ಬಾಕ್ಸ್ ಆಫೀಸಲ್ಲಿ ಹೊಸ ವಿಕ್ರಮ ಮೆರೆದ ರಣವಿಕ್ರಮ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ರಣವಿಕ್ರಮ ಚಿತ್ರ ಬಾಕ್ಸ್ ಆಫೀಸಲ್ಲಿ ಹೊಸ ವಿಕ್ರಮ ಮೆರೆದಿದೆ. ಬಿಡುಗಡೆಯಾದ (ಏ.10) ಮೂರೇ ದಿನಕ್ಕೆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದೆ. ಓಪನಿಂಗ್ ದಿನವೇ ರು.2.5 ಕೋಟಿ ಕಲೆಕ್ಷನ್ ಮಾಡಿದೆ.
ಶನಿವಾರದ ಗಲ್ಲಾಪೆಟ್ಟಿಗೆ ಕಲೆಕ್ಷನ್ ಸಹ ಆಶಾದಾಯವಾಗಿದ್ದು ರು.1.5 ಕೋಟಿ ವಸೂಲಿ ಮಾಡಿದೆ. ಆದರೆ ಭಾನುವಾರದ (ಏ.12) ಹೊತ್ತಿಗೆ ಕಲೆಕ್ಷನ್ ಡಬಲ್ ಆಗಿದೆ. ಮೂಲಗಳ ಪ್ರಕಾರ, ಭಾನುವಾರದ ಗಳಿಕೆ ರು.3.5 ಕೋಟಿ. [ರಣವಿಕ್ರಮ ಚಿತ್ರ ವಿಮರ್ಶೆ]

ಇನ್ನೊಂದು ವಿಶೇಷ ಎಂದರೆ ದೆಹಲಿಯಲ್ಲೂ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿರುವುದು. ಹೊರರಾಜ್ಯಗಳಲ್ಲೂ 'ರಣವಿಕ್ರಮ' ಸದ್ದು ಮಾಡುತ್ತಿದೆ. ಮುಂಬೈ, ದೆಹಲಿ, ಚೆನ್ನೈ ಹಾಗೂ ಹೈದರಾಬಾದ್ ಕನ್ನಡಿಗರಿಂದಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಈ ಆಕ್ಷನ್ ಪ್ರಧಾನ ಚಿತ್ರ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ಭರವಸೆ ಮೂಡಿಸಿದೆ. ಮಲ್ಟಿಫ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಏಕಕಾಲಕ್ಕೆ ಉತ್ತಮ ಫಲಿತಾಂಶ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)


Click it and Unblock the Notifications











