»   » ರಮ್ಯಾ ಬಗ್ಗೆ ಹಬ್ಬಿದ ಪುಕಾರು ಒಂದು.. ತಾಯಿ ರಂಜಿತಾ ಹೇಳುವುದೇ ಮತ್ತೊಂದು.!

ರಮ್ಯಾ ಬಗ್ಗೆ ಹಬ್ಬಿದ ಪುಕಾರು ಒಂದು.. ತಾಯಿ ರಂಜಿತಾ ಹೇಳುವುದೇ ಮತ್ತೊಂದು.!

Posted By:
Subscribe to Filmibeat Kannada

ಚಿತ್ರರಂಗದಿಂದ ನಟಿ ರಮ್ಯಾ ದೂರವಾಗಿದ್ದರೂ, ಗಾಸಿಪ್ ಕಾಲಂಗಳಲ್ಲಿ ಮಾತ್ರ ರಮ್ಯಾ ಹೆಸರು ಮಿಸ್ ಆಗಲ್ಲ. ಅನಾರೋಗ್ಯದಿಂದ ನಟಿ ರಮ್ಯಾ ಆಸ್ಪತ್ರೆ ಸೇರಿದರೂ, ಆಕೆ ಬಗ್ಗೆ ಪುಕಾರು ಹಬ್ಬುವುದು ನಿಲ್ಲಲ್ಲ. ಇದಕ್ಕೆ ಸಾಕ್ಷಿ ಇತ್ತೀಚಿನ ಬೆಳವಣಿಗೆ.

ಕಳೆದ ತಿಂಗಳಷ್ಟೇ ಅನಾರೋಗ್ಯದ ಕಾರಣದಿಂದ ನಟಿ ರಮ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಮಾಜಿ ಸಂಸದೆ ರಮ್ಯಾ ಬಗ್ಗೆ ಹೊಸ ಗಾಸಿಪ್ ಕೇಳಿಬಂದಿತ್ತು. ಅದು ಕಾಂಗ್ರೆಸ್ ಯುವನಾಯಕಿ ರಮ್ಯಾ ಬಿಜೆಪಿ ಸೇರುವುದರ ಕುರಿತು..!

'ಎಸ್.ಎಂ.ಕೃಷ್ಣ ಹಾದಿಯಲ್ಲಿ ರಮ್ಯಾ' ಸಾಗುತ್ತಾರಂತೆ-ಕಂತೆ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಕೂಡ ಕಮಲ ಮುಡಿಯುತ್ತಾರಂತೆ ಎಂಬ ಅಂತೆ-ಕಂತೆ ಮಂಡ್ಯ ಜಿಲ್ಲೆಯಲ್ಲಿ ಕೇಳಿಬಂದಿತ್ತು.[ನಟಿ ರಮ್ಯಾ ಬಗ್ಗೆ ಗಾಳಿಯಲ್ಲಿ ತೇಲಿಬಂದು ಕಿವಿಗೆ ಬಿದ್ದ ಸುದ್ದಿ ಇದು.!]

ವಿರೋಧ-ಆತ್ಮಹತ್ಯೆ ಬೆದರಿಕೆ ಶುರು ಆಯ್ತಲ್ಲ.!

ರಮ್ಯಾ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂಬ ಊಹೆ ದಟ್ಟವಾದಾಗ ಮಂಡ್ಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಅಪ್ಪಿ-ತಪ್ಪಿ ರಮ್ಯಾ ಬಿಜೆಪಿಗೆ ಸೇರಿದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂತ ಮಂಡ್ಯದ ಬಿಜೆಪಿ ಕಾರ್ಯಕರ್ತರು ಬೆದರಿಕೆ ಹಾಕಿದ್ದರು.['ಎಲ್ಲಿದ್ದಾರೆ ರಮ್ಯಾ' ಎನ್ನುತ್ತಿದ್ದವರಿಗೆಲ್ಲ ಇಲ್ಲೊಂದು ಬ್ರೇಕಿಂಗ್ ನ್ಯೂಸ್]

ಇಷ್ಟೆಲ್ಲ ಆದರೂ ರಮ್ಯಾ ಮಾತನಾಡಿಲ್ಲ.!

ಮಂಡ್ಯದಲ್ಲಿ ಇಷ್ಟೆಲ್ಲ ಬೆಳವಣಿಗೆ ಆದರೂ ರಮ್ಯಾ ಮಾತ್ರ ಈವರೆಗೂ ತುಟಿ ಎರಡು ಮಾಡಿಲ್ಲ. ಸ್ಪಷ್ಟನೆ ಕೊಡುವ ಗೋಜಿಗೆ ಹೋಗಿಲ್ಲ. ಆದ್ರೆ, ರಮ್ಯಾ ಪರವಾಗಿ ತಾಯಿ ರಂಜಿತಾ ಮಾಧ್ಯಮಗಳ ಎದುರು ಕ್ಲಾರಿಟಿ ಕೊಟ್ಟಿದ್ದಾರೆ.[ನಟಿ ರಮ್ಯಾ ನಾಪತ್ತೆ.! ಇಡೀ ದೇಶ ಕೇಳುತ್ತಿದೆ ಕಾಂಗ್ರೆಸ್ ಯುವರಾಣಿ ಈಗೆಲ್ಲಿ.?]

ರಮ್ಯಾ ತಾಯಿ ರಂಜಿತಾ ಹೇಳುವುದೇನು.?

''ನನ್ನ ಮಗಳು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ'' ಅಂತ ರಮ್ಯಾ ತಾಯಿ ರಂಜಿತಾ ಸ್ಪಷ್ಟನೆ ನೀಡಿದ್ದಾರೆ.[ರಮ್ಯಾ ಕಾಂಗ್ರೆಸ್ ಬಿಡ್ತಾರಾ? ಅವರ ತಾಯಿ ಉತ್ತರ ಹೀಗಿದೆ]

ರಮ್ಯಾ ಯಾಕೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.?

''ಅನಾರೋಗ್ಯದ ಕಾರಣ ನನ್ನ ಮಗಳು ಪಕ್ಷದ ಚುನಾವಣಾ ಪ್ರಚಾರಕ್ಕೆ ಬರಲು ಸಾಧ್ಯವಿಲ್ಲ. ನಮಗೆ ಆಗದ ಕೆಲವರು ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ರಮ್ಯಾ ಸೇರಲಿದ್ದಾರೆ ಅಂತ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು. ಇದನ್ನ ಯಾರೂ ನಂಬಬೇಡಿ. ರಮ್ಯಾ ಗುಣಮುಖಳಾದ ಕೂಡಲೆ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾಳೆ'' ಅಂತ ರಮ್ಯಾ ತಾಯಿ ರಂಜಿತಾ ಹೇಳಿದ್ದಾರೆ.

ಇಷ್ಟು ಸಾಲದೇ.?

ಅಲ್ಲಿಗೆ, ರಮ್ಯಾ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿ ಬರೀ ಸುಳ್ಳಿನ ಕಂತೆ ಎಂಬುದು ರಮ್ಯಾ ತಾಯಿ ರಂಜಿತಾ ಮಾತುಗಳಿಂದ ಸ್ಪಷ್ಟ.

English summary
Kannada Actress, Congress Politician, EX MP Ramya's mother Ranjitha rubbished all the rumours about her daughter joining BJP Party.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada