Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಲ ದಿನ ತಾಳ್ಮೆ ಇಂದಿರಿ: ಕಮ್ ಬ್ಯಾಕ್ ಬಗ್ಗೆ ರಮ್ಯಾ ಮಾತು
'ಸ್ಯಾಂಡಲ್‌ವುಡ್ ಕ್ವೀನ್' ಎನಿಸಿಕೊಂಡಿದ್ದ ನಟಿ ರಮ್ಯಾ ಚಿತ್ರರಂಗದಿಂದ ದೂರಾಗಿ ಕೆಲ ವರ್ಷಗಳೇ ಆಗಿವೆ. ಇತ್ತೀಚೆಗೆ ರಮ್ಯಾರ ಕಮ್ ಬ್ಯಾಕ್ ಸುದ್ದಿಗಳು ತುಸು ಜೋರಾಗಿಯೇ ಹರಿದಾಡುತ್ತಿವೆ.
2003 ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ 'ಅಭಿ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರಮ್ಯಾ ಒಂದು ದಶಕದವರೆಗೆ ಸ್ಯಾಂಡಲ್‌ವುಡ್‌ನಲ್ಲಿ ರಾಣಿಯಂತೆ ಮೆರೆದರು. ರಮ್ಯಾರನ್ನು 'ಸ್ಯಾಂಡಲ್‌ವುಡ್ ಕ್ವೀನ್' ಎಂದೇ ಕರೆಯಲಾಗುತ್ತಿತ್ತು.
Recommended Video
ಮತ್ತೆ
ಬೆಳ್ಳಿತೆರೆಗೆ
ಬರುತ್ತಿದ್ದಾರೆ
ಸ್ಯಾಂಡಲ್‌ವುಡ್
ರಾಣಿ
ರಮ್ಯಾ!
2012 ರ ವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ರಮ್ಯಾ ಆ ಬಳಿಕ ರಾಜಕೀಯದಲ್ಲಿ ಬ್ಯುಸಿಯಾಗಿಬಿಟ್ಟರು. 2012 ರ ಬಳಿಕ ರಮ್ಯಾ ನಟಿಸಿದ್ದು ಕೇವಲ ಎರಡು ಸಿನಿಮಾಗಳಲ್ಲಿ ಅಷ್ಟೆ. ಇಷ್ಟು ಸುದೀರ್ಘ ಕಾಲ ಚಿತ್ರರಂಗದಿಂದ ರಮ್ಯಾ ದೂರ ಉಳಿದಿದ್ದರೂ ಅಭಿಮಾನಿಗಳಿಗೆ ಅವರ ಮೇಲಿನ ಪ್ರೇಮ ಕಡಿಮೆ ಆಗಿಲ್ಲ. ಹಾಗಾಗಿ ರಮ್ಯಾ ಮತ್ತೆ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡುತ್ತಾರೆ ಎಂಬ ಗಾಳಿ ಸುದ್ದಿ ಹರಡುತ್ತಿದ್ದಂತೆ ಸಾಮಾಜಿಕ ಜಾಲತಾಣದ ಮೂಲಕ ರಮ್ಯಾರನ್ನು ಪ್ರಶ್ನೆ ಮಾಡುತ್ತಿದ್ದಾರೆ.
ತಮ್ಮ ಸ್ಯಾಂಡಲ್‌ವುಡ್ ಮರು ಪ್ರವೇಶದ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿದ್ದಂತೆ ಸ್ವತಃ ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಗಾಳಿ ಸುದ್ದಿಗಳಿಗೆ ಉತ್ತರ ಕೊಟ್ಟಿದ್ದಾರೆ.
ನಟಿ
ಅಮೂಲ್ಯಗೆ
ಅತೀ
ದುಬಾರಿ
ಕನಕವಲ್ಲಿ
ಸೀರೆ
ಉಡುಗೊರೆ
ನೀಡಿದ
ರಮ್ಯಾ!

ಕುತೂಹಲ ಹಾಗೆಯೇ ಇಟ್ಟುಕೊಳ್ಳಿ: ರಮ್ಯಾ
''ನನ್ನ 'ಕಮ್‌ಬ್ಯಾಕ್' ಸಿನಿಮಾದ ಬಗ್ಗೆ ನಿಮ್ಮ ಕುತೂಹಲ ಅದರ ಬಗ್ಗೆ ಹರಡಿರುವ ಗಾಳಿ ಸುದ್ದಿಗಳು ಎಲ್ಲವೂ ನನಗೆ ಅರ್ಥವಾಗುತ್ತದೆ. ಆದರೆ ನನ್ನ 'ಕಮ್‌ಬ್ಯಾಕ್' ಸಿನಿಮಾ ಬಗ್ಗೆ ಹರಡಿರುವ ಗಾಳಿ ಸುದ್ದಿಗಳು ನಿಜವಲ್ಲ. ನಾನು ಕೆಲವು ಚಚಿತ್ರಕತೆಗಳನ್ನು ಕಳೆದ ಕೆಲವು ತಿಂಗಳಿಂದ ಕೇಳುತ್ತಿದ್ದೇನೆ. ಯಾವಾಗ ಎಲ್ಲವೂ ನನಗೆ ಸರಿ ಎನಿಸುತ್ತದೆಯೋ ಆಗ ನಾನು ನಿಮಗೆ ಖುದ್ದಾಗಿ ವಿಷಯ ತಿಳಿಸುತ್ತೇನೆ. ಆ ವರೆಗೆ ನಿಮ್ಮ ಕುತೂಹಲವನ್ನನು ತುಸು ಅದುಮಿಟ್ಟುಕೊಳ್ಳಿ'' ಎಂದಿದ್ದಾರೆ ರಮ್ಯಾ.

ದೇಹ ತೂಕ ಇಳಿಸಿಕೊಳ್ಳುತ್ತಿದ್ದೇನೆ: ರಮ್ಯಾ
''ಅವಕಾಶಗಳು ಸಾಕಷ್ಟು ಬರುತ್ತಲೇ ಇವೆ. ನಾನೀಗ ಕೆಲವು ಚಿತ್ರಕತೆಗಳನ್ನು ಓದುತ್ತಿದ್ದೇನೆ. ಆದಷ್ಟು ಶೀಘ್ರವಾಗಿ ಈ ಬಗ್ಗೆ ನಿಖರ ಮಾಹಿತಿ ನೀಡುತ್ತೇನೆ. ನನ್ನ ಕಮ್ ಬ್ಯಾಕ್ ಸಿನಿಮಾದ ಬಗ್ಗೆ ಮಾರ್ಚ್‌ನಲ್ಲಿ ನಾನು ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಳ್ಳುತ್ತೇನೆ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು 'ಶಸ್ತ್ರಚಿಕಿತ್ಸೆಯ ಬಳಿಕ ನಾನು ತುಸು ದೇಹ ತೂಕ ಹೆಚ್ಚಿಸಿಕೊಂಡಿದ್ದೇನೆ. ಅದನ್ನು ನಿವಾರಣೆ ಮಾಡಿಕೊಳ್ಳಬೇಕಿದೆ. ನಟನೆಗೆ ಬೇಕಾದ ದೇಹ ಸ್ಥಿತಿಯನ್ನು ಮರಳಿ ಪಡೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾನೀಗ ಕೆಲಸ ಮಾಡುತ್ತಿದ್ದೇನೆ'' ಎಂದು ಕೆಲ ದಿನಗಳ ಹಿಂದೆ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ಹೇಳಿದ್ದರು ನಟಿ ರಮ್ಯಾ.

ಅಮೂಲ್ಯ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಪ್ರಸ್ತುತ ಬೆಂಗಳೂರಿನಲ್ಲಿಯೇ ಇರುವ ನಟಿ ರಮ್ಯಾ ಎರಡು ದಿನಗಳ ಹಿಂದಷ್ಟೆ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಮೂಲ್ಯಗೆ ಬಹುದುಬಾರಿಯಾದ 'ಕನಕವಲ್ಲಿ' ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಜೊತೆಗೆ ಗಿಫ್ಟ್ ಕಾರ್ಡ್ ಒಂದನ್ನು ಸಹ ನೀಡಿ ಶುಭ ಹಾರೈಸಿದ್ದರು ನಟಿ ರಮ್ಯಾ. ರಮ್ಯಾ ನೀಡಿದ ಕನಕವಲ್ಲಿ ಸೀರೆಯ ಚಿತ್ರವನ್ನು ಹಾಗೂ ಶುಭಾಶಯದ ಕಾರ್ಡ್‌ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ನಟಿ ರಮ್ಯಾ.

ಸಿನಿಮಾ ರಂಗದಿಂದ ನಂಟು ಹೊಂದಿದ್ದರು ರಮ್ಯಾ
ಹಲವು ವರ್ಷ ನಟನೆಯಿಂದ ದೂರ ಉಳಿದಿದ್ದರು ಸಿನಿಮಾ ರಂಗದಿಂದ ದೂರ ಇರಲಿಲ್ಲ ರಮ್ಯಾ. ಸಿನಿಮಾ ರಂಗದ ಗೆಳೆಯರೊಟ್ಟಿಗೆ ಸಂಪರ್ಕದಲ್ಲಿದ್ದರು, ಕನ್ನಡ ಸಿನಿಮಾಗಳನ್ನು ವೀಕ್ಷಿಸಿ ಅವುಗಳ ಬಗ್ಗೆ ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆ ನೀಡುತ್ತಲೇ ಇದ್ದರು. ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿದ್ದ ಡಾಲಿ ಧನಂಜಯ್ ನಟನೆಯ 'ರತ್ನನ್ ಪ್ರಪಂಚ' ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದ ರಮ್ಯಾ ಆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗ ಮಾತನಾಡಿದ್ದ ಡಾಲಿ ಧನಂಜಯ್, ''ರಮ್ಯಾ ಅವರು ಸಿನಿಮಾ ನೋಡಿ ಮೆಚ್ಚಿಕೊಳ್ಳುವುದು ಮಾತ್ರ ಸಾಕಾಗುವುದಿಲ್ಲ. ಅವರು ನಮ್ಮೊಟ್ಟಿಗೆ ಬಂದು ನಟಿಸಬೇಕು, ಸಿನಿಮಾ ರಂಗದಲ್ಲಿ ಮತ್ತೆ ಸಕ್ರಿಯರಾಗಬೇಕು'' ಎಂದಿದ್ದರು. ಅವರ ಹಾರೈಕೆಯಂತೆ ಈಗ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.