twitter
    For Quick Alerts
    ALLOW NOTIFICATIONS  
    For Daily Alerts

    ಮೊದಲು ನಿದ್ದೆಯಿಂದ ಎದ್ದೇಳಿ: ರಮ್ಯಾ ಕಳಕಳಿ

    |
    <ul id="pagination-digg"><li class="previous"><a href="/news/lucky-star-ramya-dubbing-remake-kannada-movies-065521.html">« Previous</a>

    ನಮ್ಮ ಮಾರುಕಟ್ಟೆ ವಿಸ್ತರಣೆ ಹಾಗೂ 'ಒರಿಜಿನಾಲಿಟಿ' ಬಗ್ಗೆ ನಾವು ತಕ್ಷಣ ಕಾರ್ಯಪ್ರವೃತ್ತರಾದರೆ ಎಲ್ಲಕ್ಕಿಂತ ಉತ್ತಮ. ನಾನಂತೂ ರಿಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ. ರಿಮೇಕ್ ಬೇಡ ಎಂಬ ಶಿವಣ್ಣನ ನಿಲುವೂ ಒಳ್ಳೆಯದೇ" ಎಂದಿದ್ದಾರೆ ರಮ್ಯಾ. ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಾ ಡಬ್ಬಿಂಗ್ ಬೇಡ ಎನ್ನುವವರ ಮಧ್ಯೆ ರಮ್ಯಾ ಮಾತು ವಿಶೇಷ ಎನಿಸುತ್ತಿದೆ.

    ರಮ್ಯಾ ತಮ್ಮ ಪ್ರತಿ ಮಾತಿನಲ್ಲೂ, ಡಬ್ಬಿಂಗ್ ವಿರೋಧಕ್ಕಿಂತಲೂ ಉತ್ತಮ ಚಿತ್ರಗಳು ಬರಬೇಕು, ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎನ್ನುವುದನ್ನು ಸಾರಿ ಸಾರಿ ಹೇಳಿದ್ದಾರೆ. ಕೇವಲ ರೀಮೇಕ್ ಮಾತ್ರವಲ್ಲ, ಲಾಂಗು-ಮಚ್ಚುಗಳು, ಹೊಡಿ-ಬಡಿ ಸಂದೇಶಗಳಿರುವ ಚಿತ್ರಗಳೂ ಕೂಡ ನಮ್ಮ ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ" ಎಂದು ಛಾಟಿ ಬೀಸಿದ್ದಾರೆ.

    ರಮ್ಯಾ ಅಭಿಮಾನಿಗಳಂತೂ ರಮ್ಯಾರ ಬುದ್ಧಿವಂತಿಕೆಯ ಹೇಳಿಕೆಗೆ 'ಭೇಷ್' ಎಂದಿದ್ದಾರೆ. ರೀಮೇಕ್ ಬೇಡ ಎನ್ನುವವರಿಗೆ, ಹೊಡಿ-ಬಡಿ ಚಿತ್ರಗಳಲ್ಲಿ ನಟಿಸುತ್ತಿರುವವರಿಗೆ, ಅದನ್ನು ನಿರ್ಮಿಸುತ್ತಿರುವವರಿಗೆ, ನಿರ್ದೇಶಿಸುತ್ತಿರುವವರಿಗೆ, ಹೀಗೆ ಸಂಬಂಧಪಟ್ಟ ಎಲ್ಲರಿಗೂ ನಮ್ಮ ಚಿತ್ರಗಳು ಹೇಗಿರಬೇಕೆಂಬ ಸಂದೇಶವನ್ನು ರವಾನಿಸಿದ್ದಾರೆ.

    ಅಭಿಮಾನಿಗಳು ತಮ್ಮ ಮಾತಿಗೆ ನೀಡಿರುವ ಉತ್ತಮ ಪ್ರತಿಕ್ರಿಯೆಗಳಿಂದ ಸಹಜವಾಗಿಯೇ ಖುಷಿಯಾಗಿರುವ ರಮ್ಯಾ, ಡಬ್ಬಿಂಗ್ ವಿರೋಧದ ಪರ ಮಾತನಾಡುತ್ತಲೇ, ಉಳಿದ ವಿಷಯಗಳತ್ತಲೂ ಗಮನಹರಿಸಿದ್ದಾರೆ. ಹೊಡಿ-ಬಡಿ ಸಂಸ್ಕೃತಿಯನ್ನು ತಮ್ಮ ಚಿತ್ರಗಳ ಮೂಲಕ ಪ್ರಸಾರ ಮಾಡುತ್ತಾ, ರೀಮೇಕ್ ಹಾಗೂ ಡಬ್ಬಿಂಗ್ ಮಾತ್ರ ವಿರೋಧಿಸುವವರಿಗೆ ರಮ್ಯಾ ಮಾತು ಅರ್ಥವಾದರೆ ಸಾಕು.

    ಬುದ್ಧಿವಂತಿಕೆ ಹಾಗೂ ದೂರದೃಷ್ಟಿಯಿಂದ ಕೂಡಿದ ರಮ್ಯಾ ಮಾತು ಚಿತ್ರರಂಗದ ಕೆಲವರಿಗೆ ಅರ್ಥವಾಗಿ ಪಾಲಿಸಿದರೆ ಸಾಕು, ಆಗಬೇಕಾದದ್ದು ತನ್ನಿಂದತಾನೆ ಆಗುತ್ತದೆ. ನಮ್ಮತನ ಉಳಿದುಕೊಂಡು ಕನ್ನಡ ಚಿತ್ರರಂಗ ಬೆಳೆಯುತ್ತದೆ, ಕನ್ನಡ ಪ್ರೇಕ್ಷಕರು ನೆಮ್ಮದಿಯನ್ನೇ ಉಸಿರಾಡುತ್ತಾರೆ. ಸಂಬಂಧಿಸಿದವರು ಅರ್ಥಮಾಡಿಕೊಳ್ಳಬಹುದೇ? ನೀವೇನಂತೀರಾ...? ನಿಮ್ಮ ಅಭಿಪ್ರಾಯ ಸೂಚಿಸಿ...(ಒನ್ ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/lucky-star-ramya-dubbing-remake-kannada-movies-065521.html">« Previous</a>

    English summary
    Lucky Star Ramya spoke about present discussing issue Dubbing. She told, not only dubbing is harmful, the Remake and Bloodshed Movies are also not our Culture. If Kannada Industry understand this, then everything will be correct.&#13; &#13;
    Sunday, May 27, 2012, 16:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X