Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಕ್ಷಿತ್ ಶೆಟ್ಟಿ ಸಿನಿಮಾ ವೀಕ್ಷಿಸಿ ಶಭಾಸ್ ಎಂದ ರಾಣಾ ದಗ್ಗುಬಾಟಿ
ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೆರೆ-ಹೊರೆಯ ಭಾಷೆಯ ನಟ-ನಟಿಯರ ನಡುವೆ ಹೆಚ್ಚು ಆತ್ಮೀಯತೆ ಬೆಳೆಯುತ್ತಿದೆ. ತಮ್ಮ-ತಮ್ಮ ಸಿನಿಮಾಗಳ ಕಾರಣಕ್ಕಾದರೂ ಪರಸ್ಪರರ ಮೇಲೆ ನಟ-ನಟಿಯರು ಅವಲಂಬಿತರಾಗುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಜೂನ್ ತಿಂಗಳಲ್ಲಿ ತೆರೆಗೆ ಬರಲಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ಸಿನಿಮಾವನ್ನು ಗೆಲ್ಲಿಸಿಯೇ ತೀರಬೇಕೆಂಬ ಹಠವನ್ನು ರಕ್ಷಿತ್ ಶೆಟ್ಟಿ ತೊಟ್ಟಂತಿದ್ದು, ಸಿನಿಮಾದ ಪ್ರಚಾರವನ್ನು ಈಗಾಗಲೇ ಆರಂಭಿಸಿದ್ದಾರೆ.
'777 ಚಾರ್ಲಿ' ಸಿನಿಮಾವನ್ನು ತೆಲುಗಿನಲ್ಲಿ ಜನಪ್ರಿಯ ನಟ ರಾಣಾ ದಗ್ಗುಬಾಟಿ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಸಹ '777 ಚಾರ್ಲಿ' ಸಿನಿಮಾವನ್ನು ವೀಕ್ಷಿಸಿದ್ದು, ಖುಷಿಯಿಂದ ಸಿನಿಮಾದ ತೆಲುಗು ಆವೃತ್ತಿಯನ್ನು ತೆಲುಗು ರಾಜ್ಯಗಳಲ್ಲಿ ಪ್ರೆಸೆಂಟ್ ಮಾಡಲಿದ್ದಾರೆ.
ತಾವು '777 ಚಾರ್ಲಿ' ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿರುವ ಬಗ್ಗೆ ಟ್ವೀಟ್ ಮಾಡಿರುವ ನಟ ರಾಣಾ ದಗ್ಗುಬಾಟಿ, ಸಿನಿಮಾವನ್ನು ವೀಕ್ಷಿಸಿದ್ದು ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಎಂದಿದ್ದಾರೆ. '777 ಚಾರ್ಲಿ' ಸಿನಿಮಾವನ್ನು ವೀಕ್ಷಿಸುವ ಗೌರವ ನನಗೆ ದೊರಕಿತು. ಎಂಥಹಾ ಅದ್ಭುತವಾದ ಸಿನಿಮಾ ಇದು. ಅದ್ಭುತವಾದ, ಭಿನ್ನವಾದ, ಆಹ್ಲಾದಕವಾರ ಮಾದರಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲಾಗಿದೆ'' ಎಂದು ಚುಟುಕು ವಿಮರ್ಶೆಯನ್ನು ರಾಣಾ ಮಾಡಿದ್ದಾರೆ.
ರಕ್ಷಿತ್ ಶೆಟ್ಟಿ ಸಹ ರಾಣಾ ದಗ್ಗುಬಾಟಿ ಬಗ್ಗೆ ಟ್ವೀಟ್ ಮಾಡಿದ್ದು, ''ಸ್ಪಷ್ಟ ಉದ್ದೇಶವೊಂದಿಂದಾಗಿ ನಾವು ಒಟ್ಟಾಗಿದ್ದೇವೆ. ನಮ್ಮ ಸಿನಿಮಾದ ವಿತರಣೆಗೆ ರಾಣಾ ದಗ್ಗುಬಾಟಿ ಹಾಗೂ ಸುರೇಶ್ ಪ್ರೊಡಕ್ಷನ್ ಜತೊ ಕೈಜೋಡಿಸುತ್ತಿರುವುದಕ್ಕೆ ಬಹಳ ಸಂತೋಶವಾಗಿದೆ. ಇವರುಗಳು '777 ಚಾರ್ಲಿ' ಸಿನಿಮಾದ ತೆಲುಗು ಆವೃತ್ತಿಯನ್ನು ವಿತರಣೆ ಮಾಡಲಿದ್ದಾರೆ. ನಾವು ಅಸಾಧಾರಣ ಪ್ರಯಾಣಕ್ಕೆ ಹೊರಟಿದ್ದೇವೆ'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.
'777 ಚಾರ್ಲಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ನಾಯಿಯ ಸುತ್ತ ಕತೆ ಗಿರಕಿ ಹೊಡೆಯುತ್ತದೆ. ರಕ್ಷಿತ್ ಶೆಟ್ಟಿ ಸಿನಿಮಾ ವೀಕ್ಷಿಸಿ ಶಭಾಸ್ ಎಂದ ರಾಣಾ ದಗ್ಗುಬಾಟಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೆರೆ-ಹೊರೆಯ ಭಾಷೆಯ ನಟ-ನಟಿಯರ ನಡುವೆ ಹೆಚ್ಚು ಆತ್ಮೀಯತೆ ಬೆಳೆಯುತ್ತಿದೆ. ತಮ್ಮ-ತಮ್ಮ ಸಿನಿಮಾಗಳ ಕಾರಣಕ್ಕಾದರೂ ಪರಸ್ಪರರ ಮೇಲೆ ನಟ-ನಟಿಯರು ಅವಲಂಬಿತರಾಗುತ್ತಿದ್ದಾರೆ.
'777 ಚಾರ್ಲಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಸಿನಿಮಾದಲ್ಲಿ ನಾಯಿಯ ಸುತ್ತ ಕತೆ ಗಿರಕಿ ಹೊಡೆಯುತ್ತದೆ. '777 ಚಾರ್ಲಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಸಂಗೀತ ಶೃಂಗೇರಿ, ದಾನಿಶ್ ಸೇಠ್, ಬಾಬಿ ಸಿಂಹ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಜೂನ್ 10 ರಂದು ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ.