For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್-ರಮ್ಯಾ 'ದಿಲ್ ಕಾ ರಾಜಾ'ಗೆ ಭಾರಿ ನಿರೀಕ್ಷೆ!

  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಅಭಿನಯದ 'ದಿಲ್ ಕಾ ರಾಜಾ' ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇನ್ನೊಂದೆಡೆ ದಿಗಂತ್ ಜೋಡಿಯಾಗಿ ತೆಲುಗು ನಿರ್ದೇಶಕ ಕೋಡಿ ರಾಮಕೃಷ್ಣ ಚಿತ್ರದಲ್ಲಿ ನಟಿಸುತ್ತಿದ್ದಾರೆ ರಮ್ಯಾ. ಇತ್ತ, ಪ್ರಜ್ವಲ್ ಅಭಿನಯದ 'ಗೋಕುಲ ಕೃಷ್ಣ' ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಎಂಡಿ ಶ್ರೀಧರ್ ನಿರ್ದೇಶನದ 'ಗಲಾಟೆ' ಚಿತ್ರ ಮುಗಿಸಿ 'ಜಿದ್ದಿ' ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ ಪ್ರಜ್ವಲ್ ದೇವರಾಜ್.

  'ಸಿದ್ಲಿಂಗು' ಖ್ಯಾತಿಯ ವಿಜಯ ಪ್ರಸಾದ್ ನಿರ್ದೇಶನದ ಬರಲಿರುವ 'ನೀರ್ ದೋಸೆ' ಚಿತ್ರದ ಕಥೆಯನ್ನು ಬಹವಾಗಿ ಇಷ್ಟಪಟ್ಟಿರುವ ರಮ್ಯಾ ತಾವು ಆ ಚಿತ್ರದಲ್ಲಿ ನಾಯಕ ಜಗ್ಗೇಶ್ ಜೋಡಿಯಾಗಿ ನಟಿಸುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಈ ಚಿತ್ರದ ಕಥೆ ಮಾತ್ರ ತಮಗೆ ಇಷ್ಟವಾಗಿದೆ, ಅದರಲ್ಲಿ ನಟಿಸುವ ಬಗ್ಗೆ ತಾವಿನ್ನೂ ಗ್ರೀನ್ ಸಿಗ್ನಲ್ ನೀಡಲ್ಲವೆಂಬ ರಮ್ಯಾ ಮಾತೀಗ ಎಲ್ಲೆಡೆ ಪ್ರತಿಧ್ವನಿಸುತ್ತಿದೆ. ಕಾರಣ, ಈ ಮೊದಲು ಜಗ್ಗೇಶ್ ಹಾಗೂ ರಮ್ಯಾ 'ನೀರ್ ದೋಸೆ' ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ ಎಂದು ಸುದ್ದಿಯಾಗಿಬಿಟ್ಟಿತ್ತು.

  ಈ ಬಗ್ಗೆ ನಿರ್ದೇಶಕ ವಿಜಯಪ್ರಸಾದ್ ಕೂಡ ಸ್ಪಷ್ಟೀಕರಣ ನೀಡಿ 'ರಮ್ಯಾ ನಟಿಸುವ ಬಗ್ಗೆ ಇನ್ನೂ ಪಕ್ಕಾ ಆಗಿಲ್ಲ. ಅವರು ನನ್ನ ಕಥೆ ಒಪ್ಪಿದ್ದಾರೆ ಅಷ್ಟೇ" ಅಂದಿದ್ದಾರೆ. ಈ ಮಾತಿನೊಂದಿಗೆ ರಮ್ಯಾ ಹಾಗೂ ಜಗ್ಗೇಶ್ ಜೋಡಿ 'ನೀರ್ ದೋಸೆ' ಚಿತ್ರದಲ್ಲಿ ನಟಿಸುವ ವಿಷಯ ಮೂಲೆ ಸೇರಿದೆ. ಆದರೆ ಇದೇ ವೇಳೆ, ಪ್ರಜ್ವಲ್-ರಮ್ಯಾ ಜೋಡಿಯ 'ದಿಲ್ ಕಾ ರಾಜಾ' ಚಿತ್ರದ ಬಗ್ಗೆ ಭಾರಿ ಭರವಸೆಯ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.

  'ದಿಲ್ ಕಾ ರಾಜಾ' ಚಿತ್ರದ ಅಂತಿಮ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದ್ದು ಈ ಚಿತ್ರದ ಬಗ್ಗೆ ಸ್ವತಃ ರಮ್ಯಾ ಹಾಗೂ ಪ್ರಜ್ವಲ್ ಅವರಿಬ್ಬರಿಗೂ ಸಾಕಷ್ಟು ನಿರೀಕ್ಷೆಯಿದೆ. ಕಥೆ ಹಾಗೂ ತಮ್ಮ ಪಾತ್ರಕ್ಕಷ್ಟೇ ಮಹತ್ವ ಕೊಡುವ ರಮ್ಯಾ ಈ ಚಿತ್ರದಲ್ಲಿದ್ದರೂ ಇಡೀ ಚಿತ್ರ ಚೆನ್ನಾಗಿ ಮೂಡಿಬರುತ್ತಿದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಅಲ್ಲಿಗೆ, ರಮ್ಯಾ ಹಾಗೂ ಪ್ರಜ್ವಲ್ ಈ ಇಬ್ಬರ ಅಭಿಮಾನಿಗಳೂ ಈಗ 'ದಿಲ್ ಕಾ ರಾಜಾ' ಚಿತ್ರದ ಬಗ್ಗೆ ಕಾಯುವಂತಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Prajwal Devaraj and Ramya lead movie 'Dil Ka Raaja' is getting high expectation in its Shooting Stage itself. According to the sources, this movie story and screenplay is very good and this romantic love story will create a new history in Sandalwood. 
 
  Sunday, October 21, 2012, 18:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X