For Quick Alerts
  ALLOW NOTIFICATIONS  
  For Daily Alerts

  ಆದಾ ಶರ್ಮಾ ಕನ್ನಡಕ್ಕೆ ಆಗಮಿಸಿ 4 ವರ್ಷ ಆಯ್ತು

  |

  ಕನ್ನಡಕ್ಕೆ ಆಗಾಗ ಪರಭಾಷೆಯ ನಟಿಯರು ಬರುತ್ತಾರೆ. ಅದೇ ರೀತಿ ನಟಿ ಆದಾ ಶರ್ಮಾ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದ್ದರು. ಇಂದು ಅವರ ಆಗಮನವಾಗಿ 4 ವರ್ಷ ಕಳೆದಿವೆ.

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಸಿನಿಮಾ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ 4 ವರ್ಷವಾಗಿದೆ. ಈ ಖುಷಿಯವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಸಿನಿಮಾ ಹೊಂದಿದ್ದ ಅನೇಕ ವಿಶೇಷತೆಗಳಲ್ಲಿ ನಾಯಕಿಯರು ಕೂಡ ಒಂದಾಗಿದ್ದರು.

  'ರಣವಿಕ್ರಮ' ನೋಡಿ ವಿಮರ್ಶಕರು ಏನೆಂದರು?

  ಕಾಲಿವುಡ್ ಹಾಗೂ ಟಾಲಿವುಡ್ ನಟಿ ಅಂಜಲಿಗೆ ಇದು ಎರಡನೇ ಕನ್ನಡ ಸಿನಿಮಾವಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಅವರು ಕನ್ನಡದಲ್ಲಿ ಡಬ್ ಮಾಡಿದ್ದರು. ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಆದಾ ಶರ್ಮಾ ಈ ಚಿತ್ರದ ಮೂಲಕ ಕನ್ನಡ ಸಿನಿಮಾ ಶುರು ಮಾಡಿದ್ದರು.

  ಇನ್ನು ಪವನ್ ಒಡೆಯರ್ ಹಾಗೂ ಪುನೀತ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಂದಾಗಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಈ ಚಿತ್ರದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  ಚಿತ್ರ ವಿಮರ್ಶೆ: 'ರಣವಿಕ್ರಮ' ಪವನ್ ಇನ್ನೊಂದು ಗೂಗ್ಲಿ

  ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಆಕ್ಷನ್ ಹಾಗೂ ಲವ್ ಸ್ಟೋರಿ ಅಭಿಮಾನಿಗಳ ಮನ ಗೆದ್ದಿತ್ತು. ದೊಡ್ಡ ಒಪನಿಂಗ್ ಪಡೆದುಕೊಂಡ ಕನ್ನಡದ ಬೆಸ್ಟ್ ಚಿತ್ರಗಳಲ್ಲಿ ಇದು ಒಂದು.

  English summary
  Power Star Puneeth Rajkumar's 'Ranavikrama' movie completes 10 years. The movie is directing by Pawan Wadeyar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X