಧಿನಗರದಲ್ಲಿ ಒಂದು ಸುದ್ದಿ ಹರಿದಾಡಲು ಆರಂಭಿಸಿತು.

  ಅದೇನಪ್ಪಾ ಅಂದ್ರೆ, 'ರಾಜವೀರ ಮದಕರಿ ನಾಯಕ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗಕ್ಕೆ ವಾಪಸ್ ಆಗುತ್ತಾರಂತೆ. ದರ್ಶನ್ ಗೆ ಜೋಡಿಯಾಗಿ ರಮ್ಯಾ ಅಭಿನಯಿಸಲಿದ್ದಾರಂತೆ. ಚಿತ್ರದಲ್ಲಿ ರಾಣಿ ಆಗಿ ರಮ್ಯಾ ಮಿಂಚಲಿದ್ದಾರಂತೆ ಎಂಬ ಅಂತೆ-ಕಂತೆ ಗಾಂಧಿನಗರದಲ್ಲಿ ಗಿರಕಿ ಹೊಡೆಯಿತು.

  ಈ ಗಾಸಿಪ್ ಗೆ ಇದೀಗ 'ರಾಜವೀರ ಮದಕರಿ ನಾಯಕ' ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸ್ಪಷ್ಟನೆ ಕೊಟ್ಟಿದ್ದಾರೆ.

  ಏನಂತಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.?

  ಏನಂತಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.?

  ''ಈ ಗಾಸಿಪ್ ಹೇಗೆ ಹಬ್ಬಿತೋ ಗೊತ್ತಿಲ್ಲ. ಆದ್ರೆ, ನಮ್ಮ ಚಿತ್ರಕ್ಕೆ ರಮ್ಯಾ ಅಂತೂ ನಾಯಕಿ ಅಲ್ಲ. ಇದು ಸುಳ್ಳು ಸುದ್ದಿ'' ಎಂದು 'ರಾಜವೀರ ಮದಕರಿ ನಾಯಕ' ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ, 'ರಾಜವೀರ ಮದಕರಿ ನಾಯಕ' ಚಿತ್ರದ ಮೂಲಕ ರಮ್ಯಾ ವಾಪಸ್ ಆಗುತ್ತಾರೆ ಅಂತ ಖುಷಿ ಪಟ್ಟಿದ್ದ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ.

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರಕ್ಕಾಗಿ ರಮ್ಯಾ ವಾಪಸ್?

  ಹಾಗಾದ್ರೆ, ನಾಯಕಿ ಯಾರು.?

  ಹಾಗಾದ್ರೆ, ನಾಯಕಿ ಯಾರು.?

  'ರಾಜವೀರ ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಇನ್ನೂ ಆಯ್ಕೆ ಆಗಿಲ್ಲ. ಚಿತ್ರತಂಡ ಇನ್ನೂ ಹೀರೋಯಿನ್ ಹುಡುಕಾಟದಲ್ಲಿ ತೊಡಗಿದೆ. ಜೊತೆಗೆ ತಾರಾಬಳಗವನ್ನು ಅಂತಿಮ ಮಾಡುವ ಕಾರ್ಯದಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಬಿಜಿಯಾಗಿದ್ದಾರೆ.

  ಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ 'ಗಂಡುಗಲಿ ಮದಕರಿ ನಾಯಕ' ಮುಹೂರ್ತಗವಿ ಗಂಗಾಧರೇಶ್ವರ ಸನ್ನಿಧಿಯಲ್ಲಿ 'ಗಂಡುಗಲಿ ಮದಕರಿ ನಾಯಕ' ಮುಹೂರ್ತ

  ಪ್ರಮುಖ ಪಾತ್ರದಲ್ಲಿ ನಟಿ ಸುಮಲತಾ.?

  ಪ್ರಮುಖ ಪಾತ್ರದಲ್ಲಿ ನಟಿ ಸುಮಲತಾ.?

  'ರಾಜವೀರ ಮದಕರಿ ನಾಯಕ' ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿ ಮತ್ತು ಸಂಸದೆ ಸುಮಲತಾ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ರಾಜಮಾತೆಯ ಪಾತ್ರದಲ್ಲಿ ನಟಿ ಸುಮಲತಾ ಅಭಿನಯಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  'ಗಂಡುಗಲಿ ಮದಕರಿ ನಾಯಕ': ಆರಂಭದಲ್ಲೇ ಎಡವಟ್ಟು, ದರ್ಶನ್ ವಿರುದ್ಧ ಭುಗಿಲೆದ್ದ ಸಿಟ್ಟು.!'ಗಂಡುಗಲಿ ಮದಕರಿ ನಾಯಕ': ಆರಂಭದಲ್ಲೇ ಎಡವಟ್ಟು, ದರ್ಶನ್ ವಿರುದ್ಧ ಭುಗಿಲೆದ್ದ ಸಿಟ್ಟು.!

  'ರಾಜವೀರ ಮದಕರಿ ನಾಯಕ' ಚಿತ್ರದ ಕುರಿತು

  'ರಾಜವೀರ ಮದಕರಿ ನಾಯಕ' ಚಿತ್ರದ ಕುರಿತು

  ರಾಜ ಮದಕರಿ ನಾಯಕ ಜೀವನ ಚರಿತ್ರೆ ಆಧರಿಸಿರುವ ಅಪ್ಪಟ ಐತಿಹಾಸಿಕ ಸಿನಿಮಾ 'ರಾಜವೀರ ಮದಕರಿ ನಾಯಕ'. ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ ರಾಕ್ ಲೈನ್ ವೆಂಕಟೇಶ್. ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದರೆ, ಹಂಸಲೇಖ ಸಂಗೀತ ಸಂಯೋಜಿಸಲಿದ್ದಾರೆ

  English summary
  Kannada Actress Ramya is not acting in Raja Veera Madakari Nayaka Movie clarifies Director Rajendra Singh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X