For Quick Alerts
  ALLOW NOTIFICATIONS  
  For Daily Alerts

  ಮೂರನೇ ಬಾರಿಯೂ ವೋಟ್ ಮಾಡದ ರಮ್ಯಾಗೆ ಕ್ಲಾಸ್ ತೆಗೆದುಕೊಂಡ ಕನ್ನಡಿಗರು

  |
  ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಈ ಬಾರಿ ಕೂಡ ಮತ ಚಲಾಯಿಸಲಿಲ್ಲ ಯಾಕೆ? | Lok Sabha Elections 2019

  ''Every vote matters'' ಹೌದು, ಪ್ರತಿಯೊಂದು ಮತವೂ ಅಮೂಲ್ಯವಾದದು. ಅದೇ ಕಾರಣಕ್ಕೆ ತಪ್ಪದೇ ಮತದಾನ ಮಾಡಿ ಅಂತ ಪ್ರತಿ ಚುನಾವಣೆಯಲ್ಲಿಯೂ ಎಲ್ಲರೂ ಹೇಳುತ್ತಾರೆ. ತಮ್ಮದೆ ರೀತಿಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುತ್ತಾರೆ.

  ಹೀಗಿದ್ದರೂ ಕೆಲವರು ಮತದಾನ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಸಾಮಾನ್ಯರು ಮಾತ್ರವಲ್ಲ ಸಮಾಜದಲ್ಲಿ ದೊಡ್ಡ ಹೆಸರು ಮಾಡಿದ ಕೆಲವರು ಕೂಡ ಮತದಾನದ ಬಗ್ಗೆ ನಿರ್ಲಕ್ಷಾ ತೋರುತ್ತಾರೆ. ನಟಿ ಹಾಗೂ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಪದೇ ಪದೇ ಮತದಾನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

  ಮತ ಚಲಾವಣೆ ಮಾಡದ ರಮ್ಯಾಗೆ ನಾಚಿಕೆ ಆಗಬೇಕು: ಛೀಮಾರಿ ಹಾಕಿದ ನೆಟ್ಟಿಗರು.!

  ಒಬ್ಬ ನಟಿಯಾಗಿ, ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ರಮ್ಯಾ ಅವರ ಈ ನಡವಳಿಕೆ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದೆ ಓದಿ...

  ಮೂರನೇ ಬಾರಿಯೂ ಮತದಾನ ಮಾಡಲಿಲ್ಲ ರಮ್ಯಾ

  ಮೂರನೇ ಬಾರಿಯೂ ಮತದಾನ ಮಾಡಲಿಲ್ಲ ರಮ್ಯಾ

  ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರ ಪಟ್ಟಿಯಲ್ಲಿ ರಮ್ಯಾ ಹೆಸರಿದೆ. ಆದರೆ, ನಿನ್ನೆ (ಗುರುವಾರ) ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಮತದಾನ ಮಾಡಲು ಬರಲಿಲ್ಲ. ಅದಕ್ಕೂ ಹಿಂದೆ ಮಂಡ್ಯದಲ್ಲಿ ನಡೆದ ಲೋಕಸಭಾ ಮರು ಚುನಾವಣೆ, ಹಾಗೂ ವಿಧಾನಸಭೆ ಚುನಾವಣೆಯಲ್ಲಿಯೂ ರಮ್ಯಾ ವೋಟ್ ಒತ್ತಿರಲಿಲ್ಲ.

  ಹೇಳೋದು ಒಂದು, ಮಾಡೋದು ಮತ್ತೊಂದು

  ನಟಿ ರಮ್ಯಾ ಟ್ವಿಟ್ಟರ್ ಖಾತೆಯನ್ನು ಒಮ್ಮೆ ತೆರೆದು ನೋಡಿ. ಲೋಕಸಭಾ ಚುನಾವಣೆಯ ಹಿಂದಿನ ದಿನ ಟ್ವಿಟ್ಟರ್ ನಲ್ಲಿ ''Every vote matters'' ಎಂದು ಬರೆದುಕೊಂಡಿದ್ದರು. ತಮ್ಮ ಟ್ವಿಟ್ಟರ್ ಖಾತೆಯ ಫ್ರೊಫೈಲ್ ಹಾಗೂ ಕವರ್ ಚಿತ್ರವನ್ನು ವೋಟ್ ಫಾರ್ ಕಾಂಗ್ರೆಸ್ ಎಂದು ಬದಲಾಯಿಸಿಕೊಂಡಿದ್ದರು. ಹೀಗಿರುವಾಗ, ತಾವೇ ಮತದಾನ ಮಾಡುವುದನ್ನು ಮರೆತು ಬಿಟ್ಟಿದ್ದಾರೆ.

  ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸ್ಟಾರ್ಸ್

  ಮೊದಲು ನೀವು ವೋಟ್ ಮಾಡಿ

  ಮೊದಲು ನೀವು ವೋಟ್ ಮಾಡಿ

  ಮತದಾನದಿಂದ ಮೂರನೇ ಬಾರಿಯೂ ಹಿಂದೆ ಸರಿದ ರಮ್ಯಾಗೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ''Every vote matters'' ಎಂದು ಉಪದೇಶ ಮಾಡುವ ನೀವು ಮೊದಲು ಮತದಾನ ಮಾಡಿ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ''ಮೊದ್ಲು ನೀವು ವೋಟ್ ಹಾಕೋದನ್ನು ಕಲಿಯಿರಿ, ಆಮೇಲೆ ಬೇರೆಯವರಿಗೆ ಹೇಳಲು ಬನ್ನಿ'' ಎಂದಿದ್ದಾರೆ.

  ಮಂಡ್ಯ ಪ್ರಚಾರದಲ್ಲಿ ಕಾರಣಲಿಲ್ಲ ರಮ್ಯಾ

  ಮಂಡ್ಯ ಪ್ರಚಾರದಲ್ಲಿ ಕಾರಣಲಿಲ್ಲ ರಮ್ಯಾ

  ಚುನಾವಣೆಯಲ್ಲಿ ಮತದಾನ ಮಾಡುವುದು ಮಾತ್ರವಲ್ಲ, ಚುನಾವಣಾ ಪ್ರಚಾರದಲ್ಲಿಯೂ ರಮ್ಯಾ ಕಾಣಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಕರ್ನಾಟಕದ ತುಂಬ ಬಹಳಷ್ಟು ಸುದ್ದಿ ಮಾಡಿದ್ದ ಕ್ಷೇತ್ರ. ನಟ ದರ್ಶನ್ ಹಾಗೂ ಯಶ್ ನಟಿ ಸುಮಲತಾ ಪರ ಪ್ರಚಾರ ಮಾಡಲು ಬಂದಿದ್ದರು. ಆದರೆ, ರಮ್ಯಾ ತಮ್ಮ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರ ಮಾಡಲಿಲ್ಲ.

  RR ನಗರದಲ್ಲಿ ವೋಟ್ ಮಾಡಿದ 'ಜೋಡೆತ್ತು' ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ

  English summary
  Kannada Actress, Congress Politician, INC's Social Media Head Ramya aka Divya Spandana not voted in Lok Sabha Elections 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X