»   » ಶ್ರೀನಗರ ಕಿಟ್ಟಿ ಜೊತೆ ಮತ್ತೆ 'ರಮ್ಯಾ' ಚೈತ್ರ ಕಾಲ

ಶ್ರೀನಗರ ಕಿಟ್ಟಿ ಜೊತೆ ಮತ್ತೆ 'ರಮ್ಯಾ' ಚೈತ್ರ ಕಾಲ

Posted By:
Subscribe to Filmibeat Kannada

ಒಂದೇ ಒಂದು ಚಿತ್ರದಲ್ಲಿ ಈ ಜೋಡಿ ಅಭಿನಯಿಸುವ ಮೂಲಕ ಬೆಳ್ಳಿಪರದೆಯ ಯಶಸ್ವಿ ಜೋಡಿ ಅನ್ನಿಸಿಕೊಂಡಿತು. ಈಗ ಮತ್ತೆ ಇವರಿಬ್ಬರೂ ಒಂದಾಗುತ್ತಿದ್ದಾರೆ. ಇವರಿಬ್ಬರನ್ನೂ ಒಂದು ಮಾಡುತ್ತಿರುವವರು ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ.

ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಇಮ್ರಾನ್ ಸರ್ದಾರಿಯಾ ಅವರು ತಮ್ಮ ಚೊಚ್ಚಲ ಚಿತ್ರಕ್ಕೆ 'ಎಂದೆಂದಿಗೂ' ಎಂದು ಹೆಸರಿಟ್ಟಿದ್ದಾರೆ. ಈಗಾಗಲೆ ಅವರ ನಿರ್ದೇಶನದ ಚಿತ್ರ ಸೆಟ್ಟೇರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಯಶ್, ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ತಾರಾಗಣದ ಚಿತ್ರ ಡ್ರಾಪ್ ಆಯಿತು.


ಈಗವರು ಎಂದೆಂದಿಗೂ ಚಿತ್ರದ ಮೂಲಕ ನಿರ್ದೇಶಕರಾಗಿ ಬದಲಾಗುತ್ತಿದ್ದಾರೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಆರಂಭ. ಈ ಮುಂಚೆ ಅಂದುಕೊಂಡಿದ್ದ ಪ್ರಾಜೆಕ್ಟ್ ಗೂ ಇದಕ್ಕೂ ಸಂಬಂಧವಿಲ್ಲ. ಇದೊಂದು ಕಂಪ್ಲೀಟ್ ಡಿಫರೆಂಟ್ ಸ್ಟೋರಿ ಎನ್ನುತ್ತಾರೆ ಇಮ್ರಾನ್.

"ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅವರಿಗೆ ಈಗಾಗಲೆ ಕಥೆ ಹೇಳಿದ್ದೇನೆ. ಇಬ್ಬರೂ ಇಂಪ್ರೆಸ್ ಆಗಿದ್ದು ಅಭಿನಯಿಸಲು ಒಪ್ಪಿದ್ದಾರೆ" ಎಂದಿದ್ದಾರೆ ಇಮ್ರಾನ್ ಸರ್ದಾರಿಯಾ. ಸದ್ಯಕ್ಕೆ ಕಿಟ್ಟಿ ಹಾಗೂ ರಮ್ಯಾ ಬೇರೆಬೇರೆ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡೇ ಅವರನ್ನು ಸಂಪರ್ಕಿಸಿದ್ದೇನೆ ಎನ್ನುತ್ತಾರೆ ಇಮ್ರಾನ್. (ಏಜೆನ್ಸೀಸ್)

English summary
Diamond Star Srinagara Kitty and Lucky Star Ramya team up again in upcoming film titled as Endendigu. The film directed by choreographer Imran Sardhariya. This is his debut directional film. 
Please Wait while comments are loading...