»   » ಪುನೀತ್ 'ರಣ ವಿಕ್ರಮ'ಕ್ಕೆ ಕೊನೆಗೂ ಗ್ರೀನ್ ಸಿಗ್ನಲ್

ಪುನೀತ್ 'ರಣ ವಿಕ್ರಮ'ಕ್ಕೆ ಕೊನೆಗೂ ಗ್ರೀನ್ ಸಿಗ್ನಲ್

Posted By:
Subscribe to Filmibeat Kannada

ಯುನೆಸ್ಕೋ ಪಾರಂಪರಿಕ ತಾಣ ಹಂಪೆಯಲ್ಲಿ ಪುನೀತ್ ರಾಜಕುಮಾರ್ ಅಭಿನಯದ 'ರಣ ವಿಕ್ರಮ' ಶೂಟಿಂಗ್ ಗೆ ಇದ್ದ ತಡೆ ಈಗ ತೆರವಾಗಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರ ಹಾಕಿರುವ ಎಲ್ಲಾ ಷರತ್ತಿಗೆ ತಲೆಯಾಡಿಸಿರುವ ಚಿತ್ರತಂಡಕ್ಕೆ ಪ್ರಾಧಿಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರ ಚಿತ್ರತಂಡ 1 ಲಕ್ಷ ರೂಪಾಯಿ ಮುಂಗಡ ಹಣ ಪಾವತಿ ಮಾಡಿದೆ. ನದಿ ಹಾಗೂ ಪಾರಂಪರಿಕ ತಾಣದ ಬಳಿ ಸೆಟ್ ನಿರ್ಮಿಸುವುದು ಹಾಗೂ ಶಿಲ್ಪಕಲೆಗಳಿಗೆ ಹಾನಿಯಾಗದಂತೆ ಚಿತ್ರೀಕರಣ ನಡೆಸುವಂತೆ ಷರತ್ತು ವಿಧಿಸಲಾಗಿದೆ ಎಂದು ಹಂಪಿ ಅಭಿವೃದ್ಧಿ ಪ್ರಾಧಿಕಾರ(Hampi World Heritage Area Management Authority (HWHAMA) )ದ ಆಯುಕ್ತ ಗೋಪಾಲ್ ಹೇಳಿದ್ದಾರೆ.

ಹಂಪಿಯ ತಳವಾರಘಟ್ಟ ಸೇತುವೆ ಬಳಿ ಪುನೀತ್ ಹಾಗೂ ತೆಲುಗಿನ ಅಂಜಲಿ ಅಭಿನಯದ ರಣವಿಕ್ರಮ ಚಿತ್ರದ ಚಿತ್ರೀಕರಣದ ನಡೆಯುತ್ತಿದೆ. ಬೆಟ್ಟದ ವೈಭವದ ಮಧ್ಯೆ ಸಿನಿಮಾ ಶೂಟಿಂಗ್​ ನಡೆಯುತ್ತಿದೆ. ಈ ಮೊದಲು ಚಿತ್ರೀಕರಣಕ್ಕೆ ಅನುಮತಿ ಪಡೆಯದ ಕಾರಣ ಹಂಪಿ ಅಭಿವೃದ್ಧಿ ಪ್ರಾಧಿಕಾರ ಚಿತ್ರ ತಂಡಕ್ಕೆ ನೋಟಿಸ್ ನೀಡಿತ್ತು. ಆದರೆ, ನೋಟಿಸ್ ಗೆ ಉತ್ತರಿಸದೆ ಶೂಟಿಂಗ್ ಮುಂದುವರೆಸಿದ್ದ ಚಿತ್ರತಂಡಕ್ಕೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದರು. ಕೊನೆಗೆ ದಂಡ ಕಟ್ಟಿದ ಮೇಲೆ 'ರಣವಿಕ್ರಮ' ಸಿನಿಮಾ ಚಿತ್ರೀಕರಣಕ್ಕೆ ಗ್ರೀನ್​ ಸಿಗ್ನಲ್​ ಸಿಕ್ಕಿದಂತಾಗಿದೆ.

ಹಂಪಿಯಲ್ಲಿ ಫ್ಲಾಶ್ ಬ್ಯಾಕ್ ಸ್ಟೋರಿ

2012 ರ ಏಪ್ರಿಲ್ ತಿಂಗಳಿನಲ್ಲಿ ಇದೇ ಸ್ಪಾಟ್ ನಲ್ಲಿ ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ 'ರೌಡಿ ರಾಥೋರ್' ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ವಿಶ್ವ ಪಾರಂಪರಿಕಾ ತಾಣಗಳಲ್ಲಿ ಶೂಟಿಂಗ್ ಮಾಡಲು ಅನುಮತಿ ಇದ್ದರೂ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ. ಆದರೆ, ಹಿಂದಿ ಚಿತ್ರತಂಡ ನಿಯಮವನ್ನು ಗಾಳಿಗೆ ತೂರಿತ್ತು.

ರಣವಿಕ್ರಮನಿಗೂ ಅದೇ ಟ್ರೀಟ್ ಮೆಂಟ್

ಈಗ ರಣವಿಕ್ರಮ ತಂಡ ಕೂಡಾ ಇದೇ ಮಿಸ್ಟೇಕ್ ಮಾಡಿದ್ದರಿಂದ ಪ್ರಾಧಿಕಾರದಿಂದ ಟ್ರೀಟ್ ಮೆಂಟ್ ಸಿಕ್ಕಿದೆ. ಜೂ.17ಕ್ಕೆ ಹಂಪಿಗೆ ಬಂದಿಳಿದಿರುವ ಪುನೀತ್ ಅವರು ಇನ್ನೂ 10 ದಿನವಾದರೂ ಇಲ್ಲಿನ ಬಿಸಿಲಿನ ರುಚಿ ಕಾಣಬೇಕಾಗುತ್ತದೆ. (ಈ ಭಾಗದಲ್ಲಿ ತಾಪಮಾನ ಸುಮಾರು 34-36 ಡಿಗ್ರಿ ಸೆಲ್ಸಿಯಸ್ ನಷ್ಟಿದೆ)

ಸಂರಕ್ಷಿತ ತಾಣಗಳ ಬಳಿ ಕ್ರೇನ್ ಬಳಸುವಂತಿಲ್ಲ

ಸಂರಕ್ಷಿತ ತಾಣಗಳ ಬಳಿ ಕ್ರೇನ್ ಬಳಸುವಂತಿಲ್ಲ, ಚಿತ್ರತಂಡದ ಸಿಬ್ಬಂದಿ ಮೇಲೆ ಹತ್ತುವಂತಿಲ್ಲ, ಹೊಸ ಸೆಟ್ ಹಾಕುವಂತಿಲ್ಲ ಮುಂತಾದ ನಿಯಮಗಳಿವೆ. ಆದರೆ, ರಣ ವಿಕ್ರಮಕ್ಕಾಗಿ 20 ಕೃತಕ ಗುಡಿಸಲುಗಳನ್ನು ನಿರ್ಮಿಸಲಾಗಿತ್ತು. ಹೀಗಾಗಿ ನೋಟಿಸ್ ಜಾರಿ ಮಾಡಲಾಗಿತ್ತು, ಆದರೆ, ಎರಡು ಮೂರು ತಿಂಗಳಿನಿಂದ ಸೆಟ್ ವಿನ್ಯಾಸಗೊಳಿಸಿದ್ದರಿಂದ ಈ ಜಾಗದಲ್ಲಿ ಸೆಟ್ ಹಾಕಿ, ಕಂಬಗಳನ್ನು ನೆಡಲಾಗಿತ್ತು. ಇದನ್ನು ತೆರವುಗೊಳಿಸಲು ಚಿತ್ರ ತಂಡ ನಿರಾಕರಿಸಿತ್ತು.

ನಿರ್ದೇಶಕ ಪವನ್ ಒಡೆಯರ್ ಪ್ರತಿಕ್ರಿಯೆ

ನಾವು ನಿಯಮದ ಪ್ರಕಾರ ಅನುಮತಿ ಪಡೆದುಕೊಂಡಿದ್ದೇವೆ. ಹಂಪೆ ತಾಣಗಳಿಗೆ ಹಾನಿ ಮಾಡುವುದು ನಮ್ಮ ಉದ್ದೇಶವಲ್ಲ ಎಂದಿದ್ದಾರೆ. ಏನಾದರೂ ಆಗಲಿ ಸ್ಥಳೀಯ ಪರಿಸರವಾದಿಗಳು ಮಾತ್ರ ರಣವಿಕ್ರಮ ಚಿತ್ರ ತಂಡದ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಪಾರಂಪಾರಿಕ ತಾಣಗಳಲ್ಲಿ ಶೂಟಿಂಗ್ ಗೆ ತಮಿಳುನಾಡಿನಲ್ಲಿ ನಿರ್ಬಂಧವಿದೆ, ಅಲ್ಲಿನ ನಿಯಮ ಇಲ್ಲೂ ಜಾರಿಯಾದರೆ ಒಳ್ಳೆಯದು ಎಂಬ ಮಾತುಗಳು ದೂರದಲ್ಲೆಲ್ಲೋ ಕೇಳಿ ಬಂದಿದ್ದು ಸುಳ್ಳಲ್ಲ

English summary
Puneeth Rajkumar Starrer Ranavikrama Kannada movie director Pavan Wodeyar said all necessary permissions have been taken after paying the prescribed fee and deposit.We have not flouted any norms. We have taken all permissions from respective authorities. HWHAMA said have given green signal to shooting in the heritage UNESCO-protected site
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada