For Quick Alerts
  ALLOW NOTIFICATIONS  
  For Daily Alerts

  ಯಾಕೆ ಮದುವೆಯಾಗಿಲ್ಲ? ರಮ್ಯಾ ಕೊಟ್ಟರು ಉತ್ತರ

  |

  ನಟಿ ರಮ್ಯಾ ಬಹು ವರ್ಷಗಳ ಬ್ರೇಕ್‌ನ ಬಳಿಕ ಮತ್ತೆ ಚಿತ್ರರಂಗಕ್ಕೆ ಪದಾಪರ್ಣೆ ಮಾಡುತ್ತಿದ್ದಾರೆ. ರಮ್ಯಾರ ಹೊಸ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  ರಮ್ಯಾರ ಹೊಸ ಸಿನಿಮಾದ ಬಗ್ಗೆ ಇರುವಂತೆಯೇ ಅವೆರ ಮದುವೆಯ ಬಗ್ಗೆಯೂ ಅಭಿಮಾನಿಗಳ ಕುತೂಹಲ ಇದ್ದೇ ಇದೆ. ರಮ್ಯಾ ಮದುವೆ ಈಗಂತೆ, ಆಗಂತೆ ಎಂಬ ಸುದ್ದಿಗಳು ಕೆಲವು ವರ್ಷಗಳಿಂದಲೂ ಹರಿದಾಡುತ್ತಲೇ ಇವೆಯಾದರೂ ರಮ್ಯಾ ಮಾತ್ರ ಈ ಬಗ್ಗೆ ಬಾಯಿ ಬಿಟ್ಟಿರಲಿಲ್ಲ.

  ಆದರೆ ಈಗ ರಮ್ಯಾ ಮದುವೆ ಬಗ್ಗೆ ಮಾತನಾಡಿದ್ದಾರೆ. ಬಿಜಿಎಸ್ ವಿದ್ಯಾ ಸಮೂಹದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನಟಿ ರಮ್ಯಾಗೆ ಅಲ್ಲಿನ ವಿದ್ಯಾರ್ಥಿಯೊಬ್ಬ 'ನೀವು ಮದುವೆ ಯಾವಾಗ ಆಗ್ತೀರ' ಎಂಬ ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ರಮ್ಯಾ ಸೂಕ್ತ ಉತ್ತರವನ್ನೇ ನೀಡಿದ್ದಾರೆ.

  ನೀವು ಸಿಂಗಲ್ಲಾ ಎಂದು ಪ್ರಶ್ನೆ ಮಾಡಿದ ರಮ್ಯಾ

  ನೀವು ಸಿಂಗಲ್ಲಾ ಎಂದು ಪ್ರಶ್ನೆ ಮಾಡಿದ ರಮ್ಯಾ

  ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ರಮ್ಯಾರನ್ನು, ದೇವಕಿಶೋರ್ ಎಂಬ ವಿದ್ಯಾರ್ಥಿ, 'ನಿಮ್ಮ ಮದುವೆ ಯಾವಾಗ ಮೇಡಂ' ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ರಮ್ಯಾ, 'ನೀವು ಸಿಂಗಲ್ಲಾ?' ಎಂದು ಪ್ರಶ್ನೆ ಮಾಡಿದ್ದಾರೆ. ಮುಂದುವರೆದು, 'ಮದುವೆ ಯಾಕೆ ಆಗ್ಬೇಕು ಎಂದು ನನಗೆ ಅರ್ಥ ಆಗ್ತಿಲ್ಲಪ್ಪ' ಎಂದಿದ್ದಾರೆ. ಆಗ ಆ ವಿದ್ಯಾರ್ಥಿ 'ಅದೇ ನಮಗೂ ಬೇಕಾಗಿರೋದು, ನೀವು ಮದುವೆ ಆಗ್ಬೇಡಿ'' ಎಂದಿದ್ದಾನೆ. ಅದಕ್ಕೆ ನಟಿ ರಮ್ಯಾ, 'ಮದುವೆ ಆಗಬಾರದಲ್ವ, ಅದೇ ಬೆಸ್ಟ್, ನನಗೆ ಗೊತ್ತು'' ಎಂದಿದ್ದಾರೆ. ರಮ್ಯಾರ ಉತ್ತರಕ್ಕೆ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ತಟ್ಟಿದ್ದಾರೆ.

  'ಸಂತೋಶವಾಗಿರಬೇಕು ಎಂದುಕೊಂಡಿದ್ದೇನೆ ಅದಕ್ಕೆ ಮದುವೆಯಾಗಿಲ್ಲ'

  'ಸಂತೋಶವಾಗಿರಬೇಕು ಎಂದುಕೊಂಡಿದ್ದೇನೆ ಅದಕ್ಕೆ ಮದುವೆಯಾಗಿಲ್ಲ'

  ಮಾತು ಮುಂದುವರೆಸಿದ ನಟಿ ರಮ್ಯಾ, ''ಒಂದೋ ನೀವು ಸಂತೋಷವಾಗಿರಬೇಕು, ಇಲ್ಲವೆ ಮದುವೆಯಾಗಬೇಕು. ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನಾನು ಖುಷಿಯಾಗಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಹಾಗಾಗಿ ನಾನು ಮದುವೆಯಾಗಿಲ್ಲ'' ಎಂದಿದ್ದಾರೆ ನಟಿ ರಮ್ಯಾ.

  ಈ ಒಂದು ಕಾರಣಕ್ಕಷ್ಟೆ ಮದುವೆಯಾಗಿ ಎಂದ ರಮ್ಯಾ

  ಈ ಒಂದು ಕಾರಣಕ್ಕಷ್ಟೆ ಮದುವೆಯಾಗಿ ಎಂದ ರಮ್ಯಾ

  ''ನನಗೆ ಗೊತ್ತಿತ್ತು ನೀವು ಈ ಪ್ರಶ್ನೆ ಕೇಳೇ ಕೇಳುತ್ತೀರೆಂದು. ಆದರೆ ನನಗನ್ನಿಸುತ್ತದೆ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವುದು ಬಹಳ ಮುಖ್ಯ. ಶಿಕ್ಷಣವೂ ಸಹ ಬಹಳ ಮುಖ್ಯ. ನಿಮಗೆ ಸರಿ ಎನಿಸುವಂಥಹಾ ಸಂಗಾತಿ ಸಿಕ್ಕರೆ ಖಂಡಿತ ಮದುವೆಯಾಗಿ ಆರಾಮವಾಗಿರಿ. ಇಲ್ಲವಾದರೆ ಯಾವುದೇ ಒತ್ತಡಕ್ಕೆ ಸಿಲುಕಿ ಮದುವೆ ಆಗಲು ಹೋಗಬೇಡಿ. ಪ್ರೀತಿಯ ಹೊರತಾಗಿ ಇನ್ನಾವುದೇ ಕಾರಣಕ್ಕೂ ಮದುವೆ ಆಗದಿರಿ'' ಎಂಬ ಸಲಹೆಯನ್ನು ನಟಿ ರಮ್ಯಾ ವಿದ್ಯಾರ್ಥಿಗಳಿಗೆ ನೀಡಿದ್ದಾರೆ.

  ಆ ರೀತಿಯ ಹುಡುಗ ಸಿಕ್ಕರೆ ಮದುವೆಯಾಗ್ತೀನಿ: ರಮ್ಯಾ

  ಆ ರೀತಿಯ ಹುಡುಗ ಸಿಕ್ಕರೆ ಮದುವೆಯಾಗ್ತೀನಿ: ರಮ್ಯಾ

  ನನಗೆ ಅಂಥಹಾ ಸೋಲ್‌ಮೇಟ್ ಯಾರೂ ಸಿಕ್ಕಿಲ್ಲ ಸಿಕ್ಕರೆ ಖಂಡಿತ ಮದುವೆ ಆಗ್ತೀನಿ ಎಂದಿದ್ದಾರೆ ನಟಿ ರಮ್ಯಾ. ಇದೇ ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿಗಳು ನಟಿ ರಮ್ಯಾಗೆ ಸನ್ಮಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್ ಸೇರಿದಂತೆ ಕೆಲವು ಬಿಜೆಪಿಗರು ಸಹ ಹಾಜರಿದ್ದರು. ಅವರೊಟ್ಟಿಗೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ರಮ್ಯಾ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ನಟಿ ರಮ್ಯಾ, ಇದೀಗ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದು, ಡಾಲಿ ಧನಂಜಯ್ ನಟಿಸುತ್ತಿರುವ 'ಉತ್ತರಕಾಂಡ' ಸಿನಿಮಾ ಮೂಲಕ ಮತ್ತೆ ನಟನೆಗೆ ಕಾಲಿಡುತ್ತಿದ್ದಾರೆ. 'ಹಾಸ್ಟೆಲ್ ಹುಡುಗರು' ಸಿನಿಮಾದ ಅತಿಥಿ ಪಾತ್ರದಲ್ಲಿಯೂ ರಮ್ಯಾ ನಟಿಸುತ್ತಿದ್ದಾರೆ.

  English summary
  Actress Ramya said why she did not get married. She said get marriage only for love no other reasons.
  Thursday, November 24, 2022, 17:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X