»   » ಆರ್ ಚಂದ್ರು ಚಿತ್ರದಲ್ಲಿ ಆರಡಿ ಅಂದಗಾರ ರಾಣಾ ದಗ್ಗುಬಾಟಿ

ಆರ್ ಚಂದ್ರು ಚಿತ್ರದಲ್ಲಿ ಆರಡಿ ಅಂದಗಾರ ರಾಣಾ ದಗ್ಗುಬಾಟಿ

Posted By:
Subscribe to Filmibeat Kannada

ನಿರ್ದೇಶಕ ಆರ್.ಚಂದ್ರು 'ಚಾರ್ಮಿನಾರ್' ಕೃಪೆಯಿಂದ ಟಾಲಿವುಡ್ ಗೆ ಕಾಲಿಟ್ಟಿರುವ ವಿಷಯ ಒಂದು ವರ್ಷದಷ್ಟು ಹಳೆಯದ್ದು. ಇನ್ನೂ ಅದೇ 'ಚಾರ್ಮಿನಾರ್' ನ ಇಟ್ಟುಕೊಂಡು ಬಾಲಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗೆ ಚಂದ್ರು ನಿಂತಿರುವ ಬ್ರೇಕಿಂಗ್ ನ್ಯೂಸ್ ನ ಮೊನ್ನೆಯಷ್ಟೇ ನೀವು ಕೇಳಿರಬೇಕು.

ಈ ಎಲ್ಲಾ ಸುದ್ದಿಗಳಿಗಿಂತ ಮತ್ತೊಂದು ಇಂಟ್ರೆಸ್ಟಿಂಗ್ ಸುದ್ದಿಯನ್ನ ನಿಮಗಾಗಿ ನಾವು ತಂದಿದ್ದೀವಿ ನೋಡಿ. ನಿರ್ದೇಶಕ ಆರ್.ಚಂದ್ರು ಸದ್ದಿಲ್ಲದೇ ಟಾಲಿವುಡ್ ನ ಸ್ಮಾರ್ಟ್ ಹೀರೋ ರಾಣಾ ದಗ್ಗುಬಾಟಿಗೆ ಡೈರೆಕ್ಷನ್ ಮಾಡಿದ್ದಾರೆ!

Rana Daggubati

ಅಂದ ಮಾತ್ರಕ್ಕೆ ಆರ್.ಚಂದ್ರು ತೆಲುಗಿನಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿಲ್ಲ. ಈಗಾಗಲೇ ಆರ್.ಚಂದ್ರು ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಿದ್ದಾರೆ ಅಷ್ಟೆ.

ಕೆಲ ದಿನಗಳ ಹಿಂದೆಯಷ್ಟೇ, ಇದೇ ಆರ್.ಚಂದ್ರು ನಿರ್ದೇಶನದ 'ಚಾರ್ಮಿನಾರ್' ತೆಲುಗು ಅವತರಣಿಕೆ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟಿಸುತ್ತಾರೆ ಅಂತ ನಿಮ್ಮ ನೆಚ್ಚಿನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. [ಪ್ರಿನ್ಸ್ ಮಹೇಶ್ ಗೆ 'ಚಾರ್ಮಿನಾರ್' ಚಂದ್ರು ಡೈರೆಕ್ಟರ್]

Rana Daggubati2

ಆರ್.ಚಂದ್ರು ಹೇಳಿದಂತೆ ಅಂದು ಪ್ರಿನ್ಸ್ ಮಹೇಶ್ ಬಾಬು ಚಿತ್ರದಲ್ಲಿ ಅತಿಥಿ ಪಾತ್ರಕ್ಕೆ ನಟಿಸುವುದಕ್ಕೆ ಒಪ್ಪಿಕೊಂಡಿದ್ರು. ಆದ್ರೀಗ ಅನಿವಾರ್ಯ ಕಾರಣಗಳಿಂದ ಮಹೇಶ್ ಬಾಬು, 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದಿಂದ ಹಿಂದೆ ಸರಿದಿದ್ದಾರೆ.

ಮಹೇಶ್ ಬಾಬು ಕಾಲ್ ಶೀಟ್ ಗಾಗಿ ಇಷ್ಟು ದಿನ ಕಾದರೂ, ಅದು ಪ್ರಯೋಜನವಾಗದ ಕಾರಣ ಆರ್.ಚಂದ್ರು ಹೊಸ ಉಪಾಯ ಮಾಡಿದ್ದಾರೆ. ಮಹೇಶ್ ಬಾಬು ಬದಲಿಗೆ ರಾಣಾ ದಗ್ಗುಬಾಟಿಯನ್ನ ಚಿತ್ರಕ್ಕಾಗಿ ಕರೆತಂದಿದ್ದಾರೆ.

Rana Daggubati3

ಬರೀ ಕರೆತರುವುದು ಮಾತ್ರವಲ್ಲ, ಅದಾಗಲೇ ರಾಣಾ ದಗ್ಗುಬಾಟಿಗೆ ಆಕ್ಷನ್ ಕಟ್ ಹೇಳಿ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರಕ್ಕೆ ಕುಂಬಳಕಾಯಿ ಕೂಡ ಹೊಡೆದಿದ್ದಾರೆ.

ಟಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಲೀಡಿಂಗ್ ನಲ್ಲಿರುವ ಹ್ಯಾಂಡ್ಸಮ್ ಹಂಕ್ ರಾಣಾ ದಗ್ಗುಬಾಟಿಗೆ ನಿರ್ದೇಶನ ಮಾಡುವುದು ಸಾಮಾನ್ಯದ ಸಂಗತಿ ಏನಲ್ಲ.

ಮಹೇಶ್ ಬಾಬು ಅಲ್ಲದೇ ಇದ್ದರೂ, ಅದೇ ಸ್ಟಾರ್ ವಾಲ್ಯೂ ಹೊತ್ತಿರುವ ನಟ ರಾಣಾ ದಗ್ಗುಬಾಟಿಗೆ ಆರ್.ಚಂದ್ರು ಆಕ್ಷನ್ ಕಟ್ ಹೇಳಿರುವುದು ಅವರ ಹಿರಿಮೆ ಮತ್ತೊಂದು ಗರಿ. (ಫಿಲ್ಮಿಬೀಟ್ ಕನ್ನಡ)

English summary
Rana Daggubati has replaced Prince Mahesh Babu in R.Chandru's Krishnamma Kalipindi iddarini, which is the remake of Kannada's Block buster Charminar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada