»   » ಆರ್ಯನ್ ಟ್ರೇಲರ್: ಪಿಟಿ ಉಷಾ ಸ್ಟೈಲಲ್ಲಿ ರಮ್ಯಾ ಓಟ

ಆರ್ಯನ್ ಟ್ರೇಲರ್: ಪಿಟಿ ಉಷಾ ಸ್ಟೈಲಲ್ಲಿ ರಮ್ಯಾ ಓಟ

Posted By:
Subscribe to Filmibeat Kannada

ಈ ಬಾರಿಯ ಲೋಕಸಭೆ ಚುನಾವಣೆ ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಅವರ ಪಾಲಿಗೆ ಕಹಿ ನೆನಪುಗಳನ್ನು ಉಳಿಸಿದೆ. ಈಗ ಇದೇ ಜೋಡಿ 'ಆರ್ಯನ್' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.

ಇದೀಗ ಚಿತ್ರದ ಎಚ್ ಡಿ ಕ್ಲಾರಿಟಿ ಟ್ರೇಲರ್ ಬಿಡುಗಡೆಯಾಗಿದ್ದು, ನೋಡುತ್ತಿದ್ದರೆ ರಮ್ಯಾ ಮತ್ತು ಶಿವಣ್ಣ ಅವರು ಸೋಲಿನ ಕಹಿ ಮರೆತು ಹೊಸ ಉತ್ಸಾಹದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಶಿವಣ್ಣ ಅಥ್ಲೆಟಿಕ್ ಕೋಚ್ ಆಗಿದ್ದು, ರಮ್ಯಾ ಅಥ್ಲೀಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. [ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಥೆ ಮುಂದೇನು?]

A still from Aaryan

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದ ಡಿ.ರಾಜೇಂದ್ರ ಬಾಬು ಅವರ ಅಕಾಲಿಕ ಮರಣದ ಬಳಿಕ ಗುರುದತ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದರೆ ಚಿತ್ರವನ್ನು ಡಿ.ರಾಜೇಂದ್ರ ಬಾಬು ಅವರ ಹೆಸರಲ್ಲೇ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಈ ಚಿತ್ರವನ್ನು ಡಿ.ಕೇಶವ್ ಫಿಲಂಸ್ ಲಾಂಛನದಲ್ಲಿ ಡಿ.ಕಮರ್ ಅವರು ನಿರ್ಮಿಸುತ್ತಿದ್ದಾರೆ. ಚಂದ್ರಶೇಖರ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಜನಾರ್ದನ್ ಮಹರ್ಷಿ ಸಂಭಾಷಣೆ ಬರೆದಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ನಿರ್ದೇಶನದ 'ಆರ್ಯನ್' ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)
<center><iframe width="100%" height="360" src="//www.youtube.com/embed/RBQ5CKZaePw?feature=player_embedded" frameborder="0" allowfullscreen></iframe></center>

English summary
Check out the Golden Girl Ramya and Hat Trick Hero Shivrajkumar lead 'Aryan' trailer. Jassie Gift is the music director and Chandrashekar is the cinematographer of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada