»   » ಕಡೆಗೂ ಲಹರಿ ವೇಲು ಜತೆ ರಾಜಿಯಾದ 'ರಣವಿಕ್ರಮ'

ಕಡೆಗೂ ಲಹರಿ ವೇಲು ಜತೆ ರಾಜಿಯಾದ 'ರಣವಿಕ್ರಮ'

Posted By:
Subscribe to Filmibeat Kannada

ಇದೀಗತಾನೆ ಬಂದ ಸುದ್ದಿ ಇದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅದ್ದೂರಿ 'ರಣವಿಕ್ರಮ' ಚಿತ್ರ ಹಾಗೂ ಲಹರಿ ವೇಲು ನಡುವಿನ ವಿವಾದ ಸುಖಾಂತ್ಯ ಕಂಡಿದೆ. ರಣವಿಕ್ರಮ ಚಿತ್ರ ಕಾಪಿರೈಟ್ ಸಮಸ್ಯೆಗೆ ಸಿಲುಕಿದ್ದು ಗೊತ್ತೇ ಇದೆ. ಈ ಸಂಬಂಧ ಲಹರಿ ವೇಲು ಅವರು ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ 'ರಣವಿಕ್ರಮ' ಚಿತ್ರ ಬಿಡುಗಡೆಗೆ ದೊಡ್ಡ ತೊಡಕುಂಟಾಗಿತ್ತು. ಚಿತ್ರದ ನಿರ್ಮಾಪಕರಾದ ಜಯಣ್ಣ ಮತ್ತು ಭೋಗೇಂದ್ರ ಅವರು ಕಾನೂನು ಸಮರವನ್ನು ಎದುರಿಸಬೇಕಾಗಿತ್ತು. ಆದರೆ ಈ ಬೆಟ್ಟದಂತಹ ಸಮಸ್ಯೆ ಇಂದು (ಮಾ.31) ಸಂಜೆ ಮಂಜಿನಂತೆ ಕರಗಿಹೋಗಿದೆ. ['ರಣವಿಕ್ರಮ'ನ ವಿರುದ್ಧ ಕೋರ್ಟ್ ಬಾಗಿಲು ತಟ್ಟಿದ ಲಹರಿ ವೇಲು]


'ರಣವಿಕ್ರಮ' ಚಿತ್ರದ ನಿರ್ಮಾಪರಾದ ಜಯಣ್ಣ ಮತ್ತು ಭೋಗೇಂದ್ರ ಅವರು ಇಂದು ವೇಲು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕಡೆಗೂ ಇಬ್ಬರ ನಡುವಿನ ವಿವಾದ ಬಗೆಹರಿದಿದ್ದು ಸಂಧಾನ ಸಫಲವಾಗಿದೆ. ಪವನ್ ಒಡೆಯರ್ ನಿರ್ದೇಶನದ 'ರಣವಿಕ್ರಮ' ಚಿತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.


Rana Vikrama controvesy ends on a happy note

ರಣವಿಕ್ರಮ' ಚಿತ್ರದ ಎರಡು ಹಾಡುಗಳಲ್ಲಿ ಕಾಪಿರೈಟ್ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಲಹರಿ ವೇಲು ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದರು. ಆದರೆ ಈಗ ಸಂಧಾನದ ಮೂಲಕ ವಿವಾದ ಸುಖಾಂತ್ಯ ಕಂಡಿದೆ.


ಈ ಕುರಿತು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ ಲಹರಿ ವೇಲು, ನಮ್ಮ ಮತ್ತು 'ರಣವಿಕ್ರಮ' ಚಿತ್ರದ ಜೊತೆಗಿನ ವಿವಾದ ಬಗೆಹರಿದಿದೆ. ಇಂದು ಚಿತ್ರದ ನಿರ್ಮಾಪಕರು ತಮ್ಮನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿದರು. ರು.20 ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಿದ್ದೇವೆ. ಈಗ ಕೋರ್ಟ್ ಗೆ ಹೋದರೆ ಚಿತ್ರ ಬಿಡುಗಡೆಗೆ ತೊಂದರೆಯಾಗುತ್ತದೆ ಎಂದು ವಿನಂತಿಸಿಕೊಂಡರು. ಹಾಗಾಗಿ ತಾವು ರಾಜಿಯಾಗಿದ್ದೇವೆ ಎಂದು ತಿಳಿಸಿದರು. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗ]


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ರಣರಂಗ' ಚಿತ್ರದಲ್ಲಿನ ''ಜಗವೇ ಒಂದು ರಣರಂಗ..'' ಹಾಡಿನ ಸಾಲುಗಳನ್ನ 'ರಣವಿಕ್ರಮ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೇ, ತೆಲುಗಿನ ಹಾಡೊಂದನ್ನ ನಕಲು ಮಾಡಿರುವ ಆರೋಪವನ್ನ 'ರಣವಿಕ್ರಮ' ಎದುರಿಸುತ್ತಿದೆ.


ಎರಡೂ ಹಾಡುಗಳ ಕಾಪಿರೈಟ್ಸ್ ಲಹರಿ ಆಡಿಯೋ ಸಂಸ್ಥೆ ಬಳಿಯಿದೆ. ಆದ್ರೆ, ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ಸಾಲುಗಳನ್ನ ಬಳಿಸಿಕೊಂಡಿರುವುದರಿಂದ ಲಹರಿ ವೇಲು ಅಸಮಾಧಾನಗೊಂಡು ಕೋರ್ಟ್ ಮೆಟ್ಟಿಲೇರಲು ಚಿಂತಿಸಿದ್ದರು. (ಫಿಲ್ಮಿಬೀಟ್ ಕನ್ನಡ)

English summary
The controversy between Kannada movie 'Rana Vikrama' and Lahari Velu finally ends on happy note. Before that, Lahari Velu of Lahari Audio company decides to take 'Ranavikrama' Plagiarism to the court. Earlier, Lahari Velu had sent a notice to music director V.Harikrishna and director Pawan Wadeyar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada