For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ಜೇಮ್ಸ್' ಸಿನಿಮಾಗೆ ಎಂಟ್ರಿ ಕೊಟ್ಟ ಕನ್ನಡದ ಖ್ಯಾತ ನಟ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಯುವರತ್ನ ಸಿನಿಮಾ ಯಶಸ್ವಿಯಾಗಿ ಮುಗಿಸಿರುವ ಅಪ್ಪು ಇದೀಗ 'ಜೇಮ್ಸ್'ಆಗಿ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಲಾಕ್ ಡೌನ್ ಬಳಿಕ ಜೇಮ್ಸ್ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಈಗಾಗಲೇ ಬಹುತೇಕ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

  ಮೋಡಿ ಮಾಡೋಕೆ ರೆಡಿಯಾದ ಅಪ್ಪು, ರಂಘಾಯಣ ರಘು | Filmibeat Kannada

  ಜೇಮ್ಸ್ ಸಿನಿಮಾವನ್ನು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಸೆರೆಹಿಡಿಯಲಾಗಿದೆ. ಇದೀಗ ಸಿನಿಮಾದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಜೇಮ್ಸ್ ಸಿನಿಮಾಗೆ ಕನ್ನಡ ಖ್ಯಾತ ಕಾಮಿಡಿ ನಟ ಎಂಟ್ರಿ ಕೊಟ್ಟಿದ್ದಾರೆ. ಹೌದು, ಪವರ್ ಸ್ಟಾರ್ ಸಿನಿಮಾಗೆ ನಟ ರಂಗಾಯಣ ರಘು ಪದಾರ್ಪಣೆ ಮಾಡಿದ್ದಾರೆ.

  ಏಪ್ರಿಲ್‌ನಲ್ಲಿ ಯುವರತ್ನ, ಅದೇ ತಿಂಗಳು ಮತ್ತೊಂದು ಬಿಗ್ ಸಿನಿಮಾ ತೆರೆಗೆ?

  ರಂಗಾಯಣ ರಘು ಮತ್ತು ಪುನೀತ್ ರಾಜ್ ಕುಮಾರ್ ಈ ಹಿಂದೆ ಅಣ್ಣಾ ಬಾಂಡ್, ಜಾಕಿ, ಪರಮಾತ್ಮ ಮತ್ತು ರಾಜಕುಮಾರ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಜೇಮ್ಸ್ ಮೂಲಕ ಮತ್ತೆ ಅಭಿಮಾನಿಗಳನ್ನು ಮೋಡಿ ಮಾಡಲು ಬರ್ತಿದ್ದಾರೆ.

  ಈ ಸಿನಿಮಾದಲ್ಲಿ ರಂಗಾಯಣ ರಘು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಜೇಮ್ಸ್' ಸಿನಿಮಾ ಸದ್ಯ ಸಣ್ಣ ಬ್ರೇಕ್ ತೆಗೆದುಕೊಂಡಿದ್ದು, ಜನವರಿ 6ರಿಂದ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವ ಸಾಧ್ಯತೆ ಇದೆ. ಅಂದಹಾಗೆ ಜೇಮ್ಸ್ ಸಿನಿಮಾದಲ್ಲಿ ರಾಜಕುಮಾರ ನಾಯಕಿ ಪ್ರಿಯಾ ಆನಂದ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

  ಇನ್ನು ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಶ್ರೀಕಾಂತ್, ಆದಿತ್ಯ ಮೆನನ್ ಮತ್ತು ಕನ್ನಡದ ನಟಿ ಅನು ಪ್ರಭಾಕರ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ಜೊತೆ ಮೊದಲ ಬಾರಿಗೆ ನಟಿಸುತ್ತಿರುವ ಅನು ಪ್ರಭಾಕರ್ ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಸದ್ಯ ಅಪ್ಪು ಅಭಿಮಾನಿಗಳು ಯುವರತ್ನ ಸಿನಿಮಾವನ್ನು ಸ್ವಾಗತ ಮಾಡಲು ರೆಡಿಯಾಗಿದ್ದಾರೆ. ಬಹುನಿರೀಕ್ಷೆಯ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ರಿಲೀಸ್ ಆಗಲಿದೆ.

  English summary
  Actor Rangayana Raghu has joined the shooting of Puneeth Rajkumar's James Movie, directed by Bahadur Chetan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X