For Quick Alerts
  ALLOW NOTIFICATIONS  
  For Daily Alerts

  ನಟ ನೀನಾಸಂ ಸತೀಶ್‌ಗೆ ಸಾಥ್ ನೀಡಿದ ಮೋಹಕತಾರೆ ರಮ್ಯಾ

  |

  ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ನಟಿ ರಮ್ಯಾ ಸದ್ಯ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ಸಿನಿಮಾಗಳ ಬಗ್ಗೆ, ರಾಜಕೀಯ ಮತ್ತು ಪ್ರಸ್ತುತ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ. ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗ್ತಾರೆ, ರಾಜಕೀಯದಲ್ಲಿ ಸಕ್ರೀಯರಾಗುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಮೋಹಕ ತಾರೆಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.

  ಆದರೆ ಅಭಿಮಾನಿಗಳ ಆಸೆ ಮತ್ತೆ ಈಡೇರಲು ಸಾಧ್ಯವಿಲ್ಲ ಎನ್ನುವುದನ್ನು ರಮ್ಯಾ ಇತ್ತೀಚಿಗಷ್ಟೆ ಬಹಿರಂಗ ಪಡಿಸುವ ಮೂಲಕ ಶಾಕ್ ನೀಡಿದ್ದರು. ಈಗಿನ ಪರಿಸ್ಥಿತಿಯಲ್ಲಿ ಇದು ಅಸಾಧ್ಯ ಎಂದು ಸ್ವತಃ ರಮ್ಯಾ ಅವರೇ ಹೇಳಿಕೊಂಡಿದ್ದರು. ಸಿನಿಮಾ ಜಗತ್ತಿನಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ರಮ್ಯಾ ''ಸಿನಿಮಾ ಎನ್ನುವುದು ಮುಗಿದು ಹೋದ ಅಧ್ಯಾಯ'' ಎಂದು ಹೇಳುವ ಮೂಲಕ ತಮ್ಮ ಫ್ಯಾನ್ಸ್ ಆಸೆಗೆ ಮತ್ತೆ ತಣ್ಣೀರೆರಚಿದ್ದರು.

  'ಸಿನಿಮಾ ಮುಗಿದು ಹೋದ ಅಧ್ಯಾಯ': ಅಭಿಮಾನಿಗಳ ಆಸೆಗೆ ಮತ್ತೆ ತಣ್ಣೀರೆರಚಿದ ರಮ್ಯಾ'ಸಿನಿಮಾ ಮುಗಿದು ಹೋದ ಅಧ್ಯಾಯ': ಅಭಿಮಾನಿಗಳ ಆಸೆಗೆ ಮತ್ತೆ ತಣ್ಣೀರೆರಚಿದ ರಮ್ಯಾ

  ಆದರೀಗ ಮತ್ತೆ ರಮ್ಯಾ ಸಿನಿಮಾ ಕೆಲಸಗಳ ಕಡೆ ಮುಖ ಮಾಡಿರುವುದು ಅಚ್ಚರಿ ಮೂಡಿಸಿದೆ. ಅಂದ ಹಾಗೆ ರಮ್ಯಾ ಮತ್ತೆ ಬಣ್ಣ ಹಚ್ಚುತ್ತಿದ್ದಾರಾ ಅಂತ ಅಚ್ಚರಿ ಪಡಬೇಡಿ. ರಮ್ಯಾ ಅನೇಕ ವರ್ಷಗಳ ಬಳಿಕ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅನೇಕ ವರ್ಷಗಳ ಬಳಿಕ ರಮ್ಯಾ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡುವ ಅಚ್ಚರಿ ಮೂಡಿಸಿದ್ದಾರೆ. ಸ್ಯಾಂಡಲ್ ವುಡ್ ನಟ ನೀನಾಸಂ ಸತೀಶ್ ನಟನೆಯ ಹೊಸ ಸಿನಿಮಾದ ಫಸ್ಟ್ ಲುಕ್ ಅನ್ನು ರಮ್ಯಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

  ಪೋಸ್ಟರ್‌ನಲ್ಲಿ ನಟ ನೀನಾಸಂ ಸತೀಶ್ ಸಿಗರೇಟು ಸೇದುವ ದೃಶ್ಯವಿದೆ. ಪೋಸ್ಟರ್ ಬಿಡುಗಡೆ ಮಾಡಿ ರಮ್ಯಾ ಚಿತ್ರತಂಡಕ್ಕೆ ಮತ್ತು ಸತೀಶ್ ಅವರಿಗೆ ಶುಭಹಾರೈಸಿದ್ದಾರೆ. ಸತೀಶ್ ನೀನಾಸಂ ಪೋಸ್ಟರ್ ನಲ್ಲಿ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

  "ತುಂಬ ಉತ್ಸಾಹದಿಂದ ಲಾಂಚ್ ಮಾಡುತ್ತಿದ್ದೇನೆ, ಕನ್ನಡದ ನಮ್ಮ ಹೆಮ್ಮೆಯ ನಟ ಸತೀಶ್ ನೀನಾಸಂ ಅವರ ಪಗೈವನುಕು ಅರುಳ್ವಾಯ್ ಚಿತ್ರದ ಪಾತ್ರದ ಪೋಸ್ಟರ್ ಇಂದು ಸಂಜೆ 5ಕ್ಕೆ. ಮೊದಲ ಬಾರಿಗೆ ಸತೀಶ್ ನೀನಾಸಂ ಅವರು ತಮಿಳಿನಲ್ಲಿ ನಟಿಸುತ್ತಿದ್ದಾರೆ. ನಮ್ಮ ನಟರು ಬೇರೆ ಭಾಷೆಯಲ್ಲಿ ಬೆಳೆಯುತ್ತಿರುವುದು ನಮ್ಮ ಹೆಮ್ಮೆ..ನೋಟಕ್ಕೆ ಕಾಯುತ್ತೀರಿ ಸಂಜೆವರೆಗೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದರು. ಅದರಂತೆ ರಮ್ಯಾ ಸತೀಶ್ ನಟನೆಯ ತಮಿಳಿನ ಮೊದಲ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

  Ramya launching the character look of Sathish Ninasam Starrer Tamil Debut Pagaivanuku Arulvai

  ಅಂದಹಾಗೆ ರಮ್ಯಾ ಬಳಿ ಪೋಸ್ಟರ್ ಬಿಡುಗಡೆ ಮಾಡಿಸುತ್ತಿರುವ ಸಂತಸವನ್ನು ಸತೀಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, "ನಿಮ್ಮ ಹಸ್ತದಿಂದ ಬಿಡುಗಡೆಗೆ ಪ್ರೀತಿಯಿಂದ ಕಾಯುತ್ತಿರುವೆ" ಎಂದು ಹೇಳಿದ್ದರು.

  ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಮಾತುಕತೆ ಮಾಡಿದ ನಟಿ ರಮ್ಯಾಗೆ ''ಮತ್ತೆ ಯಾವಾಗ ಸಿನಿಮಾಗೆ ವಾಪಸ್ ಆಗ್ತೀರಾ'' ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿರುವ ನಟಿ ''ಸಿನಿಮಾ ಜರ್ನಿ ಯಾವತ್ತೋ ಮುಗಿದು ಹೋಗಿದೆ'' ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.

  English summary
  Ramya launching the character look of Sathish Ninasam Starrer Tamil Debut Pagaivanuku Arulvai.
  Wednesday, September 8, 2021, 17:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X