»   » ರಣವಿಕ್ರಮ, ವಜ್ರಕಾಯ ಭರ್ಜರಿ ಸ್ಯಾಟಲೈಟ್ ರೈಟ್ಸ್

ರಣವಿಕ್ರಮ, ವಜ್ರಕಾಯ ಭರ್ಜರಿ ಸ್ಯಾಟಲೈಟ್ ರೈಟ್ಸ್

By: ಜೀವನರಸಿಕ
Subscribe to Filmibeat Kannada

ಸುದೀಪ್ ಅಭಿನಯದ 'ರನ್ನ' ಹಾಗೂ ಪುನೀತ್ ರಾಜ್ ಕುಮಾರ್ ಅವರ 'ರಣವಿಕ್ರಮ' ಚಿತ್ರದ ಸ್ಯಾಟಲೈಟ್ಸ್ ಹಕ್ಕುಗಳನ್ನ ಕೇಳೋರೇ ಇಲ್ಲ ಅಂತ ಗಾಂಧಿನಗರದಲ್ಲಿ ಇತ್ತೀಚೆಗೆ ಗುಲ್ಲೆದ್ದಿತ್ತು. ಯಾಕಂದ್ರೆ ರಣವಿಕ್ರಮ ರಿಲೀಸ್ ಗೆ 10 ದಿನ ಬಾಕಿ ಇರುವಾಗ ಕೂಡ ಚಿತ್ರದ ಸ್ಯಾಟಲೈಟ್ಸ್ ರೈಟ್ಸ್ ಕೊಂಡುಕೊಳ್ಳೋಕೆ ಚಾನೆಲ್ ಗಳು ಮುಂದೆ ಬಂದಿರಲಿಲ್ಲ.

ಪವರ್ ಸ್ಟಾರ್ ಪುನೀತ್, ಕಿಚ್ಚ ಸುದೀಪ್ ಸಿನಿಮಾಗಳನ್ನೇ ಕೇಳೋರಿಲ್ವ ಅನ್ಕೋಬೇಡಿ. ನಿರ್ಮಾಪಕರು ಡಿಮಾಂಡ್ ಮಾಡೋ ಏಳೆಂಟು ಕೋಟಿ ಕೊಟ್ಟು ಸಿನಿಮಾ ಕೊಂಡುಕೊಳ್ಳೋಕೆ ಸಿನಿಮಾವನ್ನ ಸತತವಾಗಿ ಕೊಂಡುಕೊಳ್ತಿರೋ ಉದಯವಾಹಿನಿಯೇ ರೆಡಿ ಇರ್ಲಿಲ್ಲ. ['ರನ್ನ' ಸ್ಯಾಟೆಲೈಟ್ ರೈಟ್ಸ್ ಅಬ್ಬಬ್ಬಾ ಅಷ್ಟೊಂದಾ?]


rana-vikrama-vajrakaya-satellite-rights-sold

ಇತ್ತೀಚೆಗೆ ಸುದೀಪ್ ಅಭಿನಯದ 'ರನ್ನ' ಚಿತ್ರದ ಸ್ಯಾಟಲೈಟ್ ರೈಟ್ಸ್ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಮೂಲಗಳ ಪ್ರಕಾರ 'ರನ್ನ'ನ ಸ್ಯಾಟೆಲೈಟ್ ರೈಟ್ಸ್ ಗಾಗಿ ಕೋಟ್ ಮಾಡಿರುವ ಮೊತ್ತ ಬರೋಬ್ಬರಿ ರು.5 ಕೋಟಿ. ಕೊಂಡುಕೊಳ್ಳಲು ಖಾಸಗಿ ಚಾನಲ್ ನವರೇನೋ ರೆಡಿ ಇದ್ದಾರೆ, ಆದ್ರೆ ನಿರ್ಮಾಪಕರು ಮಾತ್ರ ಇನ್ನೂ ಮನಸ್ಸು ಮಾಡಿಲ್ಲ.


ಇದೀಗ ಪವರ್ ಸ್ಟಾರ್ ಮತ್ತು ಸೆಂಚುರಿಸ್ಟಾರ್ ಸಿನಿಮಾಗಳು ಮಾತ್ರ ಭರ್ಜರಿ ರೇಟ್ ಗೆ ಸೇಲಾಗಿವೆ. ರಣವಿಕ್ರಮ ಮತ್ತು ಮತ್ತು ವಜ್ರಕಾಯ ಸಿನಿಮಾಗಳನ್ನ ಒಟ್ಟಿಗೇ ಕೊಂಡುಕೊಂಡಿರೋ ಉದಯ ವಾಹಿನಿ ಸ್ಟಾರ್ ಸಿನಿಮಾಗಳಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.


rana-vikrama-vajrakaya-satellite-rights-sold

ನಂಬಲರ್ಹ ಮೂಲಗಳ ಪ್ರಕಾರ ರಣವಿಕ್ರಮ ಚಿತ್ರದ ಸ್ಯಾಟಲೈಟ್ ಹಕ್ಕುಗಳು ರು.5 ಕೋಟಿಗೆ ಹಾಗೂ ವಜ್ರಕಾಯ ಚಿತ್ರದ ಹಕ್ಕುಗಳು ರು.3 ಕೋಟಿಗೆ ಮಾರಾಟವಾಗಿಯಂತೆ. ಅಲ್ಲಿಗೆ ಉದಯವಾಯಿತು ನಮ್ಮ ಸ್ಯಾಂಡಲ್ ವುಡ್ ಚೆಲುವ ನಾಡು.

English summary
Power Star Puneeth Rajkumar's 'Rana Vikrama' and Hat Trick Hero Shivarajkumar's 'Vajrakaya' satellite rights are sold for fancy price. According to sources, the satellite rights were brought for a record price of, combinedly Rs 8 crores (5+3) by Udaya TV.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada